AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಕ್ರಾ ಆದ ರೂಪೇಶ್ ರಾಜಣ್ಣ; ಅವರ ಪಾಡು ಯಾರಿಗೂ ಬೇಡ

ಈ ವಾರ ಗೊಂಬೆ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​​ ಆಡುವ ವೇಳೆ ರೂಪೇಶ್ ರಾಜಣ್ಣ ಅವರು ಚಿನ್ನದ ಉಂಗುರ ಹಾಗೂ ಬ್ರೆಸ್​ಲೆಟ್​ ಅನ್ನು ಕಳೆದುಕೊಂಡಿದ್ದರು. ಇದು ರೂಪೇಶ್ ಶೆಟ್ಟಿಗೆ ಸಿಕ್ಕಿತ್ತು.

ಬಿಗ್ ಬಾಸ್ ಮನೆಯಲ್ಲಿ ಮತ್ತೆ ಬಕ್ರಾ ಆದ ರೂಪೇಶ್ ರಾಜಣ್ಣ; ಅವರ ಪಾಡು ಯಾರಿಗೂ ಬೇಡ
ರೂಪೇಶ್ ರಾಜಣ್ಣ
TV9 Web
| Edited By: |

Updated on: Nov 17, 2022 | 9:55 PM

Share

ರೂಪೇಶ ರಾಜಣ್ಣ (Roopesh Rajanna) ಅವರು ಬಿಗ್ ಬಾಸ್ (Bigg Boss) ಮನೆಯಲ್ಲಿ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಕೆಲವೊಮ್ಮೆ ಮುಗ್ಧರಂತೆ ನಡೆದುಕೊಳ್ಳುವುದು ಅನೇಕರಿಗೆ ಇಷ್ಟವಾಗುತ್ತಿದೆ. ಕೆಲ ವಾರಗಳ ಹಿಂದೆ ರೂಪೇಶ್ ರಾಜಣ್ಣ ಅವರನ್ನು ಸಾನ್ಯ ಐಯ್ಯರ್ ಕುರಿ ಮಾಡಿದ್ದರು. ಆ ಎಪಿಸೋಡ್ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿತ್ತು. ಈಗ ಬಕ್ರಾ ಪ್ರೋಗ್ರಾಂ ಮತ್ತೆ ಮುಂದುವರಿದಿದೆ. ಈ ಬಾರಿ ರೂಪೇಶ್ ರಾಜಣ್ಣ ಮತ್ತೆ ಕುರಿ ಆಗಿದ್ದಾರೆ.

ಈ ವಾರ ಗೊಂಬೆ ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​​ ಆಡುವ ವೇಳೆ ರೂಪೇಶ್ ರಾಜಣ್ಣ ಅವರು ಚಿನ್ನದ ಉಂಗುರ ಹಾಗೂ ಬ್ರೆಸ್​ಲೆಟ್​ ಅನ್ನು ಕಳೆದುಕೊಂಡಿದ್ದರು. ಇದು ರೂಪೇಶ್ ಶೆಟ್ಟಿಗೆ ಸಿಕ್ಕಿತ್ತು. ಅಮೂಲ್ಯ ವಸ್ತು ಕಳೆದುಕೊಂಡಿದ್ದು ರೂಪೇಶ್ ರಾಜಣ್ಣ ಅವರಿಗೆ ಸಾಕಷ್ಟು ಬೇಸರ ತರಿಸಿತ್ತು. ಮನೆಯಲ್ಲಿ ಅವರು ಎಲ್ಲ ಕಡೆಗಳಲ್ಲಿ ಹುಡುಕಾಟ ನಡೆಸಿದ್ದರು.

