‘ಸೀನಿಯರ್ ಹೀರೋಗಳೇ ಹಾಗೆ ನಡೆದುಕೊಂಡಾಗ’; ಯಶ್ ಹಳೆಯ ವಿಡಿಯೋ ವೈರಲ್
ಪುನೀತ್ ರಾಜ್ಕುಮಾರ್ ನಿಧನ ಹೊಂದುವುದಕ್ಕೂ ಕೆಲವೇ ದಿನ ಮೊದಲು ಯಶ್ ಹಾಗೂ ಪುನೀತ್ ಭೇಟಿ ಆಗಿದ್ದರು. ‘ಭಜರಂಗಿ 2’ ವೇದಿಕೆ ಮೇಲೆ ಯಶ್, ಶಿವಣ್ಣ ಹಾಗೂ ಪುನೀತ್ ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಈ ವೇದಿಕೆ ಮೇಲೆ ಪುನೀತ್ ಅವರನ್ನು ಹೊಗಳುವ ಕೆಲಸವನ್ನು ಯಶ್ ಅವರು ಮಾಡಿದ್ದರು.

ಯಶ್ (Yash) ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರು ಈಗ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗಿರುವಾಗಲೇ ಯಶ್ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಪುನೀತ್ ರಾಜ್ಕುಮಾರ್ ಬಗ್ಗೆ ಮಾತನಾಡಿದ್ದರು. ಪುನೀತ್ ರಾಜ್ಕುಮಾರ್ ಅವರನ್ನು ಹಾಡಿ ಹೊಗಳುವ ಕೆಲಸವನ್ನು ಅವರು ಮಾಡಿದ್ದರು. ಆ ವಿಡಿಯೋ ಇಲ್ಲಿದೆ.
ಪುನೀತ್ ರಾಜ್ಕುಮಾರ್ ನಿಧನ ಹೊಂದುವುದಕ್ಕೂ ಕೆಲವೇ ದಿನ ಮೊದಲು ಯಶ್ ಹಾಗೂ ಪುನೀತ್ ಭೇಟಿ ಆಗಿದ್ದರು. ‘ಭಜರಂಗಿ 2’ ವೇದಿಕೆ ಮೇಲೆ ಯಶ್, ಶಿವಣ್ಣ ಹಾಗೂ ಪುನೀತ್ ಒಟ್ಟಾಗಿ ಡ್ಯಾನ್ಸ್ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಈ ವೇದಿಕೆ ಮೇಲೆ ಪುನೀತ್ ಅವರನ್ನು ಹೊಗಳುವ ಕೆಲಸವನ್ನು ಯಶ್ ಅವರು ಮಾಡಿದ್ದರು. ಈಗ ಯಶ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ.
‘ಕೆಜಿಎಫ್’ ಯಶಸ್ಸು ಕಂಡಾಗ ಯಶ್ ಆಡಿದ ಮಾತು ಇದಾಗಿದೆ. ಆಗ ಪುನೀತ್ ಕರೆ ಮಾಡಿದ್ರಾ ಎಂಬ ಪ್ರಶ್ನೆಗೆ ಯಶ್ ಅವರು ಉತ್ತರ ನೀಡಿದ್ದರು. ಕೇವಲ ಕೆಜಿಎಫ್ ಮಾತ್ರವಲ್ಲ, ಅದಕ್ಕೂ ಮೊದಲೇ ಪುನೀತ್ ಅವರು ಯಶ್ಗೆ ಕರೆ ಮಾಡಿ ಹೊಗಳಿದ್ದರಂತೆ.
View this post on Instagram
‘ರಾಮಾಚಾರಿ ಸಕ್ಸಸ್ ಆದಾಗ ಪುನೀತ್ ಕರೆ ಮಾಡಿ, ಏನ್ ಕಲೆಕ್ಷನ್ ಯಶ್, ಏನಿದು ರೆಕಾರ್ಡ್ ಎಂದು ಹೇಳಿದ್ದರು. ಸೀನಿಯರ್ ಈ ರೀತಿ ನಡೆದುಕೊಂಡಾಗ ಖುಷಿ ಆಗುತ್ತದೆ. ಆ ವ್ಯಕ್ತಿ ಇದ್ದಾಗಲೇ ಮಾತನಾಡಿದೀನಿ. ಅಪ್ಪು ಹೋದ್ಮೇಲೆ ಅಪ್ಸೆಟ್ ಆದೆ. ಆ ವ್ಯಕ್ತಿ ಹೃದಯದಲ್ಲಿದ್ದಾರೆ. ಇದು ಮೋಸ. ಇದ್ದಾಗ ಬೆಲೆ ತಿಳಿದುಕೊಳ್ಳಬೇಕು, ಗೌರವ ಕೊಡಬೇಕು. ಪ್ರೀತಿ ಸಂಬಂಧ ಹೃದಯದಲ್ಲಿದೆ’ ಎಂದು ಯಶ್ ಅವರು ಪ್ರೀತಿಯಿಂದ ಮಾತನಾಡಿದ್ದರು. ಈ ವಿಡಿಯೋಗಳನ್ನು ಈಗ ವೈರಲ್ ಮಾಡಲಾಗುತ್ತಾ ಇದೆ.
ಇದನ್ನೂ ಓದಿ: ಯಶ್ಗೆ ಹೆದರಿದ ಬನ್ಸಾಲಿ; ‘ಟಾಕ್ಸಿಕ್’ ಚಿತ್ರದ ಎದುರು ಬರಲು ‘ಲವ್ ಆ್ಯಂಡ್ ವಾರ್’ ಹಿಂದೇಟು
ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರ. ಇದರ ಜೊತೆಗೆ ರಾಮಾಯಣ ಸಿನಿಮಾದಲ್ಲೂ ಅವರು ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



