ದೊಡ್ಮನೆ ಸ್ಪರ್ಧಿಗಳ ಹೋರಾಟ ವ್ಯರ್ಥ; ಕ್ಯಾಪ್ಟನ್ಸಿ ಟಾಸ್ಕ್ ರದ್ದು ಮಾಡಿದ ಬಿಗ್ ಬಾಸ್

‘ಒಮ್ಮತದ ನಿರ್ಧಾರ ಬಂದಿಲ್ಲ. ಹೀಗಾಗಿ, ನಿಮಗೆ ಆಯ್ಕೆ ನೀಡುತ್ತಿದ್ದೇವೆ’ ಎಂದು ಸ್ಪರ್ಧಿಗಳು ಬಿಗ್ ಬಾಸ್​ಗೆ ಹೇಳಿದರು. ಬಿಗ್ ಬಾಸ್ ಇದಕ್ಕೆ ಟ್ವಿಸ್ಟ್ ಕೊಟ್ಟರು.

ದೊಡ್ಮನೆ ಸ್ಪರ್ಧಿಗಳ ಹೋರಾಟ ವ್ಯರ್ಥ; ಕ್ಯಾಪ್ಟನ್ಸಿ ಟಾಸ್ಕ್ ರದ್ದು ಮಾಡಿದ ಬಿಗ್ ಬಾಸ್
ಕಿಚ್ಚ ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 18, 2022 | 10:21 PM

ಬಿಗ್ ಬಾಸ್​ನಲ್ಲಿ (Bigg Boss) ಪ್ರತಿ ವಾರ ಕ್ಯಾಪ್ಟನ್ಸಿ ಟಾಸ್ಕ್ ಇರುತ್ತದೆ. ಈ ಟಾಸ್ಕ್​ಗೆ ಸ್ಪರ್ಧಿಗಳ​ ಆಯ್ಕೆ ಮಾಡಲು ಮನೆ ಮಂದಿಗೆ ನಾನಾ ಟಾಸ್ಕ್​ ನೀಡಲಾಗುತ್ತದೆ. ಕ್ಯಾಪ್ಟನ್ ಆದ್ರೆ ಸ್ಪರ್ಧಿಗಳಿಗೆ ಇಮ್ಯೂನಿಟಿ ಸಿಗುತ್ತದೆ. ಈ ಮೂಲಕ ಸ್ಪರ್ಧಿಗಳು ಎಲಿಮಿನೇಷನ್​ಗೆ ನಾಮಿನೇಟ್ ಆಗದೆ ಒಂದು ವಾರ ಉಳಿದುಕೊಳ್ಳಬಹುದು. ಆದರೆ, ಈ ವಾರ ಬಿಗ್ ಬಾಸ್​ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ ಕ್ಯಾನ್ಸಲ್ ಆಗಿದೆ! ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಅಪರೂಪದ ನಿರ್ಧಾರ ಹೊರ ಬಿದ್ದಿದೆ.

ಈ ಬಾರಿ ಎರಡು ಟೀಂ ಮಾಡಿ ಟಾಸ್ಕ್ ಆಡಿಸಲಾಗಿತ್ತು. ಈ ಆಟದ ವೇಳೆ ಸಾಕಷ್ಟು ಕಿತ್ತಾಟ ಆಗಿದೆ. ಕೆಲವರು ಮೈಕೈಗೆ ಗಾಯ ಮಾಡಿಕೊಂಡಿದ್ದಾರೆ. ಅರುಣ್ ಸಾಗರ್ ಅವರ ಬೆರಳು ಮುರಿದಿದೆ. ಅನೇಕ ಬಾರಿ ರೂಲ್ಸ್ ಬ್ರೇಕ್ ಆಗಿದೆ. ಈ ಕಾರಣಕ್ಕೆ ಆಟವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎರಡೂ ಟೀಂಗಳು ಸಮಬಲ ಸಾಧಿಸಿದ್ದವು. ಹೀಗಾಗಿ, ಕ್ಯಾಪ್ಟನ್ಸಿ ಟಾಸ್ಕ್​ಗೆ ಯಾವ ತಂಡಗಳೂ ಆಯ್ಕೆ ಆಗಿರಲಿಲ್ಲ. ಈ ಕಾರಣಕ್ಕೆ ಬಿಗ್ ಬಾಸ್ ಹೊಸ ಘೋಷಣೆ ಮಾಡಿದರು.

‘ಎರಡೂ ತಂಡಗಳು ಸಮಬಲ ಸಾಧಿಸಿವೆ. ಹೀಗಾಗಿ ಪ್ರತಿ ತಂಡದಿಂದ ಒಬ್ಬರನ್ನು ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಮಾಡಿ’ ಎಂದು ಬಿಗ್ ಬಾಸ್​ ಸೂಚಿಸಿದರು. ಆದರೆ, ಒಮ್ಮತದ ನಿರ್ಧಾರ ಬರಲೇ ಇಲ್ಲ. ಈ ಕಾರಣಕ್ಕೆ ಬಿಗ್ ಬಾಸ್ ಎದುರು ಸ್ಪರ್ಧಿಗಳು ಬೇಡಿಕೆ ಇಟ್ಟರು. ‘ಒಮ್ಮತದ ನಿರ್ಧಾರ ಬಂದಿಲ್ಲ. ಹೀಗಾಗಿ, ನಿಮಗೆ ಆಯ್ಕೆ ನೀಡುತ್ತಿದ್ದೇವೆ’ ಎಂದು ಸ್ಪರ್ಧಿಗಳು ಬಿಗ್ ಬಾಸ್​ಗೆ ಹೇಳಿದರು.

ಬಿಗ್ ಬಾಸ್ ಯಾರಿಗಾದರೂ ಅವಕಾಶ ನೀಡಬಹುದು ಎಂದು ಸ್ಪರ್ಧಿಗಳು ಭಾವಿಸಿದ್ದರು. ಆದರೆ, ಅದು ಉಲ್ಟಾ ಹೊಡೆದಿತ್ತು. ‘ಒಮ್ಮತದ ನಿರ್ಧಾರ ಬರದ ಕಾರಣ ಈ ವಾರ ಯಾವುದೇ ಕ್ಯಾಪ್ಟನ್ಸಿ ಟಾಸ್ಕ್ ಇರುವುದಿಲ್ಲ. ಹೀಗಾಗಿ ಮುಂದಿನ ವಾರಕ್ಕೆ ಯಾರೂ ಕ್ಯಾಪ್ಟನ್ ಇರುವುದಿಲ್ಲ. ಯಾರಿಗೂ ಇಮ್ಯೂನಿಟಿ ಇರುವುದಿಲ್ಲ’ ಎಂದರು ಬಿಗ್ ಬಾಸ್.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಕ್ರಾ ಆದ ರೂಪೇಶ್ ರಾಜಣ್ಣ; ಅವರ ಪಾಡು ಯಾರಿಗೂ ಬೇಡ

ಇದರಿಂದ ಮನೆಯವರಿಗೆ ಅನೇಕರಿಗೆ ಖುಷಿ ಆಗಿದೆ. ‘ಇನ್ನು ಮುಂದೆ ಒಂದು ವಾರಗಳ ಕಾಲ ನಾವೆಲ್ಲರೂ ಸಮಾನರು. ಇದು ಖುಷಿಯ ವಿಚಾರ’ ಎಂದರು ಅರುಣ್ ಸಾಗರ್.

Published On - 9:56 pm, Fri, 18 November 22