ಈ ಸಂದರ್ಭಕ್ಕೆ ಸರಿಯಾಗಿ ರೂಪೇಶ್ ಶೆಟ್ಟಿ ಬಂದು ರೂಪೇಶ್ ರಾಜಣ್ಣ ಕಿವಿಯಲ್ಲಿ ಕೆಲ ವಿಚಾರ ಹೇಳಿದ್ದಾರೆ. ‘ರೂಪೇಶ್ ರಾಜಣ್ಣ ಅವರೇ ಹೀಗೆಲ್ಲ ಮಾಡಿದ್ರೆ ಸಿಗಲ್ಲ. ಬಿಗ್ ಬಾಸ್ ಎಲ್ಲವನ್ನೂ ನೋಡ್ತಾ ಇರ್ತಾರೆ. ಅವರಿಗೆ ಉಂಗುರ ಎಲ್ಲಿದೆ ಅನ್ನೋದು ಗೊತ್ತಿರುತ್ತದೆ. ಅವರ ಬಳಿ ಗಂಭೀರವಾಗಿ ಬೇಡಿಕೊಳ್ಳಿ’ ಎಂದರು. ಇದನ್ನು ನಂಬಿದ ರೂಪೇಶ್ ರಾಜಣ್ಣ ಅವರು ತುಂಬಾನೇ ಗಂಭೀರವಾಗಿ ಕುಳಿತು, ಕೈ ಮುಗಿದು ಬೇಡಿಕೊಂಡರು. ಬಿಗ್ ಬಾಸ್​ನ ಖುಷಿಪಡಿಸಲು ಉರುಳುಸೇವೆ ಕೂಡ ಮಾಡಿದರು. ಆದರೆ, ಬಿಗ್ ಬಾಸ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಈ ವಿಚಾರದಲ್ಲಿ ಆರ್ಯವರ್ಧನ್​ ಗುರೂಜಿ ಕೂಡ ಸೇರಿಕೊಂಡರು. ತಮ್ಮ ದಿವ್ಯ ಶಕ್ತಿಯಿಂದ ಉಂಗುರ ಹಾಗೂ ಬ್ರೆಸ್​ಲೆಟ್ ಎಲ್ಲಿದೆ ಎಂಬುದನ್ನು ಕಂಡು ಹಿಡಿಯುತ್ತೇನೆ ಎಂದು ಹೇಳಿದರು ಆರ್ಯವರ್ಧನ್​. ಅಡುಗೆ ಮನೆಯಿಂದ ಮೆಣಸಿನ ಕಾಯಿ, ಆಲೂಗಡ್ಡೆ ಮತ್ತಿತರ ತರಕಾರಿ ತಂದು ಮಂತ್ರ ಮಾಡುವ ರೀತಿ ಮಾಡಿದರು. ಇದೇ ಸಂದರ್ಭಕ್ಕೆ ಸರಿಯಾಗಿ ರೂಪೇಶ್ ಶೆಟ್ಟಿ ಗಾರ್ಡನ್ ಏರಿಯಾದಲ್ಲಿ ಉಂಗುರ ಹಾಗೂ ಬ್ರೆಸ್​ಲೆಟ್ ಅನ್ನು ಅಡಗಿಸಿಟ್ಟು ಬಂದರು. ಗುರೂಜಿ ಅದೇ ಜಾಗವನ್ನು ಸರಿಯಾಗಿ ನೋಡಿ ಆಲೂಗಡ್ಡೆ ಎಸೆದರು.

ಇದನ್ನೂ ಓದಿ: ರೂಪೇಶ್ ರಾಜಣ್ಣ ಮಾಡಿದ ನೋವಿಗೆ ಭಿನ್ನವಾಗಿ ಸೇಡು ತೀರಿಸಿಕೊಂಡ ದಿವ್ಯಾ ಉರುಡುಗ

ಗುರೂಜಿ ಅವರ ಅದೃಷ್ಟ ಎಂಬಂತೆ ಉಂಗುರ ಹಾಗೂ ಬ್ರೆಸ್​ಲೆಟ್ ಇದ್ದ ಜಾಗಕ್ಕೆ ಆಲೂಗಡ್ಡೆ ಹೋಗಿ ನಿಂತಿತು. ಅಲ್ಲಿ ಹುಡುಕಿ ಎಂದು ಗುರೂಜಿ ಹೇಳಿದರು. ಹೋಗಿ ಹುಡುಕಿದಾಗ ರೂಪೇಶ್ ರಾಜಣ್ಣ ಕಳೆದುಕೊಂಡ ವಸ್ತುಗಳು ಸಿಕ್ಕವು. ಇದೊಂದು ಪವಾಡ ಎಂದೇ ರೂಪೇಶ್ ರಾಜಣ್ಣ ಭಾವಿಸಿದ್ದಾರೆ. ಈ ಮೂಲಕ ಮತ್ತೆ ಕುರಿ ಆಗಿದ್ದಾರೆ ಅವರು.

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್