ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ಸೀಸನ್ 8ರ ಮೊದಲ ಮಹಿಳಾ ಕ್ಯಾಪ್ಟನ್ ಆಗುವ ಮೂಲಕ ಹೊಸ ದಾಖಲೆಯನ್ನು ಅವರು ಬರೆದಿದ್ದರು. ಈಗ ಸೀಸನ್8ರಲ್ಲಿ ಫಿನಾಲೆಗೆ ಏರಿದ ಮೊದಲ ಸ್ಪರ್ಧಿ ಇವರೇ ಅನ್ನೋದು ವಿಶೇಷ. ಈ ಮೂಲಕ ದಿವ್ಯಾ ಫಿನಾಲೆಗೆ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆದುಕೊಳ್ಳಲು ಬಿಗ್ ಬಾಸ್ ‘ನೀನಾ ನಾನಾ’ ಹೆಸರಿನ ಟಾಸ್ಕ್ ನೀಡಲಾಗಿತ್ತು. ಇದರಡಿಯಲ್ಲಿ ನೀಡಿದ ಪ್ರತಿ ಟಾಸ್ಕ್ಗಳೂ ವೈಯಕ್ತಿಕ ಟಾಸ್ಕ್ಗಳೇ. ಕಳೆದ ವಾರ ದಿವ್ಯಾ ಕೈಗೆ ಪೆಟ್ಟಾಗಿತ್ತು. ಹೀಗಾಗಿ, ಈ ವಾರ ಅವರಿಗೆ ಆಡೋದು ಬಹಳ ಕಷ್ಟವಾಗಿತ್ತು. ಆದರೆ, ಇದೆಲ್ಲವನ್ನೂ ಮೀರಿ ದಿವ್ಯಾ ಈ ವಾರ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗಿದ್ದಾರೆ. ಅಷ್ಟೇ ಅಲ್ಲ, ಎಲ್ಲಾ ಸ್ಟ್ರಾಂಗ್ ಕಂಟೆಸ್ಟಂಟ್ಗಳ ಎದುರು ಅವರು ಗೆದ್ದು ಕ್ಯಾಪ್ಟನ್ ಆಗಿದ್ದಾರೆ ಎನ್ನಲಾಗಿದೆ.
ಈ ವಾರ ಹೊರತು ಪಡಿಸಿದರೆ ಬಿಗ್ ಬಾಸ್ ಮನೆಯಲ್ಲಿ ಉಳಿದಿರೋದು ಕೇವಲ ಎರಡು ವಾರ ಮಾತ್ರ. ಕ್ಯಾಪ್ಟನ್ ಆದವರನ್ನು ನಾಮಿನೇಟ್ ಮಾಡುವಂತಿಲ್ಲ. ಹೀಗಾಗಿ, ದಿವ್ಯಾ ಉರುಡುಗ ಮುಂದಿನ ವಾರದ ನಾಮಿನೇಷನ್ನಿಂದ ಬವಾವ್ ಆಗಲಿದ್ದಾರೆ. ನಂತರ ಉಳಿಯೋದು ಒಂದು ವಾರ ಮಾತ್ರ. ಹೀಗಾಗಿ, ಈ ವಾರ ಕ್ಯಾಪ್ಟನ್ ಆಗುವ ಮೂಲಕ ದಿವ್ಯಾ ಉರುಡುಗ ಫಿನಾಲೆಗೆ ನೇರವಾಗಿ ಆಯ್ಕೆ ಆದಂತಾಗಿದೆ. ಈ ವಾರ ಅವರು ನಾಮಿನೇಷನ್ ಲಿಸ್ಟ್ನಲ್ಲಿದ್ದಾರೆ. ಸ್ಟ್ರಾಂಗ್ ಕಂಟೆಸ್ಟಂಟ್ ಎನಿಸಿಕೊಂಡಿರುವುದರಿಂದ ಅವರು ಸೇವ್ ಆಗೋದು ಬಹುತೇಕ ಖಚಿತವಾಗಿದೆ.
ಇನ್ನು, ಈ ವಾರ ದಿವ್ಯಾ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಈ ವಾರ ಅವರ ಕೈಗೆ ಪೆಟ್ಟಾಗಿತ್ತು. ಅಷ್ಟೇ ಅಲ್ಲ, ಆಪ್ತ ಎನಿಸಿಕೊಂಡಿದ್ದ ಅರವಿಂದ್ ಕೆ.ಪಿ ಅವರು ದಿವ್ಯಾ ಉರುಡುಗ ವಿರುದ್ಧ ತಿರುಗಿ ಬಿದ್ದಿದ್ದರು. ಇಬ್ಬರ ನಡುವೆ ಮನಸ್ತಾಪ ಕೂಡ ಉಂಟಾಗಿತ್ತು. ಇದು ದಿವ್ಯಾ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಆದರೆ, ಅವರು ಛಲ ಬಿಡದೆ ಈ ವಾರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಮಳೆ ಹರಿದು ಬರುತ್ತಿದೆ.
ಇದನ್ನೂ ಓದಿ: ಆಗಸ್ಟ್ 8ರಿಂದ ಹಿಂದಿ ಬಿಗ್ ಬಾಸ್ ಸೀಸನ್ 15; ಆದರೆ, ಟಿವಿಯಲ್ಲಿ ಇದನ್ನು ನೋಡೋಕಾಗಲ್ಲ
ಬಿಗ್ ಬಾಸ್ ಸ್ಪರ್ಧಿ ವನಿತಾಗೆ 4ನೇ ಮದುವೆ? ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್