ಈ ವಾರ ಬಿಗ್ ಬಾಸ್ನಿಂದ ಹೋಗೋ ವಿಚಾರವನ್ನು ಬಾಯ್ತಪ್ಪಿ ಹೇಳಿದ ರಜತ್?
ಬಿಗ್ ಬಾಸ್ ಕನ್ನಡ ಸೀಸನ್ 12ರ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ರಜತ್ ಹಾಗೂ ಚೈತ್ರಾ ಕುಂದಾಪುರ, ಮನೆಯಿಂದ ಹೊರ ಹೋಗುವ ಬಗ್ಗೆ ವದಂತಿಗಳಿವೆ. ಟಾಸ್ಕ್ ಒಂದರಲ್ಲಿ ಸೋತ ನಂತರ ರಕ್ಷಿತಾ ಮಾತಿಗೆ ರಜತ್, "ಇದೇ ವಾರ ನಾವು ಹೋದರೆ?" ಎಂದು ಪ್ರಶ್ನಿಸಿದ್ದು, ಈ ಊಹಾಪೋಹಗಳಿಗೆ ಕಾರಣ. ನಾಮಿನೇಟ್ ಆಗದಿದ್ದರೂ, ಇವರ ನಿರ್ಗಮನದ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ರಜತ್ ಹಾಗೂ ಚೈತ್ರಾ ಕುಂದಾಪುರ ಅವರು ಈ ಸೀಸನ್ ಅಲ್ಲಿ 58ನೇ ದಿನಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದರು. ಆರಂಭದಲ್ಲಿ ಅತಿಥಿಗಳಾಗಿದ್ದ ಅವರು ನಂತರ ವೈಲ್ಡ್ ಕಾರ್ಡ್ ಅಭ್ಯರ್ಥಿಗಳಾದರು. ಇವರು ಈ ವಾರವೇ ಮನೆಯಿಂದ ಹೊರ ಹೋಗುತ್ತಾರೆ ಎಂಬ ಮಾತು ಹರಿದಾಡಿದೆ. ಇದಕ್ಕೆ ಪುಷ್ಠಿ ಕೊಡುವ ರೀತಿಯಲ್ಲಿ ರಜತ್ ಮಾತನಾಡಿದ್ದಾರೆ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಬಿಗ್ ಬಾಸ್ ಅಲ್ಲಿ ಡಿಸೆಂಬರ್ 3ರಂದು ಟಾಸ್ಕ್ ಒಂದನ್ನು ನೀಡಲಾಗಿತ್ತು. ಜೋಡಿ ಮೂಲಕ ಈ ಟಾಸ್ಕ್ ಆಡಬೇಕು. ರಜತ್ ಹಾಗೂ ಚೈತ್ರಾ ಜೊತೆಯಾಗಿ ಟಾಸ್ಕ್ ಆಡುತ್ತಿದ್ದರು. ಪ್ರತಿ ಟಾಸ್ಕ್ ಗೆದ್ದಾಗ ಒಂದು ಜೋಡಿಯನ್ನು ಗೆದ್ದವರು ಹೊರಕ್ಕೆ ಇಡಬೇಕು. ರಕ್ಷಿತಾ ಹಾಗೂ ಮಾಳು ತಂಡ ರಜತ್ ಮತ್ತು ಚೈತ್ರಾನ ಗೇಮ್ನಿಂದ ಹೊರಕ್ಕೆ ಇಟ್ಟಿದೆ. ಇದು ರಜತ್ಗೆ ಬೇಸರ ಮೂಡಿಸಿದೆ.
‘ನೀವು ಈಗಷ್ಟೇ ಬಿಗ್ ಬಾಸ್ ಮನೆಗೆ ಬಂದಿದ್ದೀರಿ. ಈಗಲೇ ನಿಮಗೆ ಕ್ಯಾಪ್ಟನ್ಸಿ ಟಾಸ್ಕ್ ಬೇಡ. ಮುಂದಿನ ದಿನಗಳಲ್ಲಿ ನಿಮಗೆ ಮತ್ತಷ್ಟು ಅವಕಾಶ ಇರುತ್ತದೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದರು.ಈ ಮಾತು ರಜತ್ ಕೋಪಕ್ಕೆ ಕಾರಣ ಆಗಿದೆ.
‘ಮುಂದಿನ ವಾರಗಳಲ್ಲಿ ನಾವು ಇರುತ್ತೇವೆ ಎಂದು ಹೇಗೆ ಹೇಳ್ತೀರಿ? ನಾವು ಇದೇ ವಾರ ಹೋಗಿಬಿಟ್ಟರೆ’ ಎಂದು ರಜತ್ ಪ್ರಶ್ನೆ ಮಾಡಿದ್ದಾರೆ. ಈ ವಾರ ಚೈತ್ರಾ ಹಾಗೂ ರಜತ್ ಇಬ್ಬರೂ ನಾಮಿನೇಟ್ ಆಗಿಲ್ಲ. ಹಾಗಿದ್ದರೂ ಅವರು ಈ ವಾರ ಹೋಗೋಕೆ ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಅವರು ಈ ವಾರ ಹೊರ ಹೋಗೋದು ಫಿಕ್ಸ್ ಎಂದು ಹೇಳಲಾಗುತ್ತಾ ಇದೆ.
ಇದನ್ನೂ ಓದಿ: ಟಾಯ್ಲೆಟ್ ಅಲ್ಲೇ ಗಂಟೆಗಟ್ಟಲೆ ನಿದ್ದೆ; ರಕ್ಷಿತಾಗೆ ಬಿಗ್ ಬಾಸ್ ಎಚ್ಚರಿಕೆ ರಜತ್ ಅವರು ಈ ವಾರ ಕೂಗಾಡುತ್ತಾರೆ, ಗಿಲ್ಲಿ ಮೇಲೆ ಮುಗಿ ಬೀಳುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಹಾಗಾಗಲೇ ಇಲ್ಲ. ಅವರು ಸೈಲೆಂಟ್ ಆಗಿದ್ದಾರೆ. ಗಿಲ್ಲಿ ಮಾತಿಗೆ ನಗುತ್ತಾ ಟೈಮ್ ಪಾಸ್ ಮಾಡುತ್ತಿದ್ದಾರೆ. ಅವರು ಕಳೆದ ಸೀಸನ್ ರೀತಿಯಲ್ಲಿ ಈ ಸೀಸನ್ ಅಲ್ಲಿ ಆಡುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:55 am, Thu, 4 December 25




