ಊರಿಗೆ ಕಾಲಿಟ್ಟ ಪ್ರತಾಪ್​ಗೆ ಭರ್ಜರಿ ಸ್ವಾಗತ; ಸ್ವಗ್ರಾಮದಲ್ಲಿ ಅಪ್ಪನ ಜೊತೆ ಮುದ್ದೆ ಮಾಡಿದ ಡ್ರೋನ್

|

Updated on: Feb 05, 2024 | 7:51 AM

ಪ್ರತಾಪ್ ಬಗ್ಗೆ ಜನರಿಗೆ ಸಿಂಪತಿ ಬೆಳೆದಿದೆ. ಅವರು ಅನೇಕರಿಗೆ ಇಷ್ಟ ಆಗಿದ್ದಾರೆ. ಪ್ರತಾಪ್ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರು ಹಲವು ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗಿದ್ದರು. ಈಗ ಅವರು ಹಲವು ವರ್ಷಗಳ ಬಳಿಕ ತಮ್ಮ ಊರಿಗೆ ಮರಳಿದ್ದಾರೆ. ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಊರಿಗೆ ಕಾಲಿಟ್ಟ ಪ್ರತಾಪ್​ಗೆ ಭರ್ಜರಿ ಸ್ವಾಗತ; ಸ್ವಗ್ರಾಮದಲ್ಲಿ ಅಪ್ಪನ ಜೊತೆ ಮುದ್ದೆ ಮಾಡಿದ ಡ್ರೋನ್
ಪ್ರತಾಪ್
Follow us on

ಡ್ರೋನ್ ಪ್ರತಾಪ್ (Drone Prathap) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅವರು ಕಪ್ ಎತ್ತೋದು ಜಸ್ಟ್ ಮಿಸ್ ಆಗಿದೆ. ಆದರೆ, ಈ ಬಗ್ಗೆ ಅವರಿಗೆ ಬೇಸರ ಇಲ್ಲ. ಅವರಿಗೆ ಇಲ್ಲಿಯವರೆಗೆ ಬಂದಿದ್ದು ಸಾಕಷ್ಟು ಖುಷಿ ನೀಡಿದೆ. ಅವರು ಹಲವು ವರ್ಷಗಳ ಬಳಿಕ ಊರಿಗೆ ತೆರಳಿದ್ದಾರೆ. ಅಲ್ಲಿ ಅವರಿಗೆ ಕುಟುಂಬದಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಪ್ರತಾಪ್ ಊರಲ್ಲಿ ತಂದೆಯ ಜೊತೆ ಸೇರಿ ಮುದ್ದೆ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

‘ಬಿಗ್ ಬಾಸ್’ಗೆ ಬರುವುದಕ್ಕೂ ಮೊದಲು ಪ್ರತಾಪ್ ಬಗ್ಗೆ ಬೇರೆಯದೇ ರೀತಿಯ ಅಭಿಪ್ರಾಯ ಇತ್ತು. ಅವರನ್ನು ಎಲ್ಲರೂ ಸುಳ್ಳ ಎಂದೇ ಕರೆಯುತ್ತಿದ್ದರು. ಆದರೆ, ಬಿಗ್ ಬಾಸ್​ಗೆ ಬಂದ ಬಳಿಕ ಅವರ ಬಗ್ಗೆ ಸಿಂಪತಿ ಬೆಳೆಯಿತು. ಅವರು ಅನೇಕರಿಗೆ ಇಷ್ಟ ಆದರು. ಅವರ ಅಭಿಮಾನಿ ಬಳಗ ಕೂಡ ದೊಡ್ಡದಾಗಿದೆ. ಅವರು ಹಲವು ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗಿದ್ದರು. ಈಗ ಅವರು ಹಲವು ವರ್ಷಗಳ ಬಳಿಕ ಹುಟ್ಟೂರಿಗೆ ಬಂದಿದ್ದಾರೆ.

ಊರಿಗೆ ಬಂದ ಪ್ರತಾಪ್​ಗೆ ಆರತಿ ಬೆಳಗಿ ಸ್ವಾಗತ ಮಾಡಲಾಗಿದೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಮುದ್ದೆ ಮಾಡಿ ಅವರು ಹೈಲೈಟ್ ಆಗಿದ್ದರು. ಹಳ್ಳಿ ಜನರ ಗಮನ ಸೆಳೆಯಲು ಪ್ರತಾಪ್ ಮುದ್ದೆ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಕೆಲವರು ಮಾಡಿದ್ದರು. ಈ ಆರೋಪ ಸುಳ್ಳು ಎಂದು ಪ್ರತಾಪ್ ಸಮರ್ಥಿಸಿಕೊಂಡಿದ್ದರು. ‘ನಾನು ಊರಿನಲ್ಲಿ ಮುದ್ದೆ ಮಾಡಿದ್ದೆ’ ಎಂದು ಅವರು ಹೇಳಿದ್ದರು.

ಡ್ರೋನ್ ಪ್ರತಾಪ್ ಬಗ್ಗೆ ಮಾಡಿದ ಪೋಸ್ಟ್

ಇದನ್ನೂ ಓದಿ: ಮಾಜಿ ಸಿಎಂ ಕುಮಾರಸ್ವಾಮಿ ಹೆಸರು ಬಳಸಿ ವಂಚನೆ: ಡ್ರೋನ್ ಪ್ರತಾಪ್ ವಿರುದ್ಧ ದೂರು

ಈಗ ಅವರು ಹಳ್ಳಿಗೆ ಮರಳಿದ ಬಳಿಕ ತಂದೆಯ ಜೊತೆ ಸೇರಿ ಮುದ್ದೆ ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗುತ್ತಿದೆ. ‘ಬಿಗ್ ಬಾಸ್’ನಿಂದ ಪ್ರತಾಪ್ ಜರ್ನಿ ಬದಲಾಗಿದೆ. ಕಾರಣಾಂತರಗಳಿಂದ ದೂರ ಇದ್ದ ತಂದೆ-ತಾಯಿ ಮರಳಿ ಸಿಕ್ಕಿದ್ದಾರೆ. ಇದು ಅವರ ಖುಷಿ ಹೆಚ್ಚಿಸಿದೆ. ವೀಕೆಂಡ್​ನಲ್ಲಿ ಪ್ರಸಾರ ಕಂಡ ‘ಗಿಚ್ಚಿ ಗಿಲಿಗಿಲಿ ಸೀಸನ್ 3’ನ ಮೊದಲ ಎಪಿಸೋಡ್​ನಲ್ಲಿ ಪ್ರತಾಪ್ ಕಾಣಿಸಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

 

Published On - 7:30 am, Mon, 5 February 24