AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭುವಿಯ ಒಳ್ಳೆಯತನ ದುರ್ಬಳಕೆ; ಇನ್ನಾದರೂ ಬುದ್ಧಿ ಕಲಿಯುತ್ತಾಳಾ ಹರ್ಷನ ಹೆಂಡತಿ?

ಭುವಿ ಹೆಸರಿಗೆ ವಿಲ್ ಬರೆದು ರತ್ನಮಾಲಾ ಮೃತಪಟ್ಟಿದ್ದಾಳೆ. ಒಂದು ಲಕೋಟೆ ನೀಡಿ ಅದನ್ನು ತಾನು ಸತ್ತ ನಂತರ ತೆಗೆಯುವಂತೆ ಸೂಚಿಸಿದ್ದಳು ರತ್ನಮಾಲಾ. ಈ ಲಕೋಟೆಯ ಹುಡುಕಾಟಕ್ಕಾಗಿ ವರುಧಿನಿ ಭುವಿ ಮನೆಗೆ ಬಂದಿದ್ದಳು. ವರುಧಿನಿ ಭೇಟಿ ಆದಾಗ  ಆ ಬಗ್ಗೆ  ಭುವಿ ಪ್ರಶ್ನೆ ಮಾಡಿದ್ದಾಳೆ.

ಭುವಿಯ ಒಳ್ಳೆಯತನ ದುರ್ಬಳಕೆ; ಇನ್ನಾದರೂ ಬುದ್ಧಿ ಕಲಿಯುತ್ತಾಳಾ ಹರ್ಷನ ಹೆಂಡತಿ?
ಭುವಿ
TV9 Web
| Edited By: |

Updated on: Nov 19, 2022 | 7:00 AM

Share

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
Image
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರದಲ್ಲಿ ಸಾನಿಯಾಗೆ ಆಸ್ತಿ ಚಿಂತೆ; ಜೋರಾಗಿ ನಕ್ಕೇ ಬಿಟ್ಟಳು ವರುಧಿನಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾಳನ್ನು ಅಂತ್ಯ ಸಂಸ್ಕಾರ ಮಾಡಿ ಬಂದ ನಂತರದಲ್ಲಿ ಮನೆಯಲ್ಲಿ ಎಲ್ಲರಲ್ಲೂ ದುಃಖ ಆವರಿಸಿದೆ. ಹರ್ಷ ನಿಧಾನವಾಗಿ ಬೇಸರದಿಂದ ಹೊರ ಬರುತ್ತಿದ್ದಾನೆ. ಮತ್ತೊಂದು ಕಡೆಯಲ್ಲಿ ವರುಧಿನಿ ಸಂಚು ರೂಪಿಸುವ ಕೆಲಸ ಮಾಡುತ್ತಿದ್ದಾಳೆ. ಆದರೆ, ಅವಳ ಮೊದಲ ಸಂಚು ಕೈಕೊಟ್ಟಿದೆ. ಇದರಿಂದ ಆಕೆ ಕೋಪಗೊಂಡಿದ್ದಾಳೆ.

ಭುವಿಗೆ ವರುಧಿನಿ ಮೋಸ

ಭುವಿ ಹಾಗೂ ವರುಧಿನಿ ಚಿಕ್ಕ ವಯಸ್ಸಿನಿಂದ ಗೆಳತಿಯರು. ಇವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಆದರೆ, ಹರ್ಷನ ವಿಚಾರದಲ್ಲಿ ಭುವಿ ಬಗ್ಗೆ ವರು ದ್ವೇಷ ಬೆಳೆಸಿಕೊಂಡಳು. ತನ್ನ ಹೀರೋನ ಭುವಿ ಮದುವೆ ಆಗಿದ್ದಾಳೆ ಎನ್ನುವ ಬೇಸರ ವರುಧಿನಿಯನ್ನು ಕಾಡುತ್ತಿದೆ. ತನ್ನ ಹೀರೋನ ಪಡೆದುಕೊಳ್ಳಲು ಆಕೆ ಹಲವು ಪ್ಲ್ಯಾನ್​ಗಳನ್ನು ಮಾಡುತ್ತಿದ್ದಾಳೆ. ಈಗ ಭುವಿಗೆ ಮೋಸ ಮಾಡುತ್ತಾ ಹರ್ಷನನ್ನು ಪಡೆಯಲು ಆಕೆ ಸಂಚು ರೂಪಿಸಿದ್ದಾಳೆ.

