AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಉಳಿದವರೆಲ್ಲ ಒಂದು, ನಾವಿಬ್ಬರು ಒಂದು’; ಪ್ರತಾಪ್ ಎದುರು ಸಂಗೀತಾ ಬೇಸರ

ಕಾರ್ತಿಕ್ ಅವರು ವಿನಯ್ ಅವರತ್ತ ಹೆಚ್ಚು ವಾಲಿದ್ದಾರೆ. ಈ ಕಾರಣದಿಂದಲೇ ಸಂಗೀತಾಗೆ ಹಿನ್ನಡೆ ಆಗಿದೆ. ಅವರು ಮನೆಯಲ್ಲಿ ಏಕಾಂಗಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಉಳಿದವರೆಲ್ಲ ಒಂದು, ನಾವಿಬ್ಬರು ಒಂದು’; ಪ್ರತಾಪ್ ಎದುರು ಸಂಗೀತಾ ಬೇಸರ
ಸಂಗೀತಾ
ರಾಜೇಶ್ ದುಗ್ಗುಮನೆ
|

Updated on:Dec 20, 2023 | 7:32 AM

Share

ಸಂಗೀತಾ ಶೃಂಗೇರಿಗೆ (Sangeetha Sringeri)  ಬಿಗ್ ಬಾಸ್ ಮನೆಯಲ್ಲಿ ಒಂಟಿತನ ಅತಿಯಾಗಿ ಕಾಡಿದೆ. ಇತ್ತೀಚೆಗೆ ನಡೆದ ಬೆಳವಣಿಗೆಗಳು ಇದಕ್ಕೆ ಕಾರಣ. ಈ ಬಗ್ಗೆ ಸಂಗೀತಾ ಸಾಕಷ್ಟು ಬೇಸರು ಮಾಡಿಕೊಂಡಿದ್ದಾರೆ. ‘ಈಗ ನನ್ನ ಸೈಡ್​ನಲ್ಲಿ ಇರೋದು ನೀನು ಮಾತ್ರ’ ಎಂದು ಪ್ರತಾಪ್​ಗೆ ಹೇಳಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಡಿಸೆಂಬರ್ 19ರಂದು ಪ್ರಸಾರ ಕಂಡಿದೆ. ‘ನಿಮ್ಮ ಕಡೆ ನಾವಿದ್ದೇವೆ’ ಎಂದು ಸಂಗೀತಾ ಶೃಂಗೇರಿ ಅಭಿಮಾನಿಗಳು ಹೇಳಿದ್ದಾರೆ.

ಬಿಗ್ ಬಾಸ್​ನಲ್ಲಿ ಸಂಗೀತಾ, ತನಿಷಾ, ಕಾರ್ತಿಕ್, ಪ್ರತಾಪ್ ಸಾಮಾನ್ಯವಾಗಿ ಒಟ್ಟಾಗಿ ಇರುತ್ತಿದ್ದರು. ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರು ತಮ್ಮದೇ ಗ್ಯಾಂಗ್ ಮಾಡಿಕೊಂಡಿದ್ದಾರೆ. ಈಗ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಜಗಳ ಆಗಿದೆ. ಕಾರ್ತಿಕ್ ಅವರು ವಿನಯ್ ಅವರತ್ತ ಹೆಚ್ಚು ವಾಲಿದ್ದಾರೆ. ಈ ಕಾರಣದಿಂದಲೇ ಸಂಗೀತಾಗೆ ಹಿನ್ನಡೆ ಆಗಿದೆ. ಅವರು ಮನೆಯಲ್ಲಿ ಏಕಾಂಗಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ವಿನಯ್​ಗೆ ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾನೆ’ ಎಂದು ಹೇಳಿದ್ದರು ಸಂಗೀತಾ. ಇದಾದ ಬಳಿಕ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಕಿರಿಕ್ ಆಗಿದೆ. ವಿನಯ್​ನಿಂದ ಮೊದಲೇ ದ್ವೇಷ ಕಟ್ಟಿಕೊಂಡಿದ್ದ ಅವರು ಈಗ ಕಾರ್ತಿಕ್​ನಿಂದಲೂ ದೂರ ಆಗಿದ್ದಾರೆ. ತನಿಷಾ ಕೂಡ ಸಂಗೀತಾ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಸಂಗೀತಾ ಬೇಸರಕ್ಕೆ ಕಾರಣ ಆಗಿದೆ.

ಇದನ್ನೂ ಓದಿ: ‘ಮೂರೇ ದಿನದಲ್ಲಿ ಹಳೆಯ ಪಿಕ್ಚರ್ ಬರುತ್ತೆ’; ಕಾರ್ತಿಕ್-ಸಂಗೀತಾ ಜಗಳದ ಬಗ್ಗೆ ವರ್ತೂರು ಸಂತೋಷ್ ಮಾತು

ವಾಶ್​ರೂಂ ಏರಿಯಾದಲ್ಲಿ ಸಂಗೀತಾ ಕುಳಿತಿದ್ದರು. ಈ ವೇಳೆ ಅವರು ಪ್ರತಾಪ್ ಜೊತೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ನಾವಿಬ್ಬರೇ ಒಂದು, ಉಳಿದವರೆಲ್ಲ ಒಂದು. ಇನ್ನು ಎಲ್ಲರೂ ನಮ್ಮನ್ನೇ ಟಾರ್ಗೆಟ್ ಮಾಡುತ್ತಾರೆ’ ಎಂದು ಬೇಸರ ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:32 am, Wed, 20 December 23

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?