‘ಸೀತಾ ರಾಮಂ’ ನೋಡಿ ಮೆಚ್ಚಿಕೊಂಡ ಕಂಗನಾ ರಣಾವತ್​; ನಟಿ ಹೊಗಳಿದ್ದು ಯಾರನ್ನ?

‘ಸೀತಾ ರಾಮಂ ಸಿನಿಮಾ ನೋಡಲು ಸಮಯ ಸಿಕ್ಕಿತು. ಎಂತಹ ಅದ್ಭುತ ಅನುಭವ. ಒಂದು ಎಪಿಕ್ ಲವ್​​ ಸ್ಟೋರಿ’ ಎಂದಿದ್ದಾರೆ ಕಂಗನಾ ರಣಾವತ್.

‘ಸೀತಾ ರಾಮಂ’ ನೋಡಿ ಮೆಚ್ಚಿಕೊಂಡ ಕಂಗನಾ ರಣಾವತ್​; ನಟಿ ಹೊಗಳಿದ್ದು ಯಾರನ್ನ?
ರಶ್ಮಿಕಾ-ಕಂಗನಾ-ಮೃಣಾಲ್
TV9kannada Web Team

| Edited By: Rajesh Duggumane

Sep 21, 2022 | 7:48 PM

ನಟಿ ಕಂಗನಾ ರಣಾವತ್ (Kangana Ranaut) ಅವರು ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಹೊಗಳಿದ್ದಕ್ಕಿಂತ ತೆಗಳಿದ್ದೇ ಹೆಚ್ಚು. ಸಿನಿಮಾ ವಿಚಾರದಲ್ಲೂ ಅಷ್ಟೇ. ಸೂಪರ್ ಹಿಟ್ ಚಿತ್ರಗಳನ್ನೂ ‘ಕಳಪೆ ಸಿನಿಮಾ’ ಎಂದು ಕರೆಯುವ ಮೂಲಕ ಅವರು ಅಚ್ಚರಿ ಮೂಡಿಸಿದ್ದಿದೆ. ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ‘ಬ್ರಹ್ಮಾಸ್ತ್ರ’ ಸಿನಿಮಾವನ್ನು ಕಂಗನಾ ತೆಗಳಿದ್ದರು. ಆದರೆ, ಅಪರೂಪಕ್ಕೆ ಅವರು ಒಂದು ಚಿತ್ರವನ್ನು ಹೊಗಳಿದ್ದಾರೆ. ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಸೀತಾ ರಾಮಂ’ ಚಿತ್ರವನ್ನು (Sita Ramam) ನೋಡಿ ಕಂಗನಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಮೃಣಾಲ್ ಅವರನ್ನು ನಿಜವಾದ ರಾಣಿ ಎಂಬ ಮಾತು ಕಂಗನಾ ಬಾಯಿಂದ ಬಂದಿದೆ.

‘ಸೀತಾ ರಾಮಂ’ ಸಿನಿಮಾ ನೋಡಿದ ವಿಮರ್ಶಕರು, ಪ್ರೇಕ್ಷಕರು ಪಾಸಿಟಿವ್ ಪ್ರತಿಕ್ರಿಯೆ ನೀಡಿದರು. ಈ ಕಾರಣದಿಂದ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ಬಾಚಿತು. ಚಿತ್ರ ಒಟಿಟಿಯಲ್ಲಿ ಪ್ರಸಾರ ಕಂಡು ಅಲ್ಲಿಯೂ ಧೂಳೆಬ್ಬಿಸಿತು. ಎರಡು ಶೇಡ್​ನ ಪಾತ್ರದಲ್ಲಿ ಮೃಣಾಲ್ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಸಾಕಷ್ಟು ಮಂದಿ ಮೃಣಾಲ್ ನಟನೆಯನ್ನು ಹೊಗಳಿದ್ದಿದೆ. ಈಗ ಕಂಗನಾ ಅವರಿಂದ ಮೃಣಾಲ್ ಮೆಚ್ಚುಗೆಯ ಮಾತುಗಳನ್ನು ಸ್ವೀಕರಿಸಿದ್ದಾರೆ.

‘ಸೀತಾ ರಾಮಂ ಸಿನಿಮಾ ನೋಡಲು ಸಮಯ ಸಿಕ್ಕಿತು. ಎಂತಹ ಅದ್ಭುತ ಅನುಭವ. ಒಂದು ಎಪಿಕ್ ಲವ್​​ ಸ್ಟೋರಿ. ಅಸಾಧಾರಣ ಚಿತ್ರಕಥೆ ಹಾಗೂ ನಿರ್ದೇಶನ. ನಿರ್ದೇಶಕ ಹನು ರಾಘವಪುಡಿಗೆ ಅಭಿನಂದನೆ, ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದೀರಿ’ ಎಂದಿದ್ದಾರೆ ಕಂಗನಾ ರಣಾವತ್.

‘ಎಲ್ಲರೂ ಒಳ್ಳೆಯ ರೀತಿಯಲ್ಲಿ ನಟಿಸಿದ್ದಾರೆ. ಅದರಲ್ಲೂ ಮೃಣಾಲ್ ನಟನೆ ಸಾಕಷ್ಟು ಇಷ್ಟವಾಯಿತು. ಅವರು ನಿಜಕ್ಕೂ ರಾಣಿ. ಎಂತಹ ಒಳ್ಳೆಯ ಪಾತ್ರವರ್ಗ’ ಎಂದು ಮೃಣಾಲ್​ ಅಭಿನಯದ ಬಗ್ಗೆಯೂ ಕಂಗನಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

‘ಸೀತಾ ರಾಮಂ’ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಅವರು ಭಾರತೀಯ ಸೇನೆಯ ಲೆಫ್ಟಿನಂಟ್ ರಾಮ್ ಪಾತ್ರದಲ್ಲಿ ಮಿಂಚಿದ್ದಾರೆ. ಮೃಣಾಲ್​ಗೆ ಇಲ್ಲಿ ಎರಡು ಶೇಡ್​ನ ಪಾತ್ರ. ಪಾಕ್ ಪ್ರಜೆಯಾಗಿ ರಶ್ಮಿಕಾ ಮಂದಣ್ಣ ಅವರ ಪಾತ್ರ ಕೂಡ ಗಮನ ಸೆಳೆಯುವಂತಹದ್ದು.

ಇದನ್ನೂ ಓದಿ: Mrunal Thakur: ನಟಿ ಮೃಣಾಲ್​ ಠಾಕೂರ್ ಸಂಬಳ ಎಷ್ಟು? ‘ಸೀತಾ ರಾಮಂ’ ಸೂಪರ್​ ಹಿಟ್​ ಆದ್ಮೇಲೆ ಹೆಚ್ಚಿದೆ ಡಿಮ್ಯಾಂಡ್​​

ಇದನ್ನೂ ಓದಿ

ಕಂಗನಾ ರಣಾವತ್​ ಅವರು ‘ಎಮರ್ಜೆನ್ಸಿ’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ನಟಿಸುವುದರ ಜತೆಗೆ ಅವರು ನಿರ್ದೇಶನ ಕೂಡ ಮಾಡುತ್ತಿದ್ದಾರೆ ಅನ್ನೋದು ವಿಶೇಷ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada