ಮತ್ತೆ ವೈಯಕ್ತಿಕ ಆಟವನ್ನೇ ಮರೆತ ಗೌತಮಿ-ಮಂಜು; ಟೀಕಿಸಿದ ಹನುಮಂತ

|

Updated on: Dec 04, 2024 | 7:19 AM

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಗೌತಮಿ ಅವರು ಆರಂಭದಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದರು. ಏನೇ ಇದ್ದರೂ ವೈಯಕ್ತಿಕವಾಗಿ ತಮ್ಮ ವಿಚಾರ ಏನಿದೆ ಅದನ್ನು ಹೇಳುತ್ತಿದ್ದರು. ಈಗ ಮಂಜು ಹಾಗೂ ಗೌತಮಿ ಪರಸ್ಪರ ಬೆಂಬಲ ನೀಡುತ್ತಾ ಬರುತ್ತಿದ್ದಾರೆ.

ಮತ್ತೆ ವೈಯಕ್ತಿಕ ಆಟವನ್ನೇ ಮರೆತ ಗೌತಮಿ-ಮಂಜು; ಟೀಕಿಸಿದ ಹನುಮಂತ
ಗೌತಮಿ-ಮಂಜು
Follow us on

ಬಿಗ್ ಬಾಸ್ ಮನೆಯಲ್ಲಿ ಗೌತಮಿ ಜಾಧವ್ ಅವರು ಆರಂಭದಲ್ಲಿ ವೈಯಕ್ತಿಕವಾಗಿ ಹೆಚ್ಚು ಗುರುತಿಸಿಕೊಳ್ಳುತ್ತಿದ್ದರು. ಆದರೆ, ದಿನ ಕಳೆದಂತೆ ಈ ಆಟ ಬದಲಾಗುತ್ತಾ ಬಂತು. ಈಗ ಅವರು ಸಂಪೂರ್ಣವಾಗಿ ಮಂಜು ನೆರಳಲ್ಲೇ ಕಳೆದು ಹೋದರಾ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಈಗ ಇದು ಪದೇ ಪದೇ ಸಾಬೀತಾಗುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಗೌತಮಿ ಅವರು ಆರಂಭದಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದರು. ಏನೇ ಇದ್ದರೂ ವೈಯಕ್ತಿಕವಾಗಿ ತಮ್ಮ ವಿಚಾರ ಏನಿದೆ ಅದನ್ನು ಹೇಳುತ್ತಿದ್ದರು. ಮಂಜು, ಮೋಕ್ಷಿತಾ ಹಾಗೂ ಗೌತಮಿ ಒಂದು ತಂಡವಾಗಿ ಗುರುತಿಸಿಕೊಂಡರು. ಆದರೆ, ದಿನ ಕಳೆದಂತೆ ಮಂಜು ಹಾಗೂ ಗೌತಮಿ ಒಂದು ತಂಡದಲ್ಲಿ ಉಳಿದರೆ, ಮೋಕ್ಷಿತಾ ಇವರಿಂದ ದೂರ ಆದರು. ಈಗ ಮಂಜು ಹಾಗೂ ಗೌತಮಿ ಪರಸ್ಪರ ಬೆಂಬಲ ನೀಡುತ್ತಾ ಬರುತ್ತಿದ್ದಾರೆ.

ಗೌತಮಿ ಜಾಧವ್ ಅವರಿಗೆ ಕಳಪೆ ಎನ್ನುವ ಪಟ್ಟವನ್ನು ಮನೆಯವರು ಕೊಟ್ಟಿದ್ದರು. ಅದೇ ರೀತಿ ಮಂಜುಗೂ ಕಳಪೆ ಕೊಡಲಾಗಿತ್ತು. ಅವರ ಪರವಾಗಿ ತಂಡದ ಒಬ್ಬರು ವಹಿಸಿಕೊಂಡು ಬಂದು ಮಾತನಾಡಬೇಕಿತ್ತು.  ಗೌತಮಿ ಜಾಧವ್​ ಪರವಾಗಿ ಮಂಜು ಮಾತನಾಡಿದರು. ಮಂಜು ಅವರು ಗೌತಮಿ ಬೆಸ್ಟ್ ಎಂದು ಹೇಳುವ ಪ್ರಯತ್ನವನ್ನು ಮಾಡಿದರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಹೇಗಿದೆ ನೋಡಿ ರಜತ್ ಹೊಸ ಲುಕ್; ಫೋಟೋ ವೈರಲ್

ಗೌತಮಿ ಅವರು ಮಂಜು ಪರವಾಗಿ ಮಾತನಾಡಿದರು. ‘ಮಂಜು ಕಿಚ್ಚನ ಚಪ್ಪಾಳೆ ಪಡೆದಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿದರು. ‘ನಾ ಮಾಡಿದ್ದೇ ಸರಿ ಎಂದು ಮಂಜು ಹೇಳುತ್ತಾ ಇರುತ್ತಾರೆ’ ಎಂದು ಹನುಮಂತ ಪ್ರಶ್ನೆ ಮಾಡಿದರು. ‘ಮಂಜು ಯಾವಾಗಲೂ ಈಗೋ ತೋರಿಸಿಲ್ಲ’ ಎಂದರು ಗೌತಮಿ. ‘ಗೆಳೆಯನ ಪರವಾಗಿ ಗೆಳತಿ ಮಾತನಾಡಿದ್ರು, ಗೆಳತಿ ಪರವಾಗಿ ಗೆಳೆಯ ಮಾತಾಡಿದ್ರು. ಅಲ್ಲಿಗೆ ಲೆಕ್ಕ ಹರೀತು ಬಿಡು’ ಎಂದು ಹನುಮಂತ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.