ಭುವಿ ಹೆಸರಿಗೆ ವಿಲ್ ಬರೆದು ರತ್ನಮಾಲಾ ಮೃತಪಟ್ಟಿದ್ದಾಳೆ. ಒಂದು ಲಕೋಟೆ ನೀಡಿ ಅದನ್ನು ತಾನು ಸತ್ತ ನಂತರ ತೆಗೆಯುವಂತೆ ಸೂಚಿಸಿದ್ದಳು ರತ್ನಮಾಲಾ. ಈ ಲಕೋಟೆಯ ಹುಡುಕಾಟಕ್ಕಾಗಿ  ಭುವಿ ಮನೆಗೆ ವರುಧಿನಿ ಬಂದಿದ್ದಳು. ವರುಧಿನಿ ಭೇಟಿ ಆದಾಗ  ಆ ಬಗ್ಗೆ  ಭುವಿ ಪ್ರಶ್ನೆ ಮಾಡಿದ್ದಾಳೆ.

ಭುವಿ ತುಂಬಾ ಒಳ್ಳೆಯವಳು. ಆಕೆಯ ಒಳ್ಳೆಯ ಗುಣವನ್ನು ದುರ್ಬಳಕೆ ಮಾಡಿಕೊಳ್ಳಲು ವರು ಪ್ಲ್ಯಾನ್ ರೂಪಿಸಿದ್ದಾಳೆ. ಇದು ಭುವಿಗೆ ತಿಳಿಯುತ್ತಿಲ್ಲ. ಇನ್ನು  ವರುಧಿನಿಯ ಬಗ್ಗೆ ಆಕೆಗೆ ಕನಿಕರ ಮನೋಭಾವನೆ ಇದೆ. ಇದು ಬದಲಾಗಬೇಕು ಎಂಬುದು ವೀಕ್ಷಕರ ಕೋರಿಕೆ. ವರುಧಿನಿ ಮನೆಗೆ ಬಂದು ಶೋಧಕಾರ್ಯ ನಡೆಸಿದ ವಿಚಾರ ಭುವಿಗೆ ತಿಳಿದಿದೆ. ಆಕೆಯ ತಂಗಿ ಬಿಂದು ಈ ವಿಚಾರವನ್ನು ಹೇಳಿದ್ದಾಳೆ. ಈ ವಿಚಾರದಲ್ಲಿ ಭುವಿ ಎಚ್ಚೆತ್ತುಕೊಳ್ಳಬೇಕಿದೆ. ವರುಧಿನಿಗೆ ಭುವಿ ತಕ್ಕ ಪಾಠ ಕಲಿಸುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

