ಮೊದಲ ಬಾರಿ ಕಾವ್ಯಾ ವಿರುದ್ಧ ಗಿಲ್ಲಿ ಅಸಮಾಧಾನ; ರಕ್ಷಿತಾಗೆ ಹೊಡೆಯೋದೊಂದೇ ಬಾಕಿ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ-ಕಾವ್ಯಾ ನಡುವೆ ಭಾರಿ ಗಲಾಟೆ ನಡೆದಿದೆ. ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಕಾವ್ಯಾ ಮಾಡಿದ ನಿರ್ಧಾರಗಳಿಂದ ತಂಡ ಸೋಲನುಭವಿಸಿತು. ಚಿಕ್ಕ ಬಾಲ್ಗಳಿಗಾಗಿ ಹಟ ಹಿಡಿದ ಕಾವ್ಯಾ ನಿರ್ಧಾರ ಗಿಲ್ಲಿಗೆ ಅಸಮಾಧಾನ ತಂದಿದೆ. ಕ್ಯಾಪ್ಟನ್ ಆಗುವ ಅವಕಾಶ ಕಳೆದುಕೊಂಡ ಗಿಲ್ಲಿ ಅವರು ಕಾವ್ಯಾ ವಿರುದ್ಧ ನೇರವಾಗಿ ಸಿಟ್ಟು ಹೊರಹಾಕಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಅವರು ಹಲವು ಬಾರಿ ಗಿಲ್ಲಿ ವಿರುದ್ಧ ತಿರುಗಿ ಬಿದ್ದ ಉದಾಹರಣೆ ಇದೆ. ಗಿಲ್ಲಿ (Gilli) ಟಾಸ್ಕ್ ಆಡುವ ರೀತಿ, ಗಿಲ್ಲಿ ನಡೆದುಕೊಳ್ಳುವ ರೀತಿಗೆ ಅವರಿಗೆ ಅನೇಕ ಬಾರಿ ಕೋಪ ಬಂದಿದೆ. ಈ ಸಂದರ್ಭದಲ್ಲಿ ಕಾವ್ಯಾ ಸಿಟ್ಟುಮಾಡಿಕೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ಗಿಲ್ಲಿ ಅವರು ಕಾವ್ಯಾ ಮೇಲೆ ಅಸಮಾಧಾನಗೊಂಡಿದ್ದಾರೆ. ಕ್ಯಾಪ್ಟನ್ ಆಗುವ ಚಾನ್ಸ್ ಕೈ ತಪ್ಪಿದ್ದಕ್ಕೆ ಗಿಲ್ಲಿಗೆ ಬೇಸರ ಇದೆ. ಇದನ್ನು ನೇರವಾಗಿ ಹೊರಹಾಕಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್ಗೆ ಅರ್ಹತೆ ಪಡೆಯಲು ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದರು. ಇದು ಜೋಡಿ ಟಾಸ್ಕ್ ಆಗಿತ್ತು. ನೀರಿನಲ್ಲಿ ವಿವಿಧ ಆಕಾರದ ಬಾಲ್ಗಳು ಇರುತ್ತವೆ. ಈ ಬಾಲ್ಗಳನ್ನು ತಂದು ಸೂಚಿಸಿದ ಜಾಗದ ಒಳಗೆ ಹಾಕಬೇಕು. ದೊಡ್ಡ ಬಾಲಿಗೆ ಪಾಯಿಂಟ್ ಕಡಿಮೆ. ಚಿಕ್ಕ ಬಾಲಿಗೆ ಪಾಯಿಂಟ್ ಹೆಚ್ಚು.
