Honganasu Serial: ಕ್ಲಾಸ್‌ಗೆ ತಡವಾಗಿ ಬಂದ ವಸುಗೆ ಶಿಕ್ಷೆ ಕೊಟ್ಟ ರಿಷಿ

Honganasu Serial Update: ಕೋಪದಲ್ಲಿದ್ದ ರಿಷಿ ವಸುಗೆ ಶಿಕ್ಷೆ ನೀಡಿದ. ಕಠಿಣವಾದ ಲೆಕ್ಕವನ್ನು ಬಿಡಿಸುವಂತೆ ಹೇಳಿದ. ಆದರೆ ಬುದ್ಧಿವಂತೆ ವಸು ಸುಲಭವಾಗಿ ಲೆಕ್ಕ ಮಾಡಿ ತೋರಿಸಿದಳು.

Honganasu Serial: ಕ್ಲಾಸ್‌ಗೆ ತಡವಾಗಿ ಬಂದ ವಸುಗೆ ಶಿಕ್ಷೆ ಕೊಟ್ಟ ರಿಷಿ
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 18, 2022 | 9:57 AM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್​ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ವಸುಧರಾನ ಹುಡುಕಿ ಹೊರಟಿದ್ದ ರಿಷಿಗೆ ಕೊನೆಗೂ ವಸು ಇರುವ ಮನೆ ಗೊತ್ತಾಯಿತು. ಒಂಟಿಯಾಗಿರುವ ವಸುಧರಾ ಜೊತೆ ಕೆಲ ಸಮಯ ಮಾತನಾಡಿದ ರಿಷಿ. ರೊಮ್ಯಾಂಟಿಕ್ ನೈಟ್‌ನಲ್ಲಿ ಇಬ್ಬರೂ ಸಂತಸದಿಂದ ಸಮಯ ಕಳೆದರು. ವಸು ಜೊತೆ ಮಾತನಾಡಿ ರಿಷಿ ಕೂಡ ಸಮಾಧಾನ ಆದ. ವಸುಗೆ ಧೈರ್ಯವಾಗಿ ಇರುವಂತೆ ಹೇಳಿ ರಿಷಿ ಹೊರಡಲು ಸಜ್ಜಾದ.

ತನ್ನ ಕನಸನ್ನು ಮಹೇಂದ್ರನ ಬಳಿ ವಿವರಿಸಿದ ಗೌತಮ್. ತಾನೊಂದು ಹುಡುಗಿಗೆ ಪ್ರಪೋಸ್ ಮಾಡುತ್ತಿದ್ದೆ ಆಗ ವಿಲನ್ ಎಂಟ್ರಿ ಕೊಟ್ಟು ಎಲ್ಲಾ ಹಾಳು ಮಾಡಿದ. ಆ ವಿಲನ್ ನೋಡೋಕೆ ರಿಷಿಯ ಹಾಗೆ ಇದ್ದಾನೆ ಎಂದ ಗೌತಮ್. ‘ರಿಷಿ ಹಾಗೆ ಇರುವ ವಿಲನ್‌‌ ಕಡೆ ನಿನ್ನ ಹುಡುಗಿ ವಾಲಿದರೆ ಏನ್ ಮಾಡುತ್ತೀಯಾ ಎಂದು’ ಮಹೇಂದ್ರ ಗೌತಮ್​ಗೆ ಕೇಳಿದ. ಹಾಗೆಲ್ಲ ಆಗಲ್ಲ ಅಂಕಲ್ ಎಂದ ಗೌತಮ್. ಇಬ್ಬರ ಮಾತುಕತೆಯನ್ನು ಕೇಳಿಸಿಕೊಳ್ಳುತ್ತಿದ್ದ ರಿಷಿ ತಂದೆಗೆ ಸುಮ್ಮನಿರಿ ಅವನ ಮಾತನ್ನು ಏನ್ ಕೇಳಿಸಿಕೊಳ್ಳುತ್ತೀರಾ ಅಂತ ಹೇಳಿದ. ಇಲ್ಲಿಂದ ಎದ್ದು ಹೋಗು ಎಂದು ಗೌತಮ್‌ಗೆ ಗದರಿದ. ಮನಸ್ಸಿನಲ್ಲೇ ರಿಷಿಗೆ ಬೈದುಕೊಳ್ಳುತ್ತಾ ಎದ್ದು ನಡೆದ ಗೌತಮ್.

ಸ್ಕಾಲರ್‌ಶಿಪ್ ಎಕ್ಸಾಮ್ ಬರೆಯಲು ತನ್ನ ಕಾಲೇಜಿನಿಂದ ವಸುಧರಾ ಹೆಸರನ್ನು ನೀಡಿದ ರಿಷಿ. ವಸು ಬೇಡ ಎಂದರೂ ಎಕ್ಸಾಮ್ ಬರೆಯುವಂತೆ ರಿಷಿ ಒತ್ತಾಯ ಮಾಡಿದ. ‘ಕಾಲೇಜ್ ಟಾಪರ್ ನೀನು ಈ ಎಕ್ಸಾಮ್ ಬರಿ’ ಎಂದು ಧೈರ್ಯ ತುಂಬಿದ ರಿಷಿ. ಕಾಲೇಜು ಮುಗಿಸಿ ರಿಷಿ ನೇರವಾಗಿ ವಸು ರೂಮಿನ ಬಳಿ ಬಂದ. ಆದರೆ ವಸು ಇನ್ನೂ ಬಂದಿರಲಿಲ್ಲ. ಫೋನ್ ಮಾಡಿದ ರಿಷಿ ವಸು ಜೊತೆ ಮಾತಿಗಿಳಿದ. ವಸು ಕಾಫಿ ಮಾಡುತ್ತೀನಿ ಎಂದು ಹೇಳಿದರೂ ರಿಷಿ ಬೇಡ ಎಂದು ಹೊರಟು ಹೋದ. ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ರಿಷಿ ವಸುಗೆ ಮೆಸೇಜ್ ಕಳುಹಿಸಿ ಈಗ ನೋಡಬೇಡ ಮನೆಗೆ ಹೋಗಿ ನೋಡು ಎಂದು ಹೇಳಿದ.

