Honganasu Serial: ವಸುಧರಾನ ಮುಗಿಸಲು ಸುಪಾರಿ ಕೊಟ್ಟ ದೇವಯಾನಿ
Honganasu Serial Update: ವಸುಧರಾ ಮತ್ತು ಜಗತಿಗೆ ಸರಿಯಾಗಿ ಪಾಠ ಕಲಿಸಬೇಕೆಂದು ದೇವಯಾನಿ ಪ್ಲಾನ್ ಮಾಡಿದಳು. ಹಳೇ ರೌಡಿ ರಾಜೀವ್‌ಗೆ ಕಾಲ್ ಮಾಡಿ ವಸುಧರಾಳ ಕತೆ ಮುಗಿಸುವಂತೆ ಸುಪಾರಿ ಕೊಟ್ಟಳು.
ಧಾರಾವಾಹಿ: ಹೊಂಗನಸು
ಪ್ರಸಾರ: ಸ್ಟಾರ್ ಸುವರ್ಣ
ಸಮಯ: ಮಧ್ಯಾಹ್ನ 1.30
ನಿರ್ದೇಶನ: ಅನಿಲ್ ಆನಂದ್, ಕುಮಾರ್
ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.
ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?
ವಸುಗೆ ಮೆಸೇಜ್ ಕಳಿಸಿ ಮನೆಗೆ ಹೋಗಿ ನೋಡುವಂತೆ ಹೇಳಿದ ರಿಷಿ. ಏನು ಮೆಸೇಜ್ ಮಾಡಿದ್ದಾರೆ ಎನ್ನುವ ಕುತೂಹಲ ವಸುಗೆ ಹೆಚ್ಚಾಯಿತು. ಮನೆಗೆ ಹೋದವಳೇ ಮೆಸೇಜ್ ನೋಡಿದ ವಸುಗೆ ನಿರಾಸೆಯಾಯಿತು. ರಿಷಿ ಎಕ್ಸಾಮ್ ತಯಾರಿಗಾಗಿ ಪ್ರಶ್ನೆಗಳನ್ನು ಕಳುಹಿಸಿದ್ದ. ‘ಏನೋ ಮೆಸೇಜ್ ಮಾಡಿದ್ದಾರೆ ಅಂದುಕೊಂಡರೆ ಪ್ರಶ್ನೆಗಳನ್ನು ಕಳಿಸಿದ್ದಾರಲ್ಲ’ ಅಂತ ಬೈದುಕೊಂಡಳು.
ಕ್ಲಾಸ್ ಮುಗಿಸಿ ಹೊರಟಿದ್ದ ವಸುಧರಾಳನ್ನು ತಡೆದು ನಿಲ್ಲಿಸಿದ ರಿಷಿ. ‘ರಾತ್ರಿ ಎಲ್ಲಾ ಫೋನ್ ಬ್ಯುಸಿ ಬರ್ತಿತ್ತು, ಅಷ್ಟೊತ್ತಿಗೆ ಯಾರ್ ಜೊತೆ ಮಾತನಾಡುತ್ತಿದ್ದೆ’ ಎಂದು ಕೇಳಿದ ರಿಷಿ. ‘ನಿಮ್ಮ ಮನೆಯಿಂದನೇ ಫೋನ್ ಬಂದಿತ್ತು, ನಿಮ್ಮ ಅಮ್ಮನೇ ಮಾಡಿದ್ರು’ ಎಂದಳು ವಸು. ಅಮ್ಮ ಎಂದಿದ್ದಕ್ಕೆ ಕೋಪ ಮಾಡಿಕೊಂಡ ರಿಷಿಯನ್ನು ನೋಡಿ ತಕ್ಷಣ ‘ಜಗತಿ ಮೇಡಮ್ ಫೋನ್ ಮಾಡಿದ್ದರು’ ಎಂದಳು ವಸು.
ಮಹೇಂದ್ರ, ಜಗತಿ ಮತ್ತು ವಸುಧರಾಳನ್ನು ಕಾರಿನಲ್ಲಿ ಕರೆದುಕೊಂಡು ಹೊರಟ ರಿಷಿ. ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾನೆ ಅಂತ ಎಲ್ಲರಿಗೂ ಕುತೂಹಲ ಹೆಚ್ಚಾಯಿತು. ವಸುಧರಾ ರೂಮಿನ ಬಳಿ ಬಂದು ರಿಷಿ ಕಾರು ನಿಲ್ಲಿಸಿದ. ಇಲ್ಲಿಗೆ ಯಾಕೆ ಬಂದಿದ್ದು ಅಂತ ಮಹೇಂದ್ರ, ಜಗತಿ ಮತ್ತು ವಸು ಶಾಕ್ ಆದರು. ವಸುಧರಾಗೆ ಟ್ಯೂಷನ್ ಮಾಡಬೇಕು ಎಂದು ಜಗತಿಗೆ ಹೇಳಿದ ರಿಷಿ. ಸ್ಕಾಲರ್‌ಶಿಪ್ ಎಕ್ಸಾಮ್‌ಗೆ ವಸುನ ತಯಾರಿ ಮಾಡಬೇಕು ಇದು ನಿಮ್ಮ ಜವಾಬ್ದಾರಿ ಎಂದು ಜಗತಿಗೆ ವಹಿಸಿದ ರಿಷಿ. ಇದನ್ನು ಹೇಳಲು ಇಲ್ಲಿಗೆ ಕರೆದುಕೊಂಡು ಬರಬೇಕಿತ್ತಾ ಎಂದು ಮನಸ್ಸಲ್ಲೇ ಬೈದುಕೊಂಡ ಮಹೇಂದ್ರ.
ಮಹೇಂದ್ರ ಮತ್ತು ಜಗತಿ ಜೊತೆ ಮನೆಗೆ ಬಂದ ರಿಷಿಯನ್ನು ನೋಡಿ ದೇವಯಾನಿ ಶಾಕ್ ಆದಳು. ಜಗತಿಯಿಂದ ರಿಷಿಯನ್ನು ದೂರ ಮಾಡಿದ್ದ ದೇವಯಾನಿಗೆ ಇದೀಗ ಮತ್ತೆ ಎಲ್ಲರೂ ಒಟ್ಟಿಗೆ ಇರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ದೇವಯಾನಿ ಉರ್ಕೊಂಡಿದ್ದಾಳೆ ಎಂದು ಗೊತ್ತಿದ್ದೇ ಜಗತಿ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದಳು. ಜಗತಿ ಮಾತಿಗೆ ತಿರುಗೇಟು ಕೊಡಲು ಆಗದೆ ಅಲ್ಲಿಂದ ಹೊರಟಳು ದೇವಯಾನಿ. ವಸುಧರಾ ಮತ್ತು ಜಗತಿಗೆ ಸರಿಯಾಗಿ ಪಾಠ ಕಲಿಸಬೇಕೆಂದು ಪ್ಲಾನ್ ಮಾಡಿದಳು ದೇವಯಾನಿ. ಹಳೆ ರೌಡಿ ರಾಜೀವ್‌ಗೆ ಕಾಲ್ ಮಾಡಿ ವಸುಧರಾ ಕತೆ ಮುಗಿಸುವಂತೆ ಸುಪಾರಿ ಕೊಟ್ಟಳು.
ಬೆಳಗ್ಗೆ ಎದ್ದವನೇ ರಿಷಿ ವಸು ಮನೆಗೆ ಹೊರಟ. ದೇವಯಾನಿ ಎಲ್ಲಿಗೆ ಎಂದು ಕೇಳಿದರೂ ಕೆಲಸ ಇದೆ ಎಂದು ಹೇಳಿ ಹೊರಟ ರಿಷಿ. ವಸುಧರಾಳನ್ನು ಮನೆಗೆ ಕರೆದುಕೊಂಡು ಬಂದ. ರಿಷಿ ಜೊತೆ ವಸು ಕಾರಿನಲ್ಲಿ ಹೋಗಿದ್ದನ್ನು ನೋಡಿದ ರಾಜೀವ ಇನ್ನ ಕೆಲಸ ಆಯಿತು ಎಂದು ಕೊಂಡ. ವಸು ಜೊತೆ ಮನೆಗೆ ಬಂದ ರಿಷಿ ನೋಡಿ ದೇವಯಾನಿ ಕೋಪ ಹೆಚ್ಚಾಯಿತು. ಕೆಲಸ ಇದೆ ಅಂತ ಹೇಳಿ ಹೋಗಿದ್ದು ಇವಳನ್ನು ಕರ್ಕೊಂಡು ಬರಲಿಕ್ಕೆ ಅಂತ ಸಿಟ್ಟಾದಳು. ವಸುಗೆ ಟ್ಯೂಷನ್ ಕ್ಲಾಸ್‌ಗಾಗಿ ತನ್ನ ಮನೆಯಲ್ಲೇ ಎಲ್ಲಾ ತಯಾರಿ ಮಾಡಿದ್ದ ರಿಷಿ. ಎಕ್ಸಾಮ್ ಮುಗಿಯುವ ವರೆಗೂ ಇಲ್ಲೇ ಟ್ಯೂಷನ್ ಮಾಡಬೇಕು, ವಸು ಫಸ್ಟ್ ಕ್ಲಾಸ್ ಬರಬೇಕು ಎಂದು ಜಗತಿಗೂ ಹೇಳಿದ.
ವಸುಧರಾಳನ್ನು ರಿಷಿ ಮನೆಗೆ ಕರ್ಕೊಂಡು ಬಂದಿರುವುದು ದೇವಯಾನಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ‘ಇನ್ನೆಷ್ಟು ದಿನ ಇಲ್ಲಿಗೆ ಬರ್ತೀಯಾ? ಹೇಗೂ ರಾಜೀವ ಬಂದಿದ್ದಾನೆ ಕೆಲಸ ಮುಗಿಯುತ್ತೆ’ ಅಂತ ಮನಸ್ಸಲ್ಲೇ ಅಂದುಕೊಂಡು ಖುಷಿ ಪಟ್ಟಳು ದೇವಯಾನಿ. ವಸುಧರಾಳ ಕತೆ ಮುಗಿಸುತ್ತಾನಾ ರಾಜೀವ? ದೇವಯಾನಿ ಸಂಚು ರಿಷಿಗೆ ಗೊತ್ತಾಗುತ್ತಾ? ಮುಂದಿನ ಸಂಚಿಕೆವರೆಗೂ ಕಾಯಲೇಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.