ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ತಲೆ ಮರೆಸಿಕೊಂಡ್ರಾ? ಕೇಸ್ ಹಾಕಿದ ಬಳಿಕ ಸಿಕ್ತು ಸ್ಪಷ್ಟನೆ
ಪಲ್ಲವಿ ಪ್ರಶಾಂತ್ ಅವರ ಬೆಂಬಲಿಗರು ಬಿಗ್ ಬಾಸ್ ನಡೆಯುತ್ತಿದ್ದ ಸ್ಟುಡಿಯೋ ಎದುರು ಜಮಾಯಿಸಿದ್ದರು. ಕೆಲವು ಕಾರುಗಳಿಗೆ ಹಾನಿ ಮಾಡಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಕಿಡಿಗೇಡಿಗಳನ್ನು ಗುರುತಿಸಲಾಗಿದೆ. ಪೊಲೀಸರು ವಿಚಾರಣೆಗಾಗಿ ಪಲ್ಲವಿ ಪ್ರಶಾಂತ್ ಅವರ ಮನೆಗೆ ಭೇಟಿ ನೀಡಿದಾಗ ಅಲ್ಲಿ ಅವರು ಇರಲಿಲ್ಲ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಿವಾದಗಳು ಸಹಜ. ಆದರೆ ಈ ಶೋ ಮುಗಿದ ನಂತರವೂ ವಿವಾದ ಮುಂದುವರಿಯುವುದು ವಿಪರ್ಯಾಸ. ‘ಬಿಗ್ ಬಾಸ್ ತೆಲುಗು ಸೀಸನ್ 7’ (Bigg Boss Telugu 7) ರಿಯಾಲಿಟಿ ಶೋ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಈ ಕಾರ್ಯಕ್ರಮದ ಫಿನಾಲೆಯಲ್ಲಿ ಪಲ್ಲವಿ ಪ್ರಶಾಂತ್ (Pallavi Prashanth) ಅವರು ಟ್ರೋಫಿ ಎತ್ತಿದ್ದಾರೆ. ವಿನ್ ಆದ ಬಳಿಕ ಅವರ ಮೇಲೆ ಒಂದಷ್ಟು ಆರೋಪಗಳು ಎದುರಾಗಿವೆ. ಆ ನಂತರ ಅವರು ತಲೆ ಮರೆಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದಕ್ಕೆ ಈಗ ಅವರೇ ಒಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಪ್ರತಿ ಬಾರಿಯೂ ಬಿಗ್ ಬಾಸ್ ಶೋನಲ್ಲಿ ವಿನ್ನರ್ ಹೆಸರು ಅನೌನ್ಸ್ ಆದ ಬಳಿಕ ಕೆಲವರು ಅಸಮಾಧಾನ ಹೊರಹಾಕುತ್ತಾರೆ. ತಮಗೆ ಬೇಕಾದ ಸ್ಪರ್ಧಿ ಗೆಲ್ಲಲಿಲ್ಲ ಎಂದು ಒಂದಷ್ಟು ಮಂದಿ ಕೂಗಾಡುತ್ತಾರೆ. ಹೀಗೆ ಪರ-ವಿರೋಧದ ಚರ್ಚೆ ನಡೆಯುತ್ತದೆ. ಈ ಬಾರಿಯ ತೆಲುಗು ಬಿಗ್ ಬಾಸ್ ಮುಗಿದ ಬಳಿಕ ಕೆಲವು ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ. ಆ ಬಳಿಕ ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಮತ್ತು ಅವರ ಬೆಂಬಲಿಗರ ವಿರುದ್ಧ ಕೇಸ್ ದಾಖಲಾಗಿದೆ.
View this post on Instagram
ಪಲ್ಲವಿ ಪ್ರಶಾಂತ್ ಅವರ ಬೆಂಬಲಿಗರು ಬಿಗ್ ಬಾಸ್ ನಡೆಯುತ್ತಿದ್ದ ಸ್ಟುಡಿಯೋ ಎದುರು ಜಮಾಯಿಸಿದ್ದರು. ಕೆಲವು ಕಾರುಗಳಿಗೆ ಹಾನಿ ಮಾಡಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ಕಿಡಿಗೇಡಿಗಳನ್ನು ಗುರುತಿಸಲಾಗಿದೆ. ಪೊಲೀಸರು ವಿಚಾರಣೆಗಾಗಿ ಪಲ್ಲವಿ ಪ್ರಶಾಂತ್ ಅವರ ಮನೆಗೆ ಭೇಟಿ ನೀಡಿದಾಗ ಅಲ್ಲಿ ಅವರು ಇರಲಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ತಲೆ ಮರೆಸಿಕೊಂಡಿದ್ದಾರೆ ಎಂಬ ಸುದ್ದಿ ಹರಡಿದೆ.
ಇದನ್ನೂ ಓದಿ: ತೆಲುಗು ಬಿಗ್ಬಾಸ್ ಗೆದ್ದ ಪಲ್ಲವಿ ಪ್ರಶಾಂತ್ ಯಾರು?
ಕೇಸ್ ಬಿದ್ದ ಬಳಿಕ ಪಲ್ಲವಿ ಪ್ರಶಾಂತ್ ಅವರ ಫೋನ್ ಆಫ್ ಆಗಿದೆ. ಇದಕ್ಕೆ ಕಾರಣ ಏನು ಎಂದು ಅವರು ತಿಳಿಸಿದ್ದಾರೆ. ‘ನಿನ್ನೆಯಿಂದ ನಾನು ಮನೆಯಲ್ಲೇ ಇದ್ದೆ. ಎಲ್ಲಿಯೂ ತಲೆ ಮರೆಸಿಕೊಂಡಿಲ್ಲ. ಫೋನ್ ಹಾಳಾಗಿದ್ದರಿಂದ ಸ್ವಿಚ್ ಆಫ್ ಆಗಿತ್ತು’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪಲ್ಲವಿ ಪ್ರಶಾಂತ್ ಅವರನ್ನು ಎ1 ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದ್ದರಿಂದ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.