ಕ್ಷಮೆ ಕೇಳಿದ ಹರ್ಷ

ಸೌಪರ್ಣಿಕಾ ಹೆಸರಿನ ಯುವತಿಯನ್ನು ಹರ್ಷ ಕರೆತಂದಿದ್ದ. ಆಕೆಯನ್ನು ಕೊಲ್ಲಿಸೋಕೆ ಸಾನಿಯಾ ಪ್ಲ್ಯಾನ್ ಮಾಡಿದ್ದಳು. ಈ ವಿಚಾರದಲ್ಲಿ ಹರ್ಷನಿಗೆ ಬೇಸರ ಇದೆ. ರತ್ನಮಾಲಾ ಮೃತಪಟ್ಟ ನಂತರದಲ್ಲಿ ಹರ್ಷನಿಗೆ ಸೌಪರ್ಣಿಕಾ ಭೇಟಿ ಆಗಿದೆ. ಆಕೆಯ ಬಳಿ ಕ್ಷಮೆ ಕೇಳಿದ್ದಾನೆ. ಆದರೆ, ಆಕೆ ಮಾತ್ರ ಸುಮ್ಮನಾಗಿಲ್ಲ. ಹರ್ಷನ ವಿರುದ್ಧ ಕೂಗಾಡಿದ್ದಾಳೆ. ಈ ವಿಚಾರವನ್ನು ಭುವಿ ಕೇಳಿಳಿಸಿಕೊಂಡಿದ್ದಾಳೆ. ಆಕೆಗೆ ಹರ್ಷ ಹಾಗೂ ಸೌಪರ್ಣಿಕಾ ಅವರ ಸಂಭಾಷಣೆ ಭಯ ಮೂಡಿಸಿದೆ.

ಸಾನಿಯಾಗೆ ಎಂಡಿ ಪಟ್ಟ!

ಸಾನಿಯಾ ಎಂಡಿ ಪಟ್ಟವನ್ನು ಕಳೆದುಕೊಂಡು ಒಂಟಿಯಾಗಿದ್ದಾಳೆ. ಆಕೆಯ ಬೆಂಬಲಕ್ಕೆ ಯಾರೂ ಇಲ್ಲದಂತೆ ಆಗಿದೆ. ಈ ವಿಚಾರದಲ್ಲಿ ಆಕೆಗೆ ಸಿಟ್ಟಿದೆ. ವರುಧಿನಿಯು ಸೌಪರ್ಣಿಕಾ ಜತೆ ಮಾತನಾಡಿದ್ದನ್ನು ಸಾನಿಯಾ ಕೇಳಿಸಿಕೊಂಡಿದ್ದಾಳೆ. ಈ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಾಳೆ ಸಾನಿಯಾ. ಆದರೆ, ಇದಕ್ಕೆ ವರುಧಿನಿ ಉತ್ತರ ಹೇಳಿಲ್ಲ. ‘ನಾನು ಪ್ಲ್ಯಾನ್ ಮಾಡ್ತಾ ಇದೀನಿ. ಈ ಪ್ಲ್ಯಾನ್ ಯಶಸ್ಸು ಕಂಡರೆ ನಿಮಗೆ ಲಾಭ ಇದೆ. ನನಗೆ ನನ್ನ ಹೀರೋ ಸಿಕ್ತಾನೆ. ನಿಮಗೆ ನಿಮ್ಮ ಎಂಡಿ ಪಟ್ಟ ಸಿಗುತ್ತದೆ’ ಎನ್ನುವ ಆಸೆಯನ್ನು ತೋರಿಸಿದ್ದಾರೆ ವರು. ಇದನ್ನು ಕೇಳಿ ಸಾನಿಯಾ ಸಖತ್ ಖುಷಿಪಟ್ಟಿದ್ದಾಳೆ. ಈ ವಿಚಾರದಲ್ಲಿ ವರುಧಿನಿಯನ್ನು ಬೆಂಬಲಿಸುವ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ.

ಈ ಮೊದಲು ಸಾನಿಯಾ ಹಾಗೂ ವರು ಒಟ್ಟಾಗಿ ಅನೇಕ ಪ್ಲ್ಯಾನ್ ಮಾಡಿದ್ದಾರೆ. ಇವುಗಳಲ್ಲಿ ಬಹುತೇಕ ಪ್ಲ್ಯಾನ್​ಗಳು ಫ್ಲಾಪ್​ ಆಗಿದ್ದವು. ಇದು ಇವರ ಕೈ ಹಿಡಿಯುತ್ತದೆಯೇ ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.

Follow Us
Web contact
Web contact

TV9 Kannada

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು