ಬಿಗ್​ಬಾಸ್ ಸೀಸನ್ 11ರ ಮೊದಲ ಸ್ಪರ್ಧಿ ಘೋಷಣೆ, ಯಾರು ಈ ಗೌತಮಿ?

|

Updated on: Sep 28, 2024 | 7:23 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ನಾಳೆ (ಸೆಪ್ಟೆಂಬರ್ 29) ಪ್ರಾರಂಭವಾಗಲಿದೆ. ಆದರೆ ಇಂದೇ ‘ರಾಜಾ ರಾಣಿ’ ಫಿನಾಲೆಯಲ್ಲಿ ಕೆಲವು ಬಿಗ್​ಬಾಸ್ ಸ್ಪರ್ಧಿಗಳ ಘೋಷಣೆ ಮಾಡಲಾಗಿದ್ದು, ಇದೀಗ ಬಿಗ್​ಬಾಸ್​ಗೆ ಹೋಗಲಿರುವ ಮೊದಲ ಸ್ಪರ್ಧಿಯ ಹೆಸರು ಬಹಿರಂಗವಾಗಿದೆ.

ಬಿಗ್​ಬಾಸ್ ಸೀಸನ್ 11ರ ಮೊದಲ ಸ್ಪರ್ಧಿ ಘೋಷಣೆ, ಯಾರು ಈ ಗೌತಮಿ?
Follow us on

ಬಿಗ್​ಬಾಸ್ ಕನ್ನಡ ಸೀಸನ್ 11 ನಾಳೆ (ಸೆಪ್ಟೆಂಬರ್ 29) ಪ್ರಾರಂಭವಾಗಲಿದೆ. ಸಂಜೆ ಆರು ಗಂಟೆ ಶೋ ಪ್ರಾರಂಭ ಆಗಲಿದೆ. ಶೋ ಇನ್ಯಾಗುರೇಷನ್ ದಿನವೇ ಬಿಗ್​ಬಾಸ್​ ಸ್ಪರ್ಧಿಗಳನ್ನು ಘೋಷಿಸುವುದು ಇಷ್ಟು ವರ್ಷ ನಡೆಸಿಕೊಂಡು ಬಂದಿರುವ ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ಒಂದು ದಿನ ಮುಂಚಿತವಾಗಿಯೇ ಬಿಗ್​ಬಾಸ್ ಮನೆಗೆ ಹೋಗಲಿರುವ ಕೆಲವು ಸ್ಪರ್ಧಿಗಳ ಹೆಸರು ಘೋಷಣೆ ಮಾಡಲಾಗಿದೆ. ಕಲರ್ಸ್ ವಾಹಿನಿಯ ಮತ್ತೊಂದು ರಿಯಾಲಿಟಿ ಶೋ ‘ರಾಜಾ ರಾಣಿ’ಯ ಫಿನಾಲೆ ನಡೆಯುತ್ತಿದ್ದು, ಆ ಶೋನ ಫಿನಾಲೆ ವೇದಿಕೆಯಲ್ಲಿ ಕೆಲವು ಬಿಗ್​ಬಾಸ್ ಸ್ಪರ್ಧಿಗಳ ಹೆಸರು ಘೋಷಿಸಲಾಗಿದೆ.

ಇದೀಗ ಹೊರಬಿದ್ದಿರುವ ಮಾಹಿತಿಯಂತೆ ಬಿಗ್​ಬಾಸ್ ಕನ್ನಡ ಸೀಸನ್ರ 11ರ ಮೊಟ್ಟ ಮೊದಲ ಸ್ಪರ್ಧಿ ನಟಿ ಗೌತಮಿ ಜಾಧವ್. ಬಹುಷಃ ಗೌತಮಿ ಜಾಧವ್ ಎಂದರೆ ಜನರಿಗೆ ಬೇಗ ಅರ್ಥವಾಗುವುದಿಲ್ಲ ಅದೇ ‘ಸತ್ಯ’ ಧಾರಾವಾಹಿಯ ಸತ್ಯ ಎಂದರೆ ಥಟ್ಟನೆ ನೆನಪಾಗುತ್ತದೆ. ಹೌದು, ‘ಸತ್ಯ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ನಟಿ ಗೌತಮಿ ಜಾಧವ್ ಅವರು ಈ ಬಾರಿ ಬಿಗ್​ಬಾಸ್​ಗೆ ಹೋಗಲಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯ ನಿರ್ಮಾಣ ಹೇಗಿತ್ತು? ಸ್ವರ್ಗ-ನರಕ ನಿರ್ಮಿಸಿದ್ದು ಹೇಗೆ? ಇಲ್ಲಿದೆ ವಿಡಿಯೋ

