AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮಾಡುವ ಕಾಮಿಡಿಗೆ ನಕ್ಕು ಸುಸ್ತಾದ ರಜತ್

ಗಿಲ್ಲಿ ನಟ ಅವರ ಮಾತಿಗೆ ಬಿಗ್ ಬಾಸ್ ಮನೆಯ ಬಹುತೇಕ ಎಲ್ಲ ಸದಸ್ಯರು ನಕ್ಕು ಹಗುರಾಗುತ್ತಿದ್ದಾರೆ. ಅದರಲ್ಲೂ ರಜತ್ ಅವರಿಗೆ ಗಿಲ್ಲಿ ಮಾತಿನಿಂದ ಭರ್ಜರಿ ಮನರಂಜನೆ ಸಿಗುತ್ತಿದೆ. ಅವರು ಎಂಜಾಯ್ ಮಾಡುತ್ತಿದ್ದಾರೆ. ಧ್ರುವಂತ್ ಬಗ್ಗೆ ಗಿಲ್ಲಿ ಮಾಡಿದ ಕಾಮಿಡಿಯನ್ನು ನೋಡಿ ರಜತ್ ಅವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮಾಡುವ ಕಾಮಿಡಿಗೆ ನಕ್ಕು ಸುಸ್ತಾದ ರಜತ್
Gilli Nata, Rajath Kishan
ಮದನ್​ ಕುಮಾರ್​
|

Updated on: Dec 04, 2025 | 10:37 PM

Share

ನಟ ರಜತ್ (Rajath Kishan) ಅವರು ರಫ್ ಆ್ಯಂಡ್ ಟಫ್ ವ್ಯಕ್ತಿತ್ವದವರು. ಬಿಗ್ ಬಾಸ್ ಮನೆಗೆ ಅವರು ಎರಡನೇ ಬಾರಿ ಕಾಲಿಟ್ಟಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋನಲ್ಲಿ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದಾರೆ. ಅವರ ಜೊತೆ ಗಿಲ್ಲಿ ನಟ ಸೂಪರ್ ಕಾಂಬಿನೇಷನ್ ಆಗಿದ್ದಾರೆ. ಗಿಲ್ಲಿ ಮಾಡುವ ಎಲ್ಲ ಕಾಮಿಡಿಯನ್ನು ರಜತ್ ಅವರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದರಿಂದಾಗಿ ಬಿಗ್ ಬಾಸ್ ಮನೆ ಒಳಗೆ ರಜತ್ ತುಂಬಾ ಕೂಲ್ ಆಗಿದ್ದಾರೆ. ಈ ಮೊದಲು ರಘು ಜೊತೆ ಸೇರಿ ಕಾಮಿಡಿ ಮಾಡುತ್ತಿದ್ದ ಗಿಲ್ಲಿ ನಟ (Gilli Nata) ಅವರು ಈಗ ರಜತ್ ಜೊತೆ ಸೇರಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ಜಗಳ, ಗಲಾಟೆ ನಡೆಯುತ್ತಲೇ ಇರುತ್ತದೆ. ಮಾತಿನ ಚಕಮಕಿ ನಡುವೆ ಮನರಂಜನೆಯೇ ಕಳೆದು ಹೋಗಿರುತ್ತದೆ. ಆಗ ವೀಕ್ಷಕರಿಗೆ ಮತ್ತು ಮನೆಯ ಸದಸ್ಯರಿಗೆ ರಿಲೀಫ್ ನೀಡುವುದೇ ಗಿಲ್ಲಿ ಕಾಮಿಡಿ. ಬಿಗ್ ಬಾಸ್ ಆಟದಲ್ಲಿನ ಹಲವು ಘಟನೆಗಳನ್ನು ಗಿಲ್ಲಿ ಅವರು ತಮ್ಮದೇ ಶೈಲಿಯಲ್ಲಿ ಅರ್ಥೈಸುತ್ತಾರೆ. ಅದನ್ನು ಕೇಳಿ ಎಲ್ಲರಿಗೂ ನಗು ಬರುತ್ತದೆ.

