‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಗಳಾಗಿರೋ ಚೈತ್ರಾ ಕುಂದಾಪುರ್ ಹಾಗೂ ಜಗದೀಶ್ ಮಧ್ಯೆ ಕೆಲವು ಸಾಮ್ಯತೆಗಳು ಇರೋದು ಹೌದು. ಮಾತಿಗೆ ನಿಂತರೆ ಇಬ್ಬರೂ ಸಾಕಷ್ಟು ಮಾತನಾಡುತ್ತಾರೆ. ಎದುರಿದ್ದವರು ಭಯಗೊಳ್ಳುವಂತೆ ಮಾಡುತ್ತಾರೆ. ಈ ಮಧ್ಯೆ ಜಗದೀಶ್ ಅವರು ಒಂದು ಸ್ಟೇಟ್ಮೆಂಟ್ ನೀಡಿದ್ದಾರೆ. ‘ನನ್ನ ಹಾಗೂ ಚೈತ್ರಾ ಮಧ್ಯೆ ಸಾಮ್ಯತೆ ಇದೆ’ ಎಂದು ಅವರು ಹೇಳಿಕೊಂಡಿದ್ದರು. ಇದಕ್ಕೆ ಅವರು ಕಾರಣವೇನು ಎಂಬುದನ್ನು ನೀಡಿದ್ದಾರೆ.
ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ವಿರುದ್ಧ ತಿರುಗಿ ಬಿದ್ದಿದ್ದರು. ಅವರು ಸಾಕಷ್ಟು ಕಿತ್ತಾಟ ಮಾಡಿದ್ದರು. ಎಲ್ಲಾ ಸ್ಪರ್ಧಿಗಳ ವಿರುದ್ಧ ತೊಡೆತಟ್ಟಿದ್ದರು. ಇದನ್ನು ಕಲರ್ಸ್ ಕನ್ನಡ ವಾಹಿನಿ ಮೀಮ್ ರೀತಿಯ ವಿಡಿಯೋ ಮಾಡಿ ವೀಕೆಂಡ್ನಲ್ಲಿ ಪ್ರಸಾರ ಮಾಡಿತ್ತು. ‘ಇದನ್ನು ನಿಜವಾಗಲೂ ಸಿನಿಮಾ ಮಾಡಿದರೆ ಯಾರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು’ ಎಂದು ಸುದೀಪ್ ಅವರು ಜಗದೀಶ್ಗೆ ಪ್ರಶ್ನೆ ಮಾಡಿದರು.
‘ಹೀರೋಯಿನ್ ಆಗಿ ಹಂಸ ಕಾಣಿಸಿಕೊಳ್ಳಬೇಕು’ ಎಂದು ಹೇಳಿ ಬಳಿಕ ಜಗದೀಶ್ ಅವರು ನಕ್ಕರು. ಆ ಬಳಿಕ ತಂಗಿ ಪಾತ್ರದಲ್ಲಿ ಚೈತ್ರಾ ಕುಂದಾಪುರ್ ಕಾಣಿಸಿಕೊಳ್ಳಬೇಕು ಎನ್ನುವ ಮನವಿ ಮಾಡಿದರು. ‘ನಾವಿಬ್ಬರೂ ಮ್ಯಾಚ್ ಆಗ್ತೀವಿ. ನಾವಿಬ್ಬರೂ ಜೈಲಿಗೆ ಹೋಗಿ ಬಂದಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು ಜಗದೀಶ್. ಈ ಹೇಳಿಕೆ ಕೊಡುತ್ತಿದ್ದಂತೆ ಚೈತ್ರಾ ಕುಂದಾಪುರ್ ಮುಖ ಮುಚ್ಚಿಕೊಂಡರು.
ಇದನ್ನೂ ಓದಿ: ಚೈತ್ರಾ ಕುಂದಾಪುರ್ಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಜಗದೀಶ್
‘ಮೈಕ್ ಹಿಡಿದರೆ ನಾನು ಚೈತ್ರಾ ಫೈಯರ್ ಬ್ರ್ಯಾಂಡ್. ಇಬ್ಬರೂ ಎಮೋಷನಲ್. ಈ ಕಾರಣಕ್ಕೆ ಅವರು ನನ್ನ ಸಹೋದರಿಯಂತೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು ಜಗದೀಶ್ ಅವರು. ಈ ಎಪಿಸೋಡ್ ಸಾಕಷ್ಟು ಗಮನ ಸೆಳೆಯಿತು. ಚೈತ್ರಾ ಅವರು ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೊದಲ ಎಲಿಮಿನೇಷನ್ ನಡೆದಿದೆ. ಯಮುನಾ ಶ್ರೀನಿಧಿ ಮೊದಲ ವಾರವೇ ಎಲಿಮಿನೇಟ್ ಆಗಿದ್ದಾರೆ. ಇದಕ್ಕೆ ಅವರು ಬೇಸರಗೊಂಡಿದ್ದಾರೆ. ಚೈತ್ರಾ ಹಾಗೂ ಜಗದೀಶ್ ಇಬ್ಬರೂ ನಾಮಿನೇಟ್ ಆಗಿದ್ದರು, ಅವರು ಸೇವ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:49 am, Mon, 7 October 24