‘ಸತ್ಯ’ ಧಾರಾವಾಹಿಯಲ್ಲಿ ಟಾಮ್ ಬಾಯ್ ರೀತಿ, ಸಖತ್ ರಗಡ್ ಪಾತ್ರದಲ್ಲಿ ಗೌತಮಿ ಕಾಣಸಿಕೊಂಡಿದ್ದರು. ಆ ಧಾರಾವಾಹಿಯಲ್ಲಿ ಬಡ ಮೆಕ್ಯಾನಿಕ್ ಪಾತ್ರ ಸತ್ಯ ಅವರದ್ದು. ಪಾತ್ರವನ್ನು ಅದ್ಭುತವಾಗಿ ಗೌತಮಿ ನಿಭಾಯಿಸಿದ್ದರು. ‘ಸತ್ಯ’ ಮಾತ್ರವಲ್ಲದೆ, ‘ನಾಗಪಂಚಮಿ’ ಧಾರಾವಾಹಿಗಳಲ್ಲಿಯೂ ಗೌತಮಿ ನಟಿಸಿದ್ದರು. ಅಂದಹಾಗೆ ಗೌತಮಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ‘ಕಿನಾರೆ’, ‘ಲೂಟಿ’, ‘ಆದ್ಯಾ’ ಇನ್ನೂ ಕೆಲವು ಕನ್ನಡ ಸಿನಿಮಾಗಳಲ್ಲಿ ಗೌತಮಿ ಜಾಧವ್ ನಟಿಸಿದ್ದಾರೆ.

ಗೌತಮಿ ಖಾಸಗಿ ಜೀವನ ಗಮಿಸುವುದಾದರೆ ಅವರಿಗೆ ಈಗಾಗಲೇ ಮದುವೆಯಾಗಿದೆ. ಗೌತಮಿ ನಟಿಸಿದ್ದ ‘ಕಿನಾರೆ’ ಸಿನಿಮಾದ ಕ್ಯಾಮೆರಾಮನ್ ಆಗಿದ್ದ ಅಭಿಷೇಕ್ ಕಾಸರಗೋಡು ಅವರನ್ನು ಪ್ರೀತಿ ಆ ನಂತರ ಇಬ್ಬರೂ ಸೇರಿ ಮನೆಯವರನ್ನು ಒಪ್ಪಿಸಿ ಬೆಂಗಳೂರಿನ ದೇವಾಲಯವೊಂದರಲ್ಲಿ ಸರಳವಾಗಿ ವಿವಾಹವಾದರು. ಅಭಿಷೇಕ್ ಕಾಸರಗೋಡು ಅವರು, ‘ಆಪರೇಷನ್ ಅಲಮೇಲಮ್ಮ’, ‘ಅನಂತು ವರ್ಸಸ್ ನುಸ್ರತ್’, ‘ಮಾಯಾ ಬಜಾರ್’, ‘ಕೃಷ್ಣ ಟಾಕೀಸ್’ ಸಿನಿಮಾಗಳಲ್ಲಿ ಸಿನಿಮಾಟೊಗ್ರಫಿ ನಿರ್ವಹಿಸಿದ್ದಾರೆ.

‘ಸತ್ಯ’ ಧಾರಾವಾಹಿಯಲ್ಲಿ ಸಖತ್ ಖಡಕ್ ಆಗಿ ಗೌತಮಿ ಕಾಣಿಸಿಕೊಂಡಿದ್ದರೂ ಸಹ ನಿಜ ಜೀವನದಲ್ಲಿ ಅಷ್ಟೇನೂ ಖಡಕ್ ಅಲ್ಲ ಬದಲಿಗೆ ಸೌಮ್ಯ, ವಿನಯ ಸ್ವಭಾವದವರಂತೆ. ಇವರು ಕಠಿಣ ಹೃದಯದ ಅವಶ್ಯಕತೆ ಇರುವ ಬಿಗ್​ಬಾಸ್ ಮನೆಯಲ್ಲಿ ಹೇಗಿರುತ್ತಾರೆಯೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