ಜನರನ್ನು ನಗಿಸುವುದು ಹೇಗೆ ಎಂಬ ಕಲೆ ಗಿಲ್ಲಿಗೆ ಸಿದ್ಧಿಸಿದೆ. ಮಂಡ್ಯ ಭಾಷೆಯಲ್ಲಿ ಮಾತನಾಡುತ್ತಾ ಅವರು ಎಲ್ಲರನ್ನೂ ಸೆಳೆದುಕೊಳ್ಳುತ್ತಾರೆ. ಜನಪ್ರಿಯ ಸಿನಿಮಾಗಳ ಸಂಭಾಷಣೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಅವರು ಭರ್ಜರಿ ಮನರಂಜನೆ ನೀಡುತ್ತಾರೆ. ವೀಕ್ಷಕರು ಮಾತ್ರವಲ್ಲದೇ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕೂಡ ಇದನ್ನು ಫುಲ್ ಎಂಜಾಯ್ ಮಾಡುತ್ತಿದ್ದಾರೆ.

ಕಳೆದ ಎರಡು ವಾರದಿಂದ ಧ್ರುವಂತ್ ಅವರು ಸೈಲೆಂಟ್ ಆಗಿದ್ದಾರೆ. ತಾವಾಗಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕು ಎಂದು ನಿರ್ಧರಿಸಿದ್ದಾರೆ. ಆ ವಿಚಾರವನ್ನು ಇಟ್ಟುಕೊಂಡು ಗಿಲ್ಲಿ ನಟ ಅವರು ಪದೇ ಪದೇ ಕಾಲೆಳೆಯುತ್ತಲೇ ಇದ್ದಾರೆ. ಡಿಸೆಂಬರ್ 4ರ ಸಂಚಿಕೆಯಲ್ಲಿ ‘ಉಪೇಂದ್ರ’ ಸಿನಿಮಾದ ಡೈಲಾಗ್ ಅನುಕರಣೆ ಮಾಡಿ ಗಿಲ್ಲಿ ಅವರು ಧ್ರುವಂತ್ ಬಗ್ಗೆ ಮಾತನಾಡಿದರು. ಅದನ್ನು ಕೇಳಿ ರಜತ್ ಅವರು ಮನಸಾರೆ ನಕ್ಕರು.

ಇದನ್ನೂ ಓದಿ: ರಕ್ಷಿತಾನ ತಬ್ಬಿಕೊಳ್ಳಲು ಹೋದ ಗಿಲ್ಲಿಗೆ ಖಡಕ್ ವಾರ್ನಿಂಗ್ ನೀಡಿದ ಕಾವ್ಯ

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ನೀಡುವುದಕ್ಕೂ ಮೊದಲೇ ರಜತ್ ಅವರು ಗಿಲ್ಲಿಗೆ ಫಿದಾ ಆಗಿದ್ದರು. ಮನೆ ಒಳಗೆ ಬಂದು ಒಂದು ವಾರ ಅತಿಥಿಯಾಗಿ ಇದ್ದಾಗ, ‘ಇವನೇ ನನಗೆ ಸಖತ್ ಇಷ್ಟ’ ಎಂದು ಅವರು ಹೇಳಿದ್ದರು. ಆದರೆ ಕೆಲವು ಸಂದರ್ಭಗಳಲ್ಲಿ ಸಖತ್ ಕೋಪ ಮಾಡಿಕೊಂಡಿದ್ದರು. ಈಗ ವಾತಾವರಣ ಬದಲಾಗಿದೆ. ಗಿಲ್ಲಿಯ ಪ್ರತಿ ನಡೆ-ನಡಿಯನ್ನು ನೋಡಿ ರಜತ್ ಅವರು ಎಂಜಾಯ್ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