AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತೆಲುಗು ಬಿಗ್ ಬಾಸ್’ ಗೆದ್ದ ಪಲ್ಲವಿ ಪ್ರಶಾಂತ್ ಯಾರು? ಇಲ್ಲಿದೆ ರೈತನ ಮಗನ ಕಥೆ

Pallavi Prashanth: ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ನೀಡಿದ ಗೇಮ್ಸ್ ಮತ್ತು ಟಾಸ್ಕ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಹಲವು ಸ್ಪರ್ಧಿಗಳು ಅವರನ್ನು ಕೀಳಾಗಿ ಕಾಣುತ್ತಿದ್ದರೂ, ಕಟುವಾದ ಮಾತುಗಳಿಂದ ಮನ ನೋಯಿಸಿದರೂ ಗುರಿಯತ್ತ ಅವರು ಗಮನ ಹರಿಸಿದರು.

‘ತೆಲುಗು ಬಿಗ್ ಬಾಸ್’ ಗೆದ್ದ ಪಲ್ಲವಿ ಪ್ರಶಾಂತ್ ಯಾರು? ಇಲ್ಲಿದೆ ರೈತನ ಮಗನ ಕಥೆ
ಬಿಗ್ ಬಾಸ್ ವಿನ್ನರ್
ರಾಜೇಶ್ ದುಗ್ಗುಮನೆ
|

Updated on: Dec 18, 2023 | 11:25 AM

Share

ಪಲ್ಲವಿ ಪ್ರಶಾಂತ್ (Pallavi Prashanth) ಅವರು ‘ತೆಲುಗು ಬಿಗ್ ಬಾಸ್‌ ಸೀಸನ್ 7’ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಕಾಮನ್ ಮ್ಯಾನ್ ಆಗಿ ಮನೆ ಪ್ರವೇಶಿಸಿದ ರೈತನ ಮಗ ಈಗ ಟೈಟಲ್ ವಿನ್ನರ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ ಇತಿಹಾಸದಲ್ಲಿ ಸಾಮಾನ್ಯ ವಿಭಾಗದಲ್ಲಿ ಆಗಮಿಸಿ ಗೆದ್ದ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸರಿಯಾಗಿ ಮೂರು ತಿಂಗಳ ಹಿಂದೆ ಪಲ್ಲವಿ ಪ್ರಶಾಂತ್ ಯಾರು ಎಂಬುದು ಎಷ್ಟೋ ಜನರಿಗೆ ಗೊತ್ತಿರಲಿಲ್ಲ. ಈಗ ಅವರು ತೆಲುಗು ರಾಜ್ಯದಲ್ಲಿ ಫೇಮಸ್ ಆಗಿದ್ದಾರೆ.

‘ಬಿಗ್ ಬಾಸ್ ಏಳನೇ ಸೀಸನ್’ ಆರಂಭದಲ್ಲಿ ಅಕ್ಕಿ ಮೂಟೆ ಹೊತ್ತು ಪಲ್ಲವಿ ಪ್ರಶಾಂತ್ ಮನೆ ಪ್ರವೇಶಿಸಿದರು. ‘ಇಂತಹ ಅನೇಕರನ್ನು ನೋಡಿದ್ದೇವೆ. ಎಷ್ಟು ದಿನ ಇರುತ್ತಾರೋ ನೋಡೋಣ’ ಎಂದು ಅನೇಕರು ಮಾತನಾಡಿದ್ದರು. ಆದರೆ ಅವರ ಎಲ್ಲಾ ಊಹೆಗಳು ಮತ್ತು ಅಭಿಪ್ರಾಯಗಳು ತಪ್ಪು ಎಂದು ಸಾಬೀತುಪಡಿಸಲು ಅವರು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಪಲ್ಲವಿ ಪ್ರಶಾಂತ್ ಮನೆಯಲ್ಲಿ ತಮ್ಮ ಆಟದ ಶೈಲಿ ಮತ್ತು ಮಾತಿನ ಶೈಲಿಯಿಂದ ಎಲ್ಲರ ಮನ ಗೆದ್ದರು.

ಪಲ್ಲವಿ ಪ್ರಶಾಂತ್ ಬಿಗ್ ಬಾಸ್ ನೀಡಿದ ಗೇಮ್ಸ್ ಮತ್ತು ಟಾಸ್ಕ್ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಹಲವು ಸ್ಪರ್ಧಿಗಳು ಅವರನ್ನು ಕೀಳಾಗಿ ಕಾಣುತ್ತಿದ್ದರೂ, ಕಟುವಾದ ಮಾತುಗಳಿಂದ ಮನ ನೋಯಿಸಿದರೂ ಗುರಿಯತ್ತ ಅವರು ಗಮನ ಹರಿಸಿದರು. ಈಗ ಅವರು ಬಯಸಿದ್ದನ್ನು ಸಾಧಿಸಿದ್ದಾರೆ. ಬಿಗ್ ಬಾಸ್ ವಿಜೇತರಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಪಲ್ಲವಿ ಪ್ರಶಾಂತ್ ಮನೆಯೊಳಗೆ ಮಾತ್ರವಲ್ಲದೆ ಹೊರಗೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಪಲ್ಲವಿ ಪ್ರಶಾಂತ್ ಈಗಾಗಲೇ ಮದುವೆಯಾಗಿದ್ದಾರೆ ಮತ್ತು ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ ಎಂದು ಕೆಲವರು ನೆಗೆಟಿವ್ ಪ್ರಚಾರ ಮಾಡಿದರು. ಆದರೆ, ಇದು ಅವರ ಯಶಸ್ಸಿನ ಮೇಲೆ ಪರಿಣಾಮ ಬೀರಲಿಲ್ಲ. ಅವರಿಗೆ ರೈತರ ಬೆಂಬಲ ಸಿಕ್ಕಿತ್ತು. ಕಿರುತೆರೆ ನಟ ಅಮರದೀಪ್ ರನ್ನರ್​ ಅಪ್ ಆಗಿದ್ದಾರೆ. ಶಿವಾಜಿ ಎರಡನೇ ರನ್ನರ್​ ಅಪ್ ಆದರು.

ಇದನ್ನೂ ಓದಿ: ತೆಲುಗು ಬಿಗ್​ಬಾಸ್ ಫೈನಲಿಸ್ಟ್​ಗಳಿವರು: ರೈತನ ಮಗ ಚಾಂಪಿಯನ್

ವಿಜೇತರಾದ ನಂತರ ಪಲ್ಲವಿ ಪ್ರಶಾಂತ್ ಅವರು ತಮಗೆ ಸಿಕ್ಕ ಬಹುಮಾನದ ಹಣವನ್ನು ರೈತರಿಗಾಗಿ ವಿನಿಯೋಗಿಸುವುದಾಗಿ ಹೇಳಿದ್ದಾರೆ. ತಂದೆಗೆ ಕಾರನ್ನು ಮತ್ತು ತಾಯಿಗೆ ಹಾರವನ್ನು ಉಡುಗೊರೆಯಾಗಿ ನೀಡುವುದಾಗಿ ಬಿಗ್ ಬಾಸ್ ವೇದಿಕೆಯಲ್ಲಿ ಘೋಷಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭಾಶಯ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