ಗಿಲ್ಲಿ ನಟನ ಕ*ಡ ಎಂದು ಕರೆದ ಡಾಗ್ ಸತೀಶ್; ಅಭಿಮಾನಿಗಳ ಆಕ್ರೋಶ

ಡಾಗ್ ಸತೀಶ್ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಗಿಲ್ಲಿ ವಿರುದ್ಧ ಅವಾಚ್ಯ ಶಬ್ದ ಬಳಸಿ ವಿವಾದ ಸೃಷ್ಟಿಸಿದ್ದಾರೆ. ಗಿಲ್ಲಿಯನ್ನು 'ಕಚಡ, ಲೋಫರ್' ಎಂದು ಕರೆದಿರುವ ವಿಡಿಯೋ ವೈರಲ್ ಆಗಿದೆ. ಸತೀಶ್ ಹೇಳಿಕೆಗೆ ಬಿಗ್ ಬಾಸ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಿಲ್ಲಿಯೇ ಬಿಗ್ ಬಾಸ್ ಗೆಲ್ಲುತ್ತಾರೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಗಿಲ್ಲಿ ನಟನ ಕ*ಡ ಎಂದು ಕರೆದ ಡಾಗ್ ಸತೀಶ್; ಅಭಿಮಾನಿಗಳ ಆಕ್ರೋಶ
ಬಿಗ್ ಬಾಸ್

Updated on: Dec 05, 2025 | 3:07 PM

ಬಿಗ್ ಬಾಸ್ (Bigg Boss) ಮನೆಯಿಂದ ಹೊರ ಬಂದಿರೋ ಡಾಗ್ ಸತೀಶ್ ಅವರು ಸಾಕಷ್ಟು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಅವರು ತಮ್ಮನ್ನು ತಾವು ಹೊಗಳಿಕೊಳ್ಳಲು ಸಾಕಷ್ಟು ಸಮಯ ಉಪಯೋಗಿಸುತ್ತಿದ್ದಾರೆ. ಅವರು ಹೇಳುವುದರಲ್ಲಿ ಅರ್ಧಕ್ಕೆ ಅರ್ಧ ಸುಳ್ಳು ಎಂಬುದು ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ತಿಳಿಯುತ್ತಿದೆ. ಹೀಗಿರುವಾಗಲೇ ಅವರು ಗಿಲ್ಲಿಗೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ಇರುವ ಗಿಲ್ಲಿ ನಟ ಅವರು ಅಲ್ಲಿರುವ ಸ್ಪರ್ಧಿಗಳನ್ನು ಗೋಳುಹೊಯ್ದುಕೊಳ್ಳುತ್ತಿದ್ದಾರೆ. ಅವರ ಆಪ್ತ ವಲಯದಲ್ಲಿರುವ ಕಾವ್ಯಾ ಅವರೇ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡ ಉದಾಹರಣೆ ಇದೆ. ಇದು ಒಂದು ಕಡೆಯಾದರೆ ಅವರು ಎಲ್ಲರನ್ನೂ ನಗಿಸುತ್ತಾ ಮನರಂಜನೆ ನೀಡುತ್ತಿದ್ದಾರೆ ಅನ್ನೋದು ಮತ್ತೊಂದು ಕಡೆ. ಈಗ ಅವರ ಬಗ್ಗೆ ಸತೀಶ್ ನಾಲಿಗೆ ಹರಿಬಿಟ್ಟಿದ್ದಾರೆ.

ಎಸ್​ಎಸ್​ ಟಿವಿಗೆ ನೀಡಿದ ಸಂದರ್ಶನದಲ್ಲಿ ಸತೀಶ್ ಮಾತನಾಡಿದ್ದಾರೆ. ‘ನಾನು ಬಿಗ್ ಬಾಸ್ ಮನೆಗೆ ಮೂರು ದಿನ ಹೋದರೆ ಗಿಲ್ಲಿಗೆ ಅವಮಾನ ಮಾಡೋಕೆ ಹೋಗ್ತೀನಿ. ಗಿಲ್ಲಿ ತುಂಬಾ ಕಚಡ. ಯಾರೇ ಹೋದರು ಅವನನ್ನು ಲೋಫರ್ ಎಂದು ಹೇಳುತ್ತಾರೆ. ಚೀಪ್ ಕ್ಯಾರೆಕ್ಟ್ ಬುದ್ಧಿ’ ಎಂದಿದ್ದಾರೆ ಸತೀಶ್.

ಸತೀಶ್ ಅವರು ಬಿಗ್ ಬಾಸ್ ಸ್ಪರ್ಧಿಗಳಿಗಾಗಿ ಒಂದು ಪಾರ್ಟಿ ಆಯೋಜನೆ ಮಾಡುತ್ತಾರಂತೆ. ಇದಕ್ಕೆ ಅವರು ಈ ಬಾರಿ ಮೊದಲು ಹೊರ ಹೋದ ಆರ್​ಜೆ ಅಮಿತ್ ಹಾಗೂ ಗಿಲ್ಲಿಯನ್ನು ಅವರು ಕರೆಯುವುದಿಲ್ಲವಂತೆ. ಅವರಿಬ್ಬರನ್ನೂ ಕಂಡರೂ ಇಷ್ಟ ಇಲ್ಲ ಎಂದು ಸತೀಶ್ ಹೇಳಿದ್ದಾರೆ.

ಇದನ್ನೂ ಓದಿ: ಈ ವಾರ ಬಿಗ್ ಬಾಸ್​ನಿಂದ ಹೋಗೋ ವಿಚಾರವನ್ನು ಬಾಯ್ತಪ್ಪಿ ಹೇಳಿದ ರಜತ್?

ಇದಕ್ಕೆ ಫ್ಯಾನ್ಸ್ ತಿರುಗೇಟು ಕೊಟ್ಟಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಏನೂ ಕಿತ್ಗೋಳೋಕೆ ಆಗಿಲ್ಲ. ಈಗ ಬಂದು ಎಲ್ಲರೂ ದೊಡ್ಡದಾಗಿ ಮಾತನಾಡುತ್ತಿದ್ದಾರೆ’ ಎಂದು ಕೆಲವರು ಸತೀಶ್​ ಅವರನ್ನು ಟೀಕಿಸಿದ್ದಾರೆ. ಈ ಬಾರಿ ಬಿಗ್ ಬಾಸ್ ಗೆಲ್ಲೋದು ಗಿಲ್ಲ ಎಂಬ ಮಾತು ಕೇಳಿ ಬಂದಿದೆ. ಇನ್ನೂ ಹಲವು ದಿನ ಬಾಕಿ ಇದ್ದು, ಆಟ ಯಾವ ರೀತಿಯಲ್ಲಿ ಬೇಕಿದ್ದರೂ ತಿರುಗಬಹುದು ಎಂಬ ಅಭಿಪ್ರಾಯ ಕೆಲವರದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:06 pm, Fri, 5 December 25