ಧಾರಾವಾಹಿ : ಲಕ್ಷಣ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರಾತ್ರಿ ಮಲಗಿದ್ದ ಚಂದ್ರಶೇಖರ್ ಅಪಹರಣ ಮಾಡಿ ಕಿಡ್ನಾಪ್ ಮಾಡಿದವರೇ ನಕ್ಷತ್ರಳಿಗೆ ವಿಡಿಯೋ ಕಾಲ್ ಮಾಡಿ ವಿಷಯ ತಿಳಿಸುತ್ತಾರೆ. ಹೇಗೆ ಕಿಡ್ನಾಪ್ ಆಗಿದೆ ಎಂಬ ಯಾವ ಸುಳಿವು ಸಿಗದಿದ್ದಾಗ, ಇದು ಮೌರ್ಯನದ್ದೇ ಕೆಲಸ ಎಂದು ಭೂಪತಿ ಅಂದುಕೊಳ್ಳುತ್ತಾನೆ.
ಮೌರ್ಯನ ಹೆಸರಿನಲ್ಲಿ ಕಾದಿದೆ ದೊಡ್ಡ ಅಪಾಯ
ಕಿಡ್ನಾಪ್ ಆಗಿರುವ ಚಂದ್ರಶೇಖರ್ ಅವರನ್ನು ಹುಡುಕಲು ಭೂಪತಿ ಮತ್ತು ನಕ್ಷತ್ರ ತೆರಳುತ್ತಾರೆ ಹಾಗೂ ಪೋಲಿಸರಿಗೂ ತಾವಿರುವ ಸ್ಥಳಕ್ಕೆ ಬಂದು ಸಿ.ಎಸ್ ಹುಡುಕಲು ಸಹಾಯ ಕೇಳುತ್ತಾನೆ. ಹೀಗೆ ಹುಡುಕಾಟದಲ್ಲಿರುವಾಗ ನಕ್ಷತ್ರಳಿಗೆ ಅಪರಿಚಿತ ಕರೆಯೊಂದು ಬರುತ್ತದೆ. ವಿಡಿಯೋ ಕಾಲ್ ರಿಸೀವ್ ಮಾಡಿದಾಗ ಅಲ್ಲಿ ಸಿ.ಎಸ್‌ನ್ನು ಒಂದು ಮರಕ್ಕೆ ಕಟ್ಟಿ ಹಾಕಿ ಅವರ ಮೈ ಮೇಲೆ ಪಟಾಕಿಯನ್ನು ಸುತ್ತಲಾಗಿತ್ತು.
ಈ ದೃಶ್ಯವನ್ನು ಕಂಡು ಭಯಗೊಂಡ ನಕ್ಷತ್ರ ಆದಷ್ಟು ಬೇಗ ಆ ಜಾಗಕ್ಕೆ ಹೋಗುವಂತೆ ಭೂಪತಿಗೆ ಹೇಳುತ್ತಾಳೆ. ಲೈವ್ ಲೊಕೇಷನ್ ಕಳಿಸಿ ಪೋಲಿಸರಿಗೂ ಅದೇ ಜಾಗಕ್ಕೆ ಬರಲು ಹೇಳುತ್ತಾರೆ. ಹೇಗೋ ಸಿ.ಎಸ್‌ನ್ನು ಕಟ್ಟಿ ಹಾಕಿದ್ದ ಸ್ಥಳಕ್ಕೆ ಭೂಪತಿ, ನಕ್ಷತ್ರ ಹಾಗೂ ಪೋಲಿಸರು ಬರುತ್ತಾರೆ.
