‘ಸಿಂಪತಿಯಿಂದಲೇ ಇಲ್ಲಿಯವರೆಗೆ ಬಂದಿದ್ದಾನೆ’; ಡ್ರೋನ್ ಪ್ರತಾಪ್ ಬಗ್ಗೆ ಮೈಕಲ್ ಆರೋಪ

ಬಿಗ್ ಬಾಸ್ ಮನೆಯಲ್ಲಿ ಮೈಕಲ್ ಅಜಯ್ ಅವರಿಗೆ ದುರಹಂಕಾರ ನೆತ್ತಿಗೇರಿದೆ ಎಂದು ಕೆಲವರು ಹೇಳಿದ್ದಿದೆ. ಇದನ್ನು ಮೈಕಲ್ ಪದೇ ಪದೇ ಸಾಬೀತು ಮಾಡಿಕೊಳ್ಳುತ್ತಿದ್ದಾರೆ. ಈಗ ಪ್ರತಾಪ್ ಅಭಿಮಾನಿಗಳ ದ್ವೇಷ ಕಟ್ಟಿಕೊಂಡಿದ್ದಾರೆ.

‘ಸಿಂಪತಿಯಿಂದಲೇ ಇಲ್ಲಿಯವರೆಗೆ ಬಂದಿದ್ದಾನೆ’; ಡ್ರೋನ್ ಪ್ರತಾಪ್ ಬಗ್ಗೆ ಮೈಕಲ್ ಆರೋಪ
ಮೈಕಲ್-ಪ್ರತಾಪ್

Updated on: Dec 20, 2023 | 8:04 AM

ಬಿಗ್ ಬಾಸ್ ಮನೆಯಲ್ಲಿರುವ ಡ್ರೋನ್ ಪ್ರತಾಪ್ (Prathap) ಅವರು ಉತ್ತಮವಾಗಿ ಆಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹಲವು ಟಾಸ್ಕ್​ಗಳನ್ನು ಅವರು ಒಳ್ಳೆಯ ರೀತಿಯಲ್ಲಿ ಆಡಿದ್ದಾರೆ. ಡ್ರೋನ್ ಪ್ರತಾಪ್ ಅವರು ಸಂತ್ರಸ್ತನಂತೆ ವರ್ತಿಸಿ ಸಿಂಪತಿ ಗಿಟ್ಟಿಸಿಕೊಳ್ಳುತ್ತಾರೆ ಅನ್ನೋದು ದೊಡ್ಮನೆಯಲ್ಲಿರುವ ಅನೇಕರ ಆರೋಪ. ಮೈಕಲ್ ಅಜಯ್ ಅವರು ಈಗ ಇದೇ ರೀತಿಯ ಆರೋಪ ಮಾಡಿದ್ದಾರೆ. ನಾಮಿನೇಷನ್ ವೇಳೆ ಅವರು ಪ್ರತಾಪ್ ವಿರುದ್ಧ ಕೆಲವು ಗಂಭೀರ ಆರೋಪ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಮೈಕಲ್ ಅಜಯ್ ಅವರು ಉತ್ತಮ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಅವರು ಲಾಯಲ್ ಆಗಿರುತ್ತಿದ್ದರು. ಆದರೆ, ಇತ್ತೀಚೆಗೆ ಅವರ ಆಟದ ವೈಖರಿ ಬದಲಾದಂತೆ ಇದೆ. ಅವರು ಆಟವನ್ನು ಬೇರೆಯದೇ ರೀತಿಯಲ್ಲಿ ಆಡುತ್ತಿದ್ದಾರೆ. ಅವರಿಗೆ ದುರಹಂಕಾರ ನೆತ್ತಿಗೇರಿದೆ ಎಂದು ಕೆಲವರು ಹೇಳಿದ್ದಿದೆ. ಇದನ್ನು ಮೈಕಲ್ ಪದೇ ಪದೇ ಸಾಬೀತು ಮಾಡಿಕೊಳ್ಳುತ್ತಿದ್ದಾರೆ. ಈಗ ಪ್ರತಾಪ್ ಅಭಿಮಾನಿಗಳ ದ್ವೇಷ ಕಟ್ಟಿಕೊಂಡಿದ್ದಾರೆ.

ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರತಾಪ್ ಹೆಸರನ್ನು ವಿನಯ್, ಮೈಕಲ್ ಮೊದಲಾದವರು ತೆಗೆದುಕೊಂಡರು. ‘ಪ್ರತಾಪ್ ಹಳ್ಳಿ ಕಾರ್ಡ್​ ಪ್ಲೇ ಮಾಡುತ್ತಾರೆ’ ಎಂದು ವಿನಯ್ ಹೇಳಿದರು. ಆ ಬಳಿಕ ಬಂದ ಮೈಕಲ್ ಅವರು ಸಿಂಪತಿ ವಿಚಾರ ತೆಗೆದರು. ‘ಪ್ರತಾಪ್​ಗೆ ಇಲ್ಲಿ ಗೊತ್ತಿರೋದು ಒಂದೇ. ಸಿಂಪತಿ ಕ್ರಿಯೇಟ್ ಮಾಡಿಕೊಳ್ಳೋದು. ಅದರಿಂದಲೇ ಅವನು ಇಲ್ಲಿಯವರೆಗೆ ಬಂದಿದ್ದಾನೆ. ಇದು ಆಡಿಯನ್ಸ್​ಗೆ ಗೊತ್ತಾಗಬೇಕು. ಅವನು ನಾಮಿನೇಟ್ ಆಗಿ ಹೊರಹೋಗಬೇಕು’ ಎಂದು ಮೈಕಲ್ ಹೇಳಿದರು.

ಇದನ್ನೂ ಓದಿ: ‘ಉಳಿದವರೆಲ್ಲ ಒಂದು, ನಾವಿಬ್ಬರು ಒಂದು’; ಪ್ರತಾಪ್ ಎದುರು ಸಂಗೀತಾ ಬೇಸರ

ಇತ್ತೀಚೆಗೆ ಹೊರ ಹೋಗಿರುವ ಸ್ನೇಹಿತ್ ಅವರು ಪ್ರತಾಪ್ ಆಟದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ‘ನಾವು ರೋಡಿಸ್ ಆಡಿದ್ವಿ. ಪ್ರತಾಪ್ ನಿಜವಾದ ಬಿಗ್ ಬಾಸ್ ಆಡುತ್ತಿದ್ದಾನೆ. ಫಿನಾಲೆಯಲ್ಲಿ ಅವನೂ ಇರುತ್ತಾನೆ’ ಎಂದಿದ್ದರು. ಅವರು ದೊಡ್ಮನೆ ಒಳಗೆ ಇರುವಾಗ ಪ್ರತಾಪ್​ನ ವಿರೋಧಿಸುತ್ತಿದ್ದರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ಅವರು ಪ್ರತಾಪ್​ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us