ಗಿಲ್ಲಿ ಅವರು ದೊಡ್ಡ ಬಾಲ್ನ ಮೊದಲು ಹಿಡಿಯೋಣ ಎಂದು ಹೇಳಿದರು. ಆದರೆ, ಹೆಚ್ಚು ಪಾಯಿಂಟ್ಸ್ ಬರುತ್ತದೆ ಎಂಬ ಕಾರಣಕ್ಕೆ ಕಾವ್ಯಾ ಗಮನ ಸಣ್ಣ ಬಾಲ್ಗಳ ಮೇಲೆ ಹೋಯಿತು. ಅದನ್ನೇ ಮೊದಲು ಹಾಕುವ ಪ್ರಯತ್ನ ನಡೆಯಿತು. ಎಷ್ಟೇ ಪ್ರಯತ್ನಿಸಿದರೂ ಇವರು ಒಂದು ಬಾಲ್ ಅನ್ನು ಮಾತ್ರ ತಂದು ಹಾಕಲು ಸಾಧ್ಯವಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಸಣ್ಣ ಬಾಲ್ ತರಲು ಸಾಧ್ಯವಾಗಲೇ ಇಲ್ಲ.ಬಾಲ್ ತೆಗೆದುಕೊಂಡು ಹೋಗುವಾಗ ಕಾವ್ಯಾ ಅವರು ‘ಗಿಲ್ಲಿ..’ ‘ಗಿಲ್ಲಿ’ ಎಂದು ಕೂಗುತ್ತಿದ್ದರು. ಇದರಿಂದ ಗಿಲ್ಲಿ ಮತ್ತಷ್ಟು ವಿಚಲಿತಗೊಳ್ಳುತ್ತಿದ್ದರು. ಹೀನಾಯವಾಗಿ ಟಾಸ್ಕ್ ಸೋತ ಬಳಿಕ ಗಿಲ್ಲಿಗೆ ಬೇಸರ ಆಯಿತು.
ಇದನ್ನೂ ಓದಿ: ಅರ್ಹತೆ ಪಡೆಯದಿದ್ದರೂ ಅನುಭವಿಸೋ ಹಂಬಲ; ಗಿಲ್ಲಿ ನಟ ತಿದ್ದಿಕೊಳ್ಳೋದು ಯಾವಾಗ? ‘ಗೊಲ್ಡನ್ ಬಾಲ್ಗಳನ್ನು (50 ಪಾಯಿಂಟ್) ಮೊದಲು ತೆಗೆದುಕೊಂಡು ಹೋಗಿ ಹಾಕೋಣ ಎಂದು ಹೇಳಿದೆ. ಆದರೆ, ಅವಳು ಕೇಳಲೇ ಇಲ್ಲ. ಸಣ್ಣ ಬಾಲ್ ತೆಗೆಯೋಣ (200 ಪಾಯಿಂಟ್) ಅತಿ ಆಸೆ ಮಾಡಿದಳು’ ಎಂದು ಗಿಲ್ಲಿ ಅಸಮಾಧಾನ ಹೊರಹಾಕಿದರು. ಇದೇ ಸಂದರ್ಭದಲ್ಲಿ ರಕ್ಷಿತಾ ಅವರು ಸಮಾಧಾನ ಮಾಡೋ ನೆಪದಲ್ಲಿ ಉರಿಸೋಕೆ ಹೋದರು. ಆಗ ಗಿಲ್ಲಿ ರಕ್ಷಿತಾಗೆ ಹೊಡೆಯೋದು ಒಂದೇ ಬಾಕಿ ಆಗಿತ್ತು. ನಂತರ ಗಿಲ್ಲಿ ಅವರು ‘ನಿನ್ನ ಜೊತೆ ಸೇರಲೇಬಾರದಿತ್ತು’ ಎಂದು ಕಾವ್ಯಾಗೆ ನೇರವಾಗಿ ಹೇಳಿದರು. ಆಗ ಕಾವ್ಯಾಗೆ ಶಾಕ್ ಆಯಿತು. ಕಾವ್ಯಾಗೆ ಬೇಸರ ಆಗಬಾರದು ಎಂದು ಗಿಲ್ಲಿ ಮಾತನ್ನು ತಿರುಚಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