ಮರಕ್ಕೆ ಕಟ್ಟಿ ಹಾಕಿದ್ದ ಚಂದ್ರಶೇಖರ್‌ನ್ನು ಬಿಡಿಸಲು ಅಂತ ಇವರೆಲ್ಲ ಹೋಗುವಾಗ ಆಚೆ ಕಡೆಯಿಂದ ಯಾರೋ ಒಬ್ಬ ಅಪರಿಚಿತ ಬಂದು ಪಟಾಕಿಗೆ ಬೆಂಕಿ ಹಚ್ಚುತ್ತಾರೆ. ಮೌರ್ಯನೇ ಆ ವ್ಯಕ್ತಿ ಅಂತ ತಿಳಿದು ಭೂಪತಿ ಹಾಗೂ ಪೋಲಿಸರು ಅತಿರೇಕದ ಕೆಲಸ ಮಾಡಬೇಡ ಎಂದು ಹೇಳಿದರೂ ಕೇಳದೆ ಬೆಂಕಿ ಹಚ್ಚೇ ಬಿಟ್ಟು ಓಡಿ ಹೋಗುತ್ತಾನೆ. ಭೂಪತಿ ಹಚ್ಚಿದ ಪಟಾಕಿಯನ್ನು ಆರಿಸಿ ಸಿ.ಎಸ್ ಅವರನ್ನು ಕಾಪಡುತ್ತಾನೆ.
ತಂದೆಯ ಪರಿಸ್ಥಿತಿಯನ್ನು ಕಂಡು ಕಣ್ಣೀರಿಡುತ್ತಾಳೆ ನಕ್ಷತ್ರ. ಪೋಲಿಸರು ಮೌರ್ಯನೇ ಆ ವ್ಯಕ್ತಿ ಆಗಿರಬಹುದೆಂದು ಅವನನ್ನು ಹಿಡಿಯಲು ಹೋದಾಗ ಮಿಲ್ಲಿಯು ಕಾರ್‌ನಲ್ಲಿ ಬಂದು ಆ ವ್ಯಕ್ತಿಯನ್ನು ರಕ್ಷಿಸುತ್ತಾಳೆ. ಇದನ್ನು ನೋಡಿದ ಭೂಪತಿ, ಈ ಮೌರ್ಯನಿಗೆ ಹೊರಗಿನ ಯಾರೋ ವ್ಯಕ್ತಿ ಸಹಾಯ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಅಸಲಿಗೆ ಚಂದ್ರಶೇಖರ್‌ನ್ನು ಅಪಹರಣ ಮಾಡಿದ್ದು ಮೌರ್ಯ ಅಲ್ಲ. ಬದಲಾಗಿ ಮೌರ್ಯನ ಹೆಸರಿಟ್ಟುಕೊಂಡು ಭಾರ್ಗವಿ ಮಾಡಿದ ಕೆಲಸ. ಆದರೆ ಎಲ್ಲರ ಕಣ್ಣಲ್ಲೂ ಮೌರ್ಯ ತಪ್ಪಿತಸ್ಥನಾಗಿದ್ದಾನೆ. ಮೌರ್ಯನಿಗೂ ಒಂದು ಕ್ಷಣ ಶಾಕ್ ಆಗುತ್ತೆ. ನನ್ನ ಹೆಸರನ್ನು ಬಳಸಿ ಆ ಡೆವಿಲ್ ಇಷ್ಟು ಚೀಪ್ ಗಿಮಿಕ್ ಮಾಡುತ್ತಿದ್ದಾಳಾ ಎಂದು. ಮತ್ತೆ ನನ್ನನ್ನು ಯಾಕೆ ಜೈಲಿಂದ ಬಿಡಿಸಿದ್ದಾಳೆ ಎಂದು ಮೌರ್ಯನಿಗೆ ಪ್ರಶ್ನೆ ಮೂಡುತ್ತದೆ.
