ಅಶ್ವಿನಿ, ಜಾನ್ವಿ, ರಿಷಾ, ಸುಧಿ, ಬಳಿಕ ಧ್ರುವಂತ್ ಬಾಯಿಗೆ ಆಹಾರವಾದ ರಕ್ಷಿತಾ ಶೆಟ್ಟಿ

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಪದೇ ಪದೇ ಟಾರ್ಗೆಟ್ ಆಗುತ್ತಿದ್ದಾರೆ. ಅವರ ಕನ್ನಡ ಭಾಷಾ ಶೈಲಿಯ ಬಗ್ಗೆ ಧ್ರುವಂತ್ ಅನುಮಾನ ವ್ಯಕ್ತಪಡಿಸಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಹಿಂದೆ ರಕ್ಷಿತಾ ಅವರನ್ನು ಬೆಂಬಲಿಸಿದ್ದ ಧ್ರುವಂತ್ ಈಗ ಅವರ ಮಾತಿನ ಬಗ್ಗೆ ಪ್ರಶ್ನೆ ಮಾಡಿರುವುದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ

ಅಶ್ವಿನಿ, ಜಾನ್ವಿ, ರಿಷಾ, ಸುಧಿ, ಬಳಿಕ ಧ್ರುವಂತ್ ಬಾಯಿಗೆ ಆಹಾರವಾದ ರಕ್ಷಿತಾ ಶೆಟ್ಟಿ
ರಕ್ಷಿತಾ-ಧ್ರುವಂತ್

Updated on: Nov 05, 2025 | 12:35 PM

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅವರು ಈಸಿ ಟಾರ್ಗೆಟ್ ಎಂಬ ರೀತಿ ಆಗಿದೆ. ಅವರು ಸಣ್ಣವರು ಎಂಬ ಕಾರಣಕ್ಕೆ ಈ ಮೊದಲು ಅಶ್ವಿನಿ, ಜಾನ್ವಿ, ಸುಧಿ ಹಾಗೂ ರಿಷಾ ಮೊದಲಾದವರು ಟಾರ್ಗೆಟ್ ಮಾಡಿದ್ದರು. ಈಗ ಧ್ರುವಂತ್ ಸರದಿ. ಅವರು ರಕ್ಷಿತಾ ಶೆಟ್ಟಿಯನ್ನು ಟಾರ್ಗೆಟ್ ಮಾಡಿ ಟೀಕೆ ಮಾಡಿದ್ದಾರೆ. ಈ ಎಪಿಸೋಡ್ ನವೆಂಬರ್ 4ರಂದು ಪ್ರಸಾರ ಕಂಡಿದೆ.

ಉಳಿದ ಎಲ್ಲಾ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದರೆ ರಕ್ಷಿತಾ ಶೆಟ್ಟಿ ವಯಸ್ಸು ಸಣ್ಣದು. ಅವರು ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಈ ಕಾರಣಕ್ಕೆ ಅವರಿಗೆ ಕನ್ನಡ ಸ್ಪಷ್ಟವಾಗಿ ಮಾತನಾಡೋಕೆ ಬರೋದಿಲ್ಲ. ಇದು ಅವರ ಆಟದ ಹೈಲೈಟ್ ಕೂಡ ಹೌದು. ಅವರು ಅರ್ಧಮರ್ಧ ಕನ್ನಡ-ಇಂಗ್ಲಿಷ್ ಬಳಕೆ ಮಾಡಿ ಮಾತನಾಡೋದು ನೋಡಿ ಧ್ರುವಂತ್​ಗೆ ಅನುಮಾನ ಮೂಡಿದೆ. ಈ ಬಗ್ಗೆ ಅವರು ಅಶ್ವಿನಿ ಹಾಗೂ ಸುಧಿ ಬಳಿ ಮಾತನಾಡಿದ್ದಾರೆ.

ಅಶ್ವಿನಿ ಗೌಡ, ಜಾನ್ವಿ ಅವರು ರಕ್ಷಿತಾ ಶೆಟ್ಟಿ ಮೇಲೆ ತಿರುಗಿ ಬೀಳುವಾಗ ಇದೇ ಧ್ರುವಂತ್ ರಕ್ಷಿತಾ ಅವರನ್ನು ಬೆಂಬಲಿಸಿದ್ದರು. ರಕ್ಷಿತಾ ಶೆಟ್ಟಿ ಆಟ ಚೆನ್ನಾಗಿದೆ ಎಂದು ಹೊಗಳಿದ್ದರು. ಆದರೆ, ಈಗ ಅದೇ ಅಶ್ವಿನಿ ಅವರ ಜೊತೆ ಸೇರಿ ಅವರು ರಕ್ಷಿತಾ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ‘ನಿಮ್ಮನ್ನು ಕಳಿಸಿಯೇ ನಾನು ಹೋಗೋದು’; ಅಶ್ವಿನಿ ಎದುರು ಶಪಥ ಮಾಡಿದ ರಕ್ಷಿತಾ

‘ರಕ್ಷಿತಾಗೆ ತುಳು ಸರಿಯಾಗಿ ಮಾತನಾಡೋಕೆ ಬರೋದಿಲ್ಲ. ಕನ್ನಡ ಬರುತ್ತದೆ ಆದರೆ, ಅವರು ಮಾತನಾಡುವುದಿಲ್ಲ. ಮಂಗಳೂರಿನ ಯಾರೊಬ್ಬರೂ ಈ ರೀತಿ ಮಾತನಾಡುವುದಿಲ್ಲ’ ಎಂದು ಅಶ್ವಿನಿ-ಸುಧಿ ಮೊದಲಾದವರ ಬಳಿ ಹೇಳಿದ್ದಾರೆ. ಇದಕ್ಕೆ ಎಲ್ಲರೂ ತಲೆ ಆಡಿಸಿದ್ದಾರೆ. ಧ್ರುವಂತ್ ನಿಲುವನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.