ಕೆಲಸ ಮುಗಿಸಿ ಮನೆಗೆ ಹೋದ ವಸುಧರಾ ಫೋನ್ ತೆಗೆದು ನೋಡಿದಳು. ಎಕ್ಸಾಮ್‌ಗೆ ಬೇಕಾದ ಎಲ್ಲಾ ಪ್ರಶ್ನೆಗಳನ್ನು ಕಳುಹಿಸಿದ್ದ ರಿಷಿ. ಏನೋ ಮೆಸೇಜ್ ಮಾಡಿದ್ದಾರೆ ಅಂತ ಅಂದುಕೊಂಡರೆ ಇದನ್ನು ಕಳುಹಿಸಿದ್ದಾರಾ, ಏನು ಅರ್ಥನೇ ಆಗುತ್ತಿಲ್ಲ ಎಂದು ಜಗತಿ ಮೇಡಮ್‌ಗೆ ಸೆಂಡ್ ಮಾಡಿ ಸಹಾಯ ಮಾಡುವಂತೆ ಕೇಳಿಕೊಂಡಳು. ಫೋನ್‌ನಲ್ಲಿಯೇ ಜಗತಿ ಮೇಡಮ್‌ನಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದಳು ವಸು. ಇತ್ತ ರಿಷಿ ವಸುಗೆ ಫೋನ್ ಮಾಡುತ್ತಲೇ ಇದ್ದ. ಆದರೆ ವಸು ಫೋನ್ ಬ್ಯುಸಿ ಬರುತ್ತಿತ್ತು. ಇಷ್ಟೊತ್ತಿಗೆ ವಸು ಯಾರ ಜೊತೆ ಮಾತನಾಡುತ್ತಿದ್ದಾಳೆ ಎಂದು ರಿಷಿಗೆ ಚಿಂತೆಯಾಯಿತು. ಆಗ ಪೋನ್​ನಲ್ಲಿ ಮಾತನಾಡುತ್ತಾ ಗೌತಮ್ ರೂಮಿಗೆ ಎಂಟ್ರಿ ಕೊಟ್ಟ. ಗೌತಮ್ ಜೊತೆಯೇ ಮಾತನಾಡುತ್ತಿದ್ದಾಳೆ ಎಂದು ಕೊಂಡ ರಿಷಿ ಗೌತಮ್ ಫೋನ್ ಕಿತ್ತುಕೊಂಡು ನೋಡಿದ. ಆದರೆ ಗೌತಮ್ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದ.

ಬೆಳಗ್ಗೆ ವಸು ಕ್ಲಾಸ‌್‌ಗೆ ತಡವಾಗಿ ಎಂಟ್ರಿ ಕೊಟ್ಟಳು. ಕೋಪದಲ್ಲಿದ್ದ ರಿಷಿ ವಸುಗೆ ರಿಷಿ ಶಿಕ್ಷೆ ನೀಡಿದ. ಕಠಿಣವಾದ ಲೆಕ್ಕವನ್ನು ಬಿಡಿಸುವಂತೆ ಹೇಳಿದ. ಆದರೆ ಬುದ್ಧಿವಂತೆ ವಸು ಸುಲಭವಾಗಿ ಲೆಕ್ಕ ಮಾಡಿ ತೊರಿಸಿದಳು. ಖುಷಿಯಾದ ರಿಷಿ ವಸುಧರಾಳನ್ನು ಹೊಗಳಿದ. ಕ್ಲಾಸ್ ಮುಗಿದ ಮೇಲೆ ರಾತ್ರಿಯೆಲ್ಲ ಫೋನ್ ಬ್ಯುಸಿ ಬರ್ತಿತ್ತು ಯಾರ ಜೊತೆ ಮಾತನಾಡುತ್ತಿದ್ದೆ ಎಂದು ವಸುನಾ ಪ್ರಶ್ನೆ ಮಾಡಿದ ರಿಷಿ. ಏನು ಹೇಳಬೇಕೆಂದು ಗೊತ್ತಾಗದೆ ಸೈಲೆಂಟ್ ಆದಳು ವಸು. ಜಗತಿ ಮೇಡಮ್‌ಗೆ ಫೋನ್ ಮಾಡಿ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಿದ್ದೆ ಎಂದು ಸತ್ಯ ಹೇಳುತ್ತಾಳಾ ವಸು? ಸ್ಕಾಲರ್‌ಶಿಪ್ ಎಕ್ಸಾಮ್‌ನಲ್ಲಿ ಪಾಸ್ ಆಗ್ತಾಳಾ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