ಇದನ್ನು ಓದಿ: Lakshana Serial: ಚಂದ್ರಶೇಖರ್ ಕಿಡ್ನಾಪ್, ಆತಂಕದಲ್ಲಿ ಮಗಳು ನಕ್ಷತ್ರ
ಮೌರ್ಯ ಹೆಸರಿನಲ್ಲಿ ತನ್ನ ಕಾರ್ಯವನ್ನು ಸಾಧಿಸಲು ಭಾರ್ಗವಿ ಮಾಡಿದ ಕೆಲಸ ಇದಾಗಿದೆ. ಇನ್ನು ಮುಂದೆ ಏನೇ ಆದರೂ ಅದಕ್ಕೆ ಹೊಣೆ ಮೌರ್ಯನೇ ಆಗಿರುತ್ತಾನೆ ಹೊರತು ನಾನಾಗಿರುವುದಿಲ್ಲ. ಎಲ್ಲರ ಅನುಮಾನವೂ ಆತನ ಮೇಲೇಯೇ ಇರುತ್ತೆ. ಹೆಸರು ಮೌರ್ಯನದ್ದು, ಕೆಲಸ ನನ್ನದು ಅಂತ ಭಾರ್ಗವಿ ತನ್ನಲೇ ಹೇಳಿಕೊಂಡು ನಗುತ್ತಾಳೆ. ತನ್ನ ಗಂಡನಿಗೆ ಯಾಕೆ ಹೀಗೆ ಆಗುತ್ತಿದೆ ಎಂಬ ಆರತಿಯ ಚಡಪಡಿಕೆಯನ್ನು ನೋಡಿ, ನೀನು ನಿನ್ನ ಗಂಡ ಮಗಳು ಇನ್ನು ನರಕ ಅನುಭವಿಸುವುದು ತುಂಬಾನೇ ಇದೆ. ಇದು ಬರಿ ಪ್ರಾರಂಭ ಅಷ್ಟೆ. ಇಷ್ಟಕ್ಕೆಲ್ಲ ಹೀಗೆ ಭಯ ಬಿದ್ದರೆ ಮುಂದೆ ಕೊಡುವ ಏಟನ್ನು ಹೇಗೆ ತಡಯುತ್ತೀರಾ ಎಂದು ಮನದಲ್ಲೇ ಆರತಿಯನ್ನು ಪ್ರಶ್ನಿಸುತ್ತಾಳೆ ಭಾರ್ಗವಿ.
ಅಪ್ಪ ಸೇಫ್ ಆಗಿ ಇದ್ದಾರೆ ಅಂತ ನಕ್ಷತ್ರ ಆರತಿಗೆ ಹೇಳುತ್ತಾಳೆ. ಇದರಿಂದ ಸ್ವಲ್ಪ ನಿರಾಳವಾದ ಆರತಿ ದೇವರು ದೊಡ್ಡವನು ಭಾರ್ಗವಿ ನಿನ್ನ ಅಣ್ಣನನ್ನು ಕಾಪಾಡಿ ಬಿಟ್ಟ ಎಂದು ಹೇಳುತ್ತಾಳೆ. ಇದಕ್ಕೆ ಎದುರಿಗೆ ತಲೆಯಾಡಿಸಿದರೂ ಮನಸ್ಸಿನಲ್ಲಿ ದೇವರು ಯಾರು, ನಾನು ಪಾಪ ಹೋಗಲಿ ಬಿಡಿ ಎಂದಿದ್ದಕ್ಕೆ ನಿನ್ನ ಗಂಡ ಬದುಕಿದ್ದಾನೆ. ನಿಮ್ಮ ಪಾಲಿನ ದೇವರು ನಾನೇ, ದೈವನೂ ನಾನೇ ಎಂದು ಮಾತನಾಡಿಕೊಳ್ಳುತ್ತಾಳೆ. ಮೌರ್ಯನ ಹೆಸರಲ್ಲಿ ಚಂದ್ರಶೇಖರ್ ಕುಟುಂಬಕ್ಕೆ ಇನ್ನು ಯಾವೆಲ್ಲಾ ಕಷ್ಟವನ್ನು ಭಾರ್ಗವಿ ತಂದೊಡ್ಡುತ್ತಾಳೆ ಎಂಬುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್
Published On - 10:22 am, Sat, 19 November 22