ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಗಗನ್; ಆಟಕ್ಕೆ ಸಿಕ್ಕಿತು ಮೈಲೇಜ್

ಬಿಗ್ ಬಾಸ್ ಮನೆಯಲ್ಲಿ ನಡೆದ ಕಠಿಣ ಟಾಸ್ಕ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಗಗನ್ ಅವರು ಈ ವಾರದ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿದ್ದಾರೆ. ಇದರೊಂದಿಗೆ ಅವರು ಎಲಿಮಿನೇಷನ್ ಮತ್ತು ನಾಮಿನೇಷನ್‌ನಿಂದ ಬಚಾವ್ ಆಗಿದ್ದು, ತಮ್ಮ ಆಟವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ದೊಡ್ಡ ಅವಕಾಶ ಹಾಗೂ ಮೈಲೇಜ್ ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಗಗನ್; ಆಟಕ್ಕೆ ಸಿಕ್ಕಿತು ಮೈಲೇಜ್
Bbk (3)

Updated on: Oct 16, 2026 | 10:33 PM

ಮುಖ್ಯಾಂಶಗಳು

  • ಕ್ಯಾಪ್ಟನ್ ಪಟ್ಟ ಗಗನ್ ಪಾಲು
  • ಬಿಗ್ ಬಾಸ್ ಮನೆಯಲ್ಲಿ ರೋಚಕ ಟಾಸ್ಕ್ ಗೆದ್ದು ಬೀಗಿದ ಸ್ಪರ್ಧಿ
  • ನಾಮಿನೇಷನ್‌ನಿಂದ ಬಚಾವ್

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗೋದು ತುಂಬಾನೇ ಮುಖ್ಯವಾಗುತ್ತದೆ. ಇದಕ್ಕೆ ಕಾರಣವೂ ಇದೆ. ಈ ರೀತಿ ಕ್ಯಾಪ್ಟನ್ ಆದವರು ಎಲಿಮಿನೇಷನ್ ಎಂಬ ಭೂತದಿಂದ ಶ್ರೀರಕ್ಷೆ ಪಡೆಯುತ್ತಾರೆ. ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ. ಈಗ ಗಗನ್ ಅವರು ಕ್ಯಾಪ್ಟನ್ ಆಗಿದ್ದಾರೆ. ಇದು ಅವರ ಆಟಕ್ಕೆ ದೊಡ್ಡ ಮೈಲೇಜ್ ಸಿಕ್ಕಿದೆ.

ಬಿಗ್ ಬಾಸ್​ಗೆ ಹೋಗಬೇಕು ಎಂಬುದು ಪ್ರತಿಯೊಬ್ಬನ ಕನಸು. ಈ ಕನಸು ನನಸು ಮಾಡಿಕೊಳ್ಳಬೇಕು ಎಂದು ಸಾಕಷ್ಟು ಶ್ರಮ ಹಾಕಲಾಗುತ್ತದೆ. ಈ ರೀತಿ ಬಿಗ್ ಬಾಸ್ ಮನೆಗೆ ಹೋದವರು ಕ್ಯಾಪ್ಟನ್ ಆಗಬೇಕು ಎಂದು ಕನಸು ಕಾಣುತ್ತಾರೆ. ಆದರೆ, ಎಲ್ಲರಿಗೂ ಈ ಅದೃಷ್ಟ ಒಲಿಯೋದಿಲ್ಲ.

ಗಗನ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬಂದು ಹಲವು ವಾರಗಳ ಬಳಿಕ ಕ್ಯಾಪ್ಟನ್ ಆಗಿದ್ದಾರೆ. ಅವರು ಟಾಸ್ಕ್ ಆಡಿ ವಿನ್ ಆಗಿದ್ದಾರೆ. ಈ ಓಟದಲ್ಲಿ ಗಾನವಿ, ಕಿರಣ್ ಶಾಸ್ತ್ರಿ, ಗಗನ್ ಹಾಗೂ ಯಶಸ್ ಇದ್ದರು. ತಮಗೆ ನೀಡಿದ ನೀರನ್ನು ಉಳಿಸಿಕೊಳ್ಳುವ ಟಾಸ್ಕ್ ಅಲ್ಲಿ ಮೊದಲು ಕಿರಣ್ ಔಟ್ ಆದರೆ, ಆ ಬಳಿಕ ಗಾನವಿ ಹೊರಕ್ಕೆ ಹೋದರು.

ಇದನ್ನೂ ಓದಿ: ಅತ್ಯುತ್ತಮ ಅವಾರ್ಡ್ ಪಡೆದ ಯಶಸ್, ಮನೆ ಮಂದಿ ಮೆಚ್ಚುಗೆ

ಕೊನೆಯಲ್ಲಿ ಯಶಸ್ ಹಾಗೂ ಗಗನ್ ಮಧ್ಯೆ ಭಾರೀ ಪೈಪೋಟಿ ನಡೆಯಿತು. ಈ ವಾರ ಗಗನ್ ಅವರಿಗೆ ಕ್ಯಾಪ್ಟನ್ ಪಟ್ಟ ಸಿಕ್ಕಿದೆ. ಅವರು ಈ ವಾರ ನಾಮಿನೇಷನ್ ಆಗಿಲ್ಲ. ಹೀಗಾಗಿ, ಮುಂದಿನ ವಾರದ ನಾಮಿನೇಷ್​​​ನಿಂದ ಬಚಾವ್ ಆಗಿದ್ದಾರೆ. ಒಂದು ವಾರ ಈ ರೀತಿಯ ಅವಕಾಶ ಸಿಕ್ಕರೂ ಅನೇಕ ಸ್ಪರ್ಧಿಗಳಿಗೆ ಅದನ್ನು ಪ್ರೂವ್ ಮಾಡಿಕೊಳ್ಳುವ ಅವಕಾಶ ಸಿಕ್ಕಂತೆ. ಇದನ್ನು ಗಗನ್ ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:24 pm, Fri, 16 October 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us