ಚೈತ್ರಾ ಕುಂದಾಪುರ ಅವರು ಕೇಸ್ ಒಂದರಲ್ಲಿ ಜೈಲಿಗೆ ಹೋಗಿದ್ದರು. ಮೊದಲು ಅವರನ್ನು ವಾಗ್ಮಿ ಎಂದು ನೋಡುತ್ತಿದ್ದರು. ಈ ಪ್ರಕರಣದ ಬಳಿಕ ಅವರ ಮೇಲಿದ್ದ ಗೌರವ ಕಡಿಮೆ ಆಗಿತ್ತು. ಈಗ ಬಿಗ್ ಬಾಸ್ ನೋಡುತ್ತಿರುವವರಿಗೆ ಅವರ ಮೇಲಿದ್ದ ಭಾವನೆ ನಿಧಾನವಾಗಿ ಬದಲಾಗುತ್ತಿದೆ. ಹೀಗಿರುವಾಗಲೇ ಅವರು ಒಂದು ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ಚೈತ್ರಾ ಕುಂದಾಪುರಗೆ ಮದುವೆ ಫಿಕ್ಸ್ ಆಗಿದೆಯಂತೆ. ಈ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.
‘ಬಿಗ್ ಬಾಸ್’ ಒಳಗೆ ಹೋದಾಗ ಕೆಲವರ ಮಧ್ಯೆ ಆಪ್ತತೆ ಬೆಳೆಯುತ್ತದೆ. ಇದನ್ನು ಪ್ರೀತಿ ಎಂದು ಬಿಂಬಿಸುವ ಕೆಲಸ ಆಗುತ್ತದೆ. ಇದು ಕೆಲವರಿಗೆ ಇಷ್ಟ ಆದರೆ, ಇನ್ನೂ ಕೆಲವರಿಗೆ ಇಷ್ಟ ಆಗುವುದಿಲ್ಲ. ಚೈತ್ರಾ ಕುಂದಾಪುರಗೆ ಈ ವಿಚಾರದಲ್ಲಿ ನಂಬಿಕೆ ಇಲ್ಲ. ತಮ್ಮ ವಿಚಾರದಲ್ಲಿ ಯಾರಾದರೂ ಕಥೆ ಕಟ್ಟೋಕೆ ಬಂದರೆ ಸರಿ ಇರಲ್ಲ ಎಂದು ಅವರು ಹೇಳಿದ್ದಾರೆ.
ಚೈತ್ರಾ, ಹಂಸಾ ಹಾಗೂ ಮಾನಸಾ ಒಂದು ಕಡೆ ಕುಳಿತು ಮಾತನಾಡುತ್ತಿದ್ದರು. ‘ನಂದು, ರಂಜಿತ್ ಹಾಗೂ ತ್ರಿವಿಕ್ರಂದು ಲವ್ಸ್ಟೋರಿ ಎಂದು ಸುರೇಶ್ ಹೇಳಿಕೆ ಕೊಟ್ಟರು. ಹೀಗೆಲ್ಲ ಹೇಳಿದ್ರೆ ಕಷ್ಟ ಆಗುತ್ತದೆ. ಅವರ ಜೊತೆ ಯಾಕೆ ಕ್ಲೋಸ್ ಆದೆ ಎಂದರೆ ಅವರು ಯಾರ ಬಗ್ಗೆಯೂ ಮಾತನಾಡಲ್ಲ. ಆದರೆ ಸುರೇಶ್ ಜೊತೆ ಕುಳಿತರೆ ನೆಗೆಟಿವ್ ವೈಬ್ಸ್ ಜಾಸ್ತಿ. ಈ ಕಾರಣಕ್ಕೆ ರಂಜಿತ್ ಹಾಗೂ ತ್ರಿವಿಕ್ರಂ ಜೊತೆ ಕ್ಲೋಸ್ ಆಗಿದ್ದೇನೆ’ ಎಂದು ಹಂಸಾ ಸ್ಪಷ್ಟನೆ ಕೊಟ್ಟರು.
ಇದನ್ನೂ ಓದಿ: ‘ಮೆಟ್ಟು ತಗೊಂಡು ಹೊಡಿತೀನಿ’: ಮತ್ತೆ ನಾಲಿಗೆ ಹರಿಬಿಟ್ಟ ಚೈತ್ರಾ ಕುಂದಾಪುರ
‘ನಾನು ವಿಕ್ಕಿ ಜೊತೆ ಕ್ಲೋಸ್ ಆಗಿದ್ದೇನೆ ಎಂದು ಸುರೇಶ್ ಅಣ್ಣ ಹೆಳುತ್ತಲೇ ಇದ್ದಾರೆ. ನನ್ನ ವಿಚಾರದಲ್ಲಿ ಯಾರಾದರೂ ಲವ್ಸ್ಟೋರಿ ಶುರು ಮಾಡಿದರೆ ಮೆಟ್ಟು ತೆಗೆದುಕೊಂಡು ಹೊಡೆಯುತ್ತೇನೆ. ಹೊರಗೆ ಹೋದರೂ ತೊಂದರೆ ಇಲ್ಲ. ನನ್ನ ಕ್ಯಾರೆಕ್ಟರ್ಗೆ ಯಾರೂ ಕಳಂಕ ತರಬಾರದು ಎಂದು ನಾನು ಬಯಸುತ್ತೇನೆ. ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ಯಾರ ಜೊತೆಯೂ ಸಂಬಂಧ ಕಟ್ಟೋದು ಇಟ್ಟುಕೊಳ್ಳಬೇಡಿ’ ಎಂದರು ಚೈತ್ರಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Tue, 22 October 24