AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mrunal Thakur: ನಟಿ ಮೃಣಾಲ್​ ಠಾಕೂರ್ ಸಂಬಳ ಎಷ್ಟು? ‘ಸೀತಾ ರಾಮಂ’ ಸೂಪರ್​ ಹಿಟ್​ ಆದ್ಮೇಲೆ ಹೆಚ್ಚಿದೆ ಡಿಮ್ಯಾಂಡ್​​

Mrunal Thakur Salary: ‘ಸೀತಾ ರಾಮಂ’ ಸಿನಿಮಾದ ಗೆಲುವಿನ ಬಳಿಕ ಮೃಣಾಲ್​ ಠಾಕೂರ್ ಅವರಿಗೆ ದಕ್ಷಿಣ ಭಾರತದಿಂದ ಹೆಚ್ಚು ಆಫರ್ಸ್​ ಬರುತ್ತಿವೆ. ಸಂಭಾವನೆ ಕೂಡ ಹೆಚ್ಚಾಗಿದೆ.

Mrunal Thakur: ನಟಿ ಮೃಣಾಲ್​ ಠಾಕೂರ್ ಸಂಬಳ ಎಷ್ಟು? ‘ಸೀತಾ ರಾಮಂ’ ಸೂಪರ್​ ಹಿಟ್​ ಆದ್ಮೇಲೆ ಹೆಚ್ಚಿದೆ ಡಿಮ್ಯಾಂಡ್​​
ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್
TV9 Web
| Edited By: |

Updated on: Sep 20, 2022 | 7:15 AM

Share

ದುಲ್ಕರ್​ ಸಲ್ಮಾನ್​, ರಶ್ಮಿಕಾ ಮಂದಣ್ಣ ಹಾಗೂ ಮೃಣಾಲ್​ ಠಾಕೂರ್​ ಅವರು ಮುಖ್ಯಭೂಮಿಕೆ ನಿಭಾಯಿಸಿರುವ ‘ಸೀತಾ ರಾಮಂ’ (Sita Ramam) ಸಿನಿಮಾ ಸೂಪರ್​ ಹಿಟ್​ ಆಗಿದೆ. ಈ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರ ಖ್ಯಾತಿಯೂ ಹೆಚ್ಚಿದೆ. ಅದರಲ್ಲೂ ಅತಿ ಹೆಚ್ಚು ಗಮನ ಸೆಳೆಯುತ್ತಿರುವುದು ಮೃಣಾಲ್​ ಠಾಕೂರ್ (Mrunal Thakur)​. ಎರಡು ಶೇಡ್​ ಇರುವ ಪಾತ್ರವನ್ನು ನಿಭಾಯಿಸಿರುವ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರ ನಟನೆಗೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಮೃಣಾಲ್​ ಠಾಕೂರ್​ ಅವರ ಸಂಭಾವನೆ (Mrunal Thakur Remuneration) ಕೂಡ ಹೆಚ್ಚಾಗಿದೆ. ಬಣ್ಣದ ಲೋಕದಲ್ಲಿ ಅವರಿಗೆ ಭರ್ಜರಿ ಡಿಮ್ಯಾಂಡ್​ ಬಂದಿದೆ. ಪ್ಯಾನ್​ ಇಂಡಿಯಾ ನಟಿಯಾಗಿ ಅವರೀಗ ಮಿಂಚುತ್ತಿದ್ದಾರೆ.

ದಕ್ಷಿಣ ಭಾರತಕ್ಕೆ ಕಾಲಿಡುವುದಕ್ಕೂ ಮುನ್ನವೇ ಹಿಂದಿ ಕಿರುತೆರೆ ಪ್ರೇಕ್ಷಕರಿಗೆ ಮೃಣಾಲ್​ ಠಾಕೂರ್​ ಪರಿಚಿತರಾಗಿದ್ದರು. ಅನೇಕ ಧಾರಾವಾಹಿಗಳಲ್ಲಿ ನಟಿಸಿ ಅವರು ಮನೆ ಮಾತಾಗಿದ್ದರು. 2018ರಲ್ಲಿ ಅವರು ಬಾಲಿವುಡ್​ ಕದ ತಟ್ಟಿದರು. ಬಳಿಕ ‘ಸೂಪರ್​ 30’, ‘ಜೆರ್ಸಿ’ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಆ ಮೂಲಕ ಅವರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟಿಯಾಗಿ ಬೆಳೆದುನಿಂತರು.

ಮೃಣಾಲ್​ ಠಾಕೂರ್​ ಅವರ ವೃತ್ತಿಜೀವನಕ್ಕೆ ‘ಸೀತಾ ರಾಮಂ’ ಸಿನಿಮಾ ದೊಡ್ಡ ಮೈಲೇಜ್​ ನೀಡಿದೆ. ಈ ಚಿತ್ರ ಆಗಸ್ಟ್​ 5ರಂದು ಥಿಯೇಟರ್​ನಲ್ಲಿ ಬಿಡುಗಡೆಯಾಗಿ ಉತ್ತಮ ಕಮಾಯಿ ಮಾಡಿತು. ನಂತರ ಒಟಿಟಿಗೂ ಕಾಲಿಟ್ಟು ದಾಖಲೆ ಪ್ರಮಾಣದಲ್ಲಿ ವೀವ್ಸ್​ ಪಡೆದುಕೊಂಡಿತು. ಸಿನಿಮಾ ನೋಡಿದ ಎಲ್ಲರೂ ಮೃಣಾಲ್ ಠಾಕೂರ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ನಿಭಾಯಿಸಿರುವ ಪಾತ್ರಕ್ಕಿಂತಲೂ ಮೃಣಾಲ್​ ಠಾಕೂರ್​ ಮಾಡಿರುವ ಪಾತ್ರವೇ ಸಖತ್​ ಹೈಲೈಟ್​ ಆಗಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.

ಇದನ್ನೂ ಓದಿ
Image
Mrunal Thakur: ‘ಸೀತಾ ರಾಮಂ’ ಚಿತ್ರದ ನಟಿ ಮೃಣಾಲ್ ಠಾಕೂರ್ ಕ್ಯೂಟ್ ಲುಕ್ ನೋಡಿ
Image
Rashmika Mandanna: 50 ಕೋಟಿ ರೂಪಾಯಿ ಗಳಿಸಿದ ರಶ್ಮಿಕಾ ಮಂದಣ್ಣ ಸಿನಿಮಾ; ‘ಸೀತಾ ರಾಮಂ’ ಸೂಪರ್​ ಹಿಟ್​
Image
‘ಈ ಚಿತ್ರ ಮಿಸ್ ಮಾಡಿಕೊಳ್ಳಬೇಡಿ’; ರಶ್ಮಿಕಾ ಮಂದಣ್ಣ ನಟನೆಯ ‘ಸೀತಾ ರಾಮಂ’ ಚಿತ್ರಕ್ಕೆ ಸಿಕ್ತು ಉತ್ತಮ ವಿಮರ್ಶೆ
Image
Rashmika Mandanna: ಹಲವು ದೇಶಗಳಲ್ಲಿ ರಶ್ಮಿಕಾ ಮಂದಣ್ಣ ಸಿನಿಮಾ ಬ್ಯಾನ್​; ‘ಸೀತಾ ರಾಮಂ​’ ಚಿತ್ರತಂಡ ಮಾಡಿದ ತಪ್ಪೇನು?

ಒಂದು ಮೂಲದ ಪ್ರಕಾರ, ಮೃಣಾಲ್​ ಠಾಕೂರ್​ ಅವರ ಸಂಭಾವನೆ ಬಾಲಿವುಡ್​ನಲ್ಲಿ 2 ಕೋಟಿ ತಲುಪಿದೆ. ​ದಕ್ಷಿಣದಲ್ಲಿ ಅವರು ಒಂದು ಕೋಟಿ ರೂಪಾಯಿ ಡಿಮ್ಯಾಂಡ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಅಂಕಿ-ಸಂಖ್ಯೆಗಳ ಬಗ್ಗೆ ಅವರು ಎಲ್ಲಿಯೂ ಅಧಿಕೃತವಾಗಿ ಮಾತನಾಡಿಲ್ಲ. ಒಟ್ಟಿನಲ್ಲಿ ಅವರ ಡಿಮ್ಯಾಂಡ್​ ಹೆಚ್ಚಿರುವುದಂತೂ ನಿಜ.

ತಮಗೆ ಸಿಗುವ ಪಾತ್ರಕ್ಕೆ ಮೃಣಾಲ್​ ಠಾಕೂರ್​ ಅವರು ನ್ಯಾಯ ಒದಗಿಸುತ್ತಾರೆ. ಗ್ಲಾಮರ್​ ಮತ್ತು ನಟನೆ ಎರಡಕ್ಕೂ ಸೈ ಎಂಬಂತಿರುವ ಈ ಪ್ರತಿಭಾಂತ ಕಲಾವಿದೆಯ ಕೈಯಲ್ಲೀಗ ಹಲವು ಸಿನಿಮಾಗಳಿವೆ. ಬರುವ ಆಫರ್​ಗಳನ್ನು ಅವರು ಅಳೆದು-ತೂಗಿ ಒಪ್ಪಿಕೊಳ್ಳುತ್ತಿದ್ದಾರೆ. ‘ಸೀತಾ ರಾಮಂ’ ಸಿನಿಮಾದ ಗೆಲುವಿನ ಬಳಿಕ ಅವರಿಗೆ ದಕ್ಷಿಣ ಭಾರತದಿಂದ ಹೆಚ್ಚು ಆಫರ್ಸ್​ ಬರುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