‘ಸಲಾರ್’ ಚಿತ್ರದಲ್ಲಿ ಅಷ್ಟೊಂದು ವೈಲೆನ್ಸ್ ಏಕೆ? ಉತ್ತರಿಸಿದ ಪ್ರಶಾಂತ್ ನೀಲ್

Salaar Movie: ‘ಸಲಾರ್ ಪಾರ್ಟ್​ 1: ಸೀಸ್​ಫೈರ್’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ. ಈ ದಿನಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಏಕೆ ಈ ಚಿತ್ರದಲ್ಲಿ ಹೆಚ್ಚು ವೈಲೆನ್ಸ್ ತೋರಿಸಲಾಗಿದೆ ಎಂಬುದರ ವಿವರಣೆ ನೀಡಿದ್ದಾರೆ.

‘ಸಲಾರ್’ ಚಿತ್ರದಲ್ಲಿ ಅಷ್ಟೊಂದು ವೈಲೆನ್ಸ್ ಏಕೆ? ಉತ್ತರಿಸಿದ ಪ್ರಶಾಂತ್ ನೀಲ್
ಪ್ರಶಾಂತ್​ ನೀಲ್​, ಪ್ರಭಾಸ್​
Follow us
|

Updated on:Dec 18, 2023 | 10:21 AM

‘ಸಲಾರ್ ಪಾರ್ಟ್​ 1: ಸೀಸ್​ಫೈರ್’ ಸಿನಿಮಾ ಡಿಸೆಂಬರ್ 22ರಂದು ರಿಲೀಸ್ ಆಗಲಿದೆ. ಈ ದಿನಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ತಂಡ ಭಾಗಿ ಆಗಿದೆ. ಇದನ್ನು ಮೋಸ್ಟ್ ವೈಲೆಂಟ್ ಸಿನಿಮಾ ಎಂದು ಪ್ರಭಾಸ್ ಕರೆದಿದ್ದಾರೆ. ಪ್ರಶಾಂತ್ ನೀಲ್ (Prashanth Neel) ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಏಕೆ ಈ ಚಿತ್ರದಲ್ಲಿ ಹೆಚ್ಚು ವೈಲೆನ್ಸ್ ತೋರಿಸಲಾಗಿದೆ ಎಂಬುದರ ವಿವರಣೆ ನೀಡಿದ್ದಾರೆ.

ಇಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ನೀಲ್​ ಮಾತನಾಡಿದ್ದಾರೆ. ‘ಹಿಂಸಾಚಾರ ಭಾವನೆಯೊಂದಿಗೆ ಮಾತ್ರ ಬರುತ್ತದೆ. ಮಾಸ್ ಸಿನಿಮಾಗಳನ್ನು ಜನರು ನೋಡುತ್ತಾರೆ ಅನ್ನೋದು ಗೊತ್ತು. ಮಾಸ್ ಸಿನಿಮಾ ಎಂದಾಗ ಅದರಲ್ಲಿ ಹಿಂಸಾಚಾರ ಇರುತ್ತದೆ. ವೈಲೆನ್ಸ್ ಹೆಚ್ಚಿದ್ದಷ್ಟು ಸಿನಿಮಾ ಮಾಸ್ ಆಗುತ್ತ ಹೋಗುತ್ತದೆ’ ಎಂದಿದ್ದಾರೆ ಪ್ರಶಾಂತ್ ನೀಲ್. ಈ ಮೂಲಕ ‘ಸಲಾರ್’ ಚಿತ್ರದಲ್ಲಿ ಮಾಸ್ ಅಂಶ ಹೆಚ್ಚಿದೆ ಎಂಬುದನ್ನು ಅವರು ಹೇಳಿದ್ದಾರೆ.

‘ಸಲಾರ್ ಮಾಸ್ ಸಿನಿಮಾ. ಈ ಸಿನಿಮಾ ಹಿಂದೆ ಒಂದು ಭಾವನೆ ಇದೆ. ಹಿಂಸೆ ಬರುವುದು ಆ ಭಾವನೆಯಿಂದಲೇ. ಹಾಗಾಗಿ ನಾವು ಸಿನಿಮಾದ ಭಾವನೆಗಳಿಂದ ನಮ್ಮನ್ನು ನಿರ್ಬಂಧಿಸಿಕೊಂಡಿದ್ದೆವು.  ಸಿನಿಮಾಗಾಗಿ ನಾವು ಹೆಚ್ಚು ಶ್ರಮ ಹಾಕಿದ್ದೇವೆ’ ಎಂದಿದ್ದಾರೆ ಪ್ರಶಾಂತ್ ನೀಲ್. ಯಶ್ ಅವರನ್ನು ಪ್ರಶಾಂತ್ ನೀಲ್ ಹೊಗಳಿದ್ದು, ಈ ಫ್ರೆಂಡ್​ಶಿಪ್ ಲೈಫ್​ಟೈಮ್ ಇರುತ್ತದೆ ಎಂದು ಹೊಗಳಿದ್ದಾರೆ.

ಇದನ್ನೂ ಓದಿ: Prabhas: ಪ್ರಭಾಸ್​ಗಾಗಿ ‘ಸಲಾರ್’ ಪ್ರಮೋಷನ್​ಗೆ ಬರಲಿದ್ದಾರೆ ನಿರ್ದೇಶಕ ರಾಜಮೌಳಿ 

ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮೊದಲಾದವರು ಪ್ರಮುಖ ಪಾತ್ರ ಮಾಡಿದ್ದಾರೆ. ಇದು ಫ್ರೆಂಡ್ಸ್ ಇಬ್ಬರ ಜರ್ನಿ. ವಿಜಯ್ ಕಿರಗಂದೂರು ಅವರು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶುಕ್ರವಾರ (ಡಿಸೆಂಬರ್ 22) ತೆಲುಗು, ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.  ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘ಎ’ ಸರ್ಟಿಫಿಕೇಟ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:20 am, Mon, 18 December 23

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