ತಾಳ್ಮೆ ಕಳೆದುಕೊಂಡ ತುಕಾಲಿ ಸಂತು, ಮೈಖಲ್ಗೆ ಬಿತ್ತು ಏಟು
Tukali Santhosh: ಬಿಗ್ಬಾಸ್ ಮನೆಯಲ್ಲಿ ನಗುತ್ತಾ, ನಗಿಸುತ್ತಾ ಜಾಲಿಯಾಗಿರುವ ತುಕಾಲಿ ಸಂತು, ಇಂದಿನ ಟಾಸ್ಕ್ನಲ್ಲಿ ತಾಳ್ಕೆ ಕಳೆದುಕೊಂಡು ಮೈಖಲ್ಗೆ ಹೊಡೆದೇ ಬಿಟ್ಟರು.
ಬಿಗ್ಬಾಸ್ (BiggBoss) ಮನೆಯಲ್ಲಿ ತುಕಾಲಿ ಸಂತು ಸದಾ ಕಾಮಿಡಿ ಮಾಡುತ್ತಾ, ಅವರಿವರ ಕಾಲೆಳೆಯುತ್ತಾ, ನಾಮಿನೇಷನ್ ಬಂದಾಗಷ್ಟೆ ನೇರವಾಗಿ, ತುಸು ಗಟ್ಟಿಯಾಗಿ ಮಾತನಾಡುತ್ತಾರೆ. ಆದರೆ ತುಕಾಲಿ ಬುಧವಾರ ಪ್ರಸಾರವಾದ ಎಪಿಸೋಡ್ನಲ್ಲಿ ತುಸು ಅಗ್ರೆಸಿವ್ ಆಗಿದ್ದರು, ತಾಳ್ಮೆ ಕಳೆದುಕೊಂಡು ಮೈಖಲ್ಗೆ ಒಂದು ಏಟು ಸಹ ಹೊಡೆದೇ ಬಿಟ್ಟರು.
ಆಗಿದ್ದಿಷ್ಟು ಕೊಳೆ ಒಳ್ಳೆಯದಲ್ಲ ಎಂಬ ಟಾಸ್ಕ್ ಅನ್ನು ಬಿಗ್ಬಾಸ್ ಸ್ಪರ್ಧಿಗಳಿಗೆ ನೀಡಿದ್ದರು. ಆ ಟಾಸ್ಕ್ನ ಪ್ರಕಾರ, ಎರಡು ಗುಂಪುಗಳವರು ಎದುರಾಳಿ ಗುಂಪಿನ ಬಳಿ ಇರುವ ಬಟ್ಟೆಯನ್ನು ಬಣ್ಣಗಳಿಂದ ಕೊಳೆ ಮಾಡಬೇಕು, ಆ ಕೊಳೆಯಾದ ಬಟ್ಟೆಯನ್ನು ಒಗೆದು ಮತ್ತೆ ಒಣಗಿ ಹಾಕಬೇಕು, ಬಜರ್ ಆದಾಗ ಯಾರ ಬಟ್ಟೆಗಳು ಕಡಿಮೆ ಕೊಳೆಯಾಗಿರುತ್ತವೆಯೋ ಆ ತಂಡ ಗೆಲ್ಲುತ್ತದೆ. ಈ ಟಾಸ್ಕ್ನ ಎರಡನೇ ರೌಂಡ್ ಆಡುವಾಗ ಬಹಳ ಅಗ್ರೆಸಿವ್ ಆಗಿ ಆಡಿದ ವಿನಯ್ ಬೆರಳು ಮುರಿದುಕೊಂಡು ಆಟದಿಂದ ಹೊರಗೆ ಉಳಿದರು. ಕಾರ್ತಿಕ್ಗೆ ಸಹ ಏಟಾದ ಕಾರಣ ಅವರೂ ಸಹ ಆಟದಿಂದ ಹೊರಗೆ ಉಳಿದರು.
ಆಟಗಾರರ ಸಂಖ್ಯೆ ಕಡಿಮೆ ಆದ ಕಾರಣ ಬಿಗ್ಬಾಸ್ ಆಟಗಾರರ ಸಂಖ್ಯೆ ಕಡಿಮೆ ಮಾಡಿದರು. ಆಗ ಎದುರಾಳಿ ತಂಡದ ಬಟ್ಟೆ ಕೊಳೆ ಮಾಡಲು ತುಕಾಲಿ ಸಂತು ಹೋದರು, ರಕ್ಷಿಸಲು ಮೈಖಲ್ ಬಂದರು. ಆರಂಭದಲ್ಲಿ ಮೈಖಲ್ ತುಕಾಲಿಯನ್ನು ಕೈಗಳಿಂದ ಮುಟ್ಟದೆ ತಳ್ಳಿದರು, ಅವರನ್ನು ಎತ್ತಿಕೊಂಡು ಬಂದು ಮೈದಾನದ ಮಧ್ಯದಲ್ಲಿಟ್ಟರು. ಇದು ತುಕಾಲಿಗೆ ಹಿಡಿಸಲಿಲ್ಲ, ತುಕಾಲಿ, ಬಲಶಾಲಿಯಾದ ಮೈಖಲ್ ಅನ್ನು ತಳ್ಳಲು ಮೊಣಕೈ ಬಳಸಿದರು. ಇದರಿಂದ ಸಿಟ್ಟಾದ ಮೈಖಲ್, ನನಗೂ ಕೈ ಬಳಸಲು ಬರುತ್ತದೆ ಎಂದು ಮೂರು ಬಾರಿ ತುಸು ಜೋರಾಗಿ ತುಕಾಲಿಯನ್ನು ತಳ್ಳಿದರು. ಇದರಿಂದ ಸಿಟ್ಟಾದ ಮೈಖಲ್, ‘ನೀನು ಇಲ್ಲಿ ಆಡಬಹುದು, ನನಗೆ ಆಡಲು ಹೊರಗೆ ಜನರಿದ್ದಾರೆ’ ಎಂದು ಬೆದರಿಕೆ ಹಾಕಿದರು. ಬಳಿಕ ಮಾತು ಮುಂದುವರೆದಂತೆ, ಮುಷ್ಟಿಯಲ್ಲಿ ಮೈಖಲ್ ಎದೆಗೆ ಗುದ್ದಿದರು.
ಇದನ್ನೂ ಓದಿ:‘ಇಬ್ಬರು ಹೆಂಡಿರ ಮುದ್ದಿನ ಪೊಲೀಸ್’: ತುಕಾಲಿ ಸಂತು ಸಿನಿಮಾಗೆ ಸಿರಿ, ಭಾಗ್ಯಶ್ರೀ ಹೀರೋಯಿನ್
ಅಲ್ಲಿಯೇ ಇದ್ದ ಉಸ್ತುವಾರಿ ಸಿರಿ ಅವರು ಇಬ್ಬರನ್ನೂ ತಡೆದು ಎರಡು ನಿಮಿಷಗಳ ಕಾಲ ಇಬ್ಬರನ್ನೂ ಆಟದಿಂದ ಹೊರಗಿಟ್ಟರು. ತುಕಾಲಿ ಹೊಡೆದಿದ್ದನ್ನು ಮೈಖಲ್ ಗಂಭೀರವಾಗಿ ಪರಿಗಣಿಸಲಿಲ್ಲವಾದ್ದರಿಂದ ಆಟ ಹಾಗೆಯೇ ಮುಂದುವರೆಯಿತು. ಆ ಟಾಸ್ಕ್ನಲ್ಲಿ ತುಕಾಲಿ ತಂಡದವರು ಸೋಲು, ಮೈಖಲ್ ತಂಡದವರು ಗೆದ್ದರು. ಇದರಿಂದ ಇನ್ನಷ್ಟು ಬೇಸರಗೊಂಡ ತುಕಾಲಿ, ಸಿರಿ ಅವರ ಉಸ್ತುವಾರಿ ಸರಿಯಿಲ್ಲವೆಂದು, ಅಸಲಿಗೆ ಈ ಟಾಸ್ಕ್ ನಾವು ಗೆದ್ದಿದ್ದೇವೆಂದು ವಾದ ಮಂಡಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