ಬಿಗ್ ಬಾಸ್ ಎಂದರೆ ಕಿರುತೆರೆ ಪ್ರೇಕ್ಷಕರಿಗೆ ಎಲ್ಲಿಲ್ಲದ ಕ್ರೇಜ್. ಇತ್ತೀಚೆಗಷ್ಟೇ ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 8ಕ್ಕೆ ತೆರೆ ಬಿದ್ದಿದೆ. 8ನೇ ಸೀಸನ್ ವಿನ್ನರ್ ಆಗಿ ಮಂಜು ಪಾವಗಡ (Manju Pavagada) ಹೊರಹೊಮ್ಮಿದರು. ಇತ್ತ ಬಿಗ್ ಬಾಸ್ ಮನೆಯಿಂದ ಮಂಜು ಆ್ಯಂಡ್ ಟೀಮ್ ಹೊರಬರುತ್ತಿದ್ದಂತೆಯೇ ಹೊಸದೊಂದು ತಂಡ ದೊಡ್ಮನೆಗೆ ಎಂಟ್ರಿ ಪಡೆದುಕೊಂಡಿದೆ. ‘ಕನ್ನಡತಿ’ ಸೀರಿಯಲ್ ನಟ ಕಿರಣ್ ರಾಜ್, ನಟ-ನಿರೂಪಕ ಅಕುಲ್ ಬಾಲಾಜಿ ಸೇರಿದಂತೆ 15 ಸೆಲೆಬ್ರಿಟಿಗಳು ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.
ಬಿಗ್ ಬಾಸ್ಗಾಗಿ ಬಿಡದಿಯಲ್ಲಿ ಅದ್ದೂರಿಯಾಗಿ ಮನೆಯ ಸೆಟ್ ಹಾಕಲಾಗಿತ್ತು. ಅದೇ ಸೆಟ್ನಲ್ಲಿ ಈಗ ‘ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್’ ಕಾರ್ಯಕ್ರಮ ನಡೆಯಲಿದೆ. ಇದು 6 ಆರು ದಿನಗಳ ಕಾಲ ನಡೆಯಲಿದ್ದು, 15 ಸೆಲೆಬ್ರಿಟಿಗಳು ಅದಕ್ಕಾಗಿ ಸಜ್ಜಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಈ ಕಾರ್ಯಕ್ರಮದ ಪ್ರೋಮೋ ಹಂಚಿಕೊಂಡಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ಕೌತುಕ ಹುಟ್ಟುಹಾಕಿದ್ದಾರೆ. ‘100 ದಿನ ಇರುವ ಬಿಗ್ ಬಾಸ್ ಮನೆಯಲ್ಲಿ 6 ದಿನದ ಹೊಸ ಜರ್ನಿ. ಅದೇ ಅರಮನೆ, ಅದೇ ಕ್ಯಾಮರಾ ಮತ್ತು ನೀವು ಮೆಚ್ಚಿರುವ 15 ತಾರೆಯರು’ ಎಂದಿರುವ ಹಿನ್ನೆಲೆ ಧ್ವನಿಯಿಂದಾಗಿ ನಿರೀಕ್ಷೆ ಹೆಚ್ಚುವಂತಾಗಿದೆ.
‘ಆರು ದಿನ ಸುಲಭ ಎಂದುಕೊಂಡಿದ್ದೀರಾ? ಚಾನ್ಸೇ ಇಲ್ಲ. ಆರು ದಿನ ನಮ್ಮ ಕಂಟೆಸ್ಟೆಂಟ್ಸ್ ಹೇಗಿರುತ್ತಾರೆ’ ಎಂದು ಅಕುಲ್ ಬಾಲಾಜಿ ಪ್ರಶ್ನೆ ಮಾಡಿರುವುದು ಈ ಪ್ರೋಮೋದಲ್ಲಿ ಹೈಲೈಟ್ ಆಗಿದೆ. ಶನಿವಾರ (ಆ.14) ಮತ್ತು ಭಾನುವಾರ (ಆ.15) ಸಂಜೆ ನಾಲ್ಕು ಗಂಟೆಗೆ ಈ ಕಾರ್ಯಕ್ರಮದ ಗ್ರ್ಯಾಂಡ್ ಓಪನಿಂಗ್ ಇರಲಿದೆ.
ಹಿಂದಿ ಬಿಗ್ ಬಾಸ್ನಲ್ಲಿಯೂ ಈ ಬಾರಿ ಹೊಸ ಪ್ರಯೋಗ ಮಾಡಲಾಗುತ್ತಿದೆ. ‘ಬಿಗ್ ಬಾಸ್ ಓಟಿಟಿ’ ಎಂಬ ಹೊಸ ಕಾನ್ಸೆಪ್ಟ್ ಪರಿಚಯಿಸಲಾಗಿದೆ. ಹೆಸರೇ ಸೂಚಿಸುವಂತೆ ಇದು ಓಟಿಟಿಯಲ್ಲಿ ಮಾತ್ರ ಪ್ರಸಾರ ಆಗುವಂಥದ್ದು. ಆ.9ರಿಂದ ವೂಟ್ನಲ್ಲಿ ‘ಬಿಗ್ ಬಾಸ್ ಓಟಿಟಿ’ ಆರಂಭ ಆಗಿದ್ದು, ಕರಣ್ ಜೋಹರ್ ನಿರೂಪಣೆ ಮಾಡುತ್ತಿದ್ದಾರೆ. ಈ ಶೋನಲ್ಲಿ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಕೂಡ ಭಾಗವಹಿಸಿದ್ದಾರೆ. ಆರಂಭದಲ್ಲಿಯೇ ಅವರು ಮನೆಕೆಲಸದ ಹಂಚಿಕೆ ವಿಚಾರಕ್ಕೆ ಇತರೆ ಸ್ಪರ್ಧಿಗಳ ಜೊತೆ ಜಗಳ ಮಾಡಿಕೊಂಡು ಸುದ್ದಿ ಆಗಿದ್ದಾರೆ.
ಇದನ್ನೂ ಓದಿ:
‘ನಾನು ಏನೇ ಹೇಳಿದ್ರೂ ಅದು ಮಂಜುಗೆ ಕನೆಕ್ಟ್ ಆಗ್ತಿತ್ತು’; ಬಿಗ್ ಬಾಸ್ ವಿನ್ನರ್ ಬಗ್ಗೆ ದಿವ್ಯಾ ಸುರೇಶ್ ಮಾತು
‘ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್
Published On - 8:26 am, Wed, 11 August 21