Amruthadhaare: ಜೀ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ಅಮೃತಧಾರೆ’; ಇದರ ಕಥೆ ಏನು?

‘ಅಮೃತಧಾರೆ’ ಪ್ರೋಮೋ ನೋಡಿದವರಿಗೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗಿದೆ. ‘ಅಮೃತಧಾರೆ’ ಕೂಡ ಇದೇ ರೀತಿ ಇರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

Amruthadhaare: ಜೀ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ಅಮೃತಧಾರೆ’; ಇದರ ಕಥೆ ಏನು?
ಛಾಯಾ ಸಿಂಗ್-ರಾಜೇಶ್

Updated on: Apr 18, 2023 | 11:12 AM

ಮುಖ್ಯಾಂಶಗಳು

  • ಜೀ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ
  • ಅಮೃತಧಾರೆಯಲ್ಲಿ ಛಾಯಾ ಸಿಂಗ್-ರಾಜೇಶ್
  • ‘ಅಮೃತಧಾರೆ’ ಪ್ರೋಮೋ ನೋಡಿದವರಿಗೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗಿದೆ

ಜೀ ಕನ್ನಡದಲ್ಲಿ ಬ್ಯಾಕ್​ ಟು ಬ್ಯಾಕ್ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಇತ್ತೀಚೆಗಷ್ಟೇ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಪ್ರಸಾರ ಆರಂಭಿಸಿದೆ. ‘ಸೀತಾ ರಾಮ’ ಧಾರಾವಾಹಿಯ ಪ್ರೋಮೋ ರಿಲೀಸ್ ಆಗಿದ್ದು, ಈ ಧಾರಾವಾಹಿ ಇನ್ನಷ್ಟೇ ಪ್ರಸಾರ ಆರಂಭಿಸಬೇಕಿದೆ. ಹೀಗಿರುವಾಗಲೇ ಜೀ ಕನ್ನಡ ವಾಹಿನಿ ಹೊಸ ಧಾರಾವಾಹಿ ‘ಅಮೃತಧಾರೆ’ಯ (Amruthadhaare) ಪ್ರೋಮೋ ರಿವೀಲ್ ಮಾಡಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ (Rajesh Nataranga) ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಪ್ರೋಮೋ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

ಛಾಯಾ ಸಿಂಗ್ ಅವರು 2000ನೇ ಇಸವಿಯಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ‘ಮುನ್ನುಡಿ’ ಅವರ ಮೊದಲ ಸಿನಿಮಾ. ಹಲವು ಕನ್ನಡ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಮಲಯಾಳಂ, ಬೆಂಗಾಲಿ, ತಮಿಳು ಮೊದಲಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2017ರ ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣನ ತಂಗಿ ಪಾತ್ರದಲ್ಲಿ ಛಾಯಾ ಸಿಂಗ್ ಕಾಣಿಸಿಕೊಂಡಿದ್ದರು. ಸದ್ಯ ಅವರು ‘ಅನು ಅನೆ ನೇನು’ ಹೆಸರಿನ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರು ಕನ್ನಡದಲ್ಲಿ ಹೊಸ ಧಾರಾವಾಹಿ ಒಪ್ಪಿಕೊಂಡಿದ್ದಾರೆ. ರಾಜೇಶ್ ನಟರಂಗ ಕೂಡ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಈಗ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ.

‘ಹುಡುಗ-ಹುಡುಗಿ ಹೊಂದ್ಕೊಂಡಿದ್ರೆ ಅದೊಂದು ಚೆಂದದ ಕಥೆ. ಅವರಿಬ್ರೂ ಕಿತ್ತಾಡ್ಕೊಂಡಿದ್ರೆ ಅದು ಬೇರೇನೇ ಕಥೆ. ಶೀಘ್ರದಲ್ಲಿ ಬರ್ತಿದೆ ಒಂದು ಬೊಂಬಾಟ್ ಕಥೆ, ಅಮೃತಧಾರೆ’ ಎಂದು ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ. ಈ ಪ್ರೋಮೋದಲ್ಲಿ ರಾಜೇಶ್ ನಟರಂಗ ಅವರು ಉದ್ಯಮಿ ಆಗಿ ಕಾಣಿಸಿಕೊಂಡರೆ, ಛಾಯಾ ಸಿಂಗ್ ಮಧ್ಯಮ ವರ್ಗದ ಹುಡುಗಿ ಆಗಿ ಕಾಣಿಸಿಕೊಂಡಿದ್ದಾರೆ. ‘ಬಡೇ ಅಚ್ಚೆ ಲಗ್ತೇ ಹೈ’ ಹೆಸರಿನ ಹಿಂದಿ ಧಾರಾವಾಹಿಯ ರಿಮೇಕ್ ಇದಾಗಿದೆ.

ಇದನ್ನೂ ಓದಿ: Vaishnavi Gowda: ಕ್ಯೂಟ್ ಲುಕ್​ನಲ್ಲಿ ಗಮನ ಸೆಳೆದ ನಟಿ ವೈಷ್ಣವಿ ಗೌಡ; ಇಲ್ಲಿದೆ ಫೋಟೋ ಗ್ಯಾಲರಿ 

‘ಅಮೃತಧಾರೆ’ ಪ್ರೋಮೋ ನೋಡಿದವರಿಗೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗಿದೆ. ವಯಸ್ಸಿನ ಅಂತರ ಹೆಚ್ಚಿರುವ ಹುಡುಗ-ಹುಡುಗಿಯ ಪ್ರೇಮ್ ಕಹಾನಿ ಈ ಧಾರಾವಾಹಿಯಲ್ಲಿತ್ತು. ‘ಅಮೃತಧಾರೆ’ ಕೂಡ ಇದೇ ರೀತಿ ಇರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈಗಾಗಲೇ ‘ಸೀತಾ ರಾಮ’ ಪ್ರೋಮೋ ರಿಲೀಸ್ ಆಗಿದೆ. ಆದರೆ, ಧಾರಾವಾಹಿ ಪ್ರಸಾರ ಕಾಣುತ್ತಿಲ್ಲ. ಹೀಗಿರುವಾಗಲೇ ಹೊಸ ಧಾರಾವಾಹಿ ಪ್ರೋಮೋ ರಿಲೀಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us