‘ಹಳ್ಳಿ ಪವರ್​’ನಲ್ಲಿ ಒಂದೇ ವಾರಕ್ಕೆ ನಾಲ್ಕು ಮಂದಿ ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ

ಜೀ ಕನ್ನಡದ ಹಳ್ಳಿ ಪವರ್ ರಿಯಾಲಿಟಿ ಶೋ ಯಶಸ್ವಿಯಾಗಿ ಮುಂದುವರಿಯುತ್ತಿದೆ. 12 ಸ್ಪರ್ಧಿಗಳ ಪೈಕಿ ಕೆಲವರು ಹೊರ ಹೋದ ನಂತರ, ನಾಲ್ವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಪ್ರವೇಶಿಸಿದ್ದಾರೆ. ಇದರಿಂದ ಸ್ಪರ್ಧೆ ಇನ್ನಷ್ಟು ಜೋರಾಗಿದೆ. ದಿಯಾ, ಮಹಾಸತಿ ಗೌಡ, ಗಾನವಿ ಮತ್ತು ಫರಿನ್ ಹೊಸ ಸ್ಪರ್ಧಿಗಳು.

‘ಹಳ್ಳಿ ಪವರ್​’ನಲ್ಲಿ ಒಂದೇ ವಾರಕ್ಕೆ ನಾಲ್ಕು ಮಂದಿ ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ
ವೈಲ್ಡ್ ಕಾರ್ಡ್​ನಲ್ಲಿ ಬಂದ ಸ್ಪರ್ಧಿಗಳು

Updated on: Sep 11, 2025 | 7:39 AM

‘ಹಳ್ಳಿ ಪವರ್’ (Halli Power Show) ರಿಯಾಲಿಟಿ ಶೋ ಜೀ ಪವರ್​ನಲ್ಲಿ ಪ್ರಸಾರ ಕಾಣುತ್ತಾ ಗಮನ ಸೆಳೆಯುತ್ತಿದೆ. ಜೀ5 ಒಟಿಟಿಯಲ್ಲೂ ಶೋ ವೀಕ್ಷಿಸಬಹುದು. ಈ ಶೋನಲ್ಲಿ ಈಗಾಗಲೇ ಐವರು ಹೊರ ಹೋಗಿದ್ದಾರೆ. ಹೀಗಿರುವಾಗಲೇ ನಾಲ್ವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದಾರೆ. ಇವರು ಯಾವ ರೀತಿಯಲ್ಲಿ ಆಟ ಆಡುತ್ತಾರೆ, ಈ ಮೊದಲೇ ಇರೋ ಸ್ಪರ್ಧಿಗಳಿಗೆ ಯಾವ ರೀತಿಯಲ್ಲಿ ಕಾಂಪಿಟೇಷನ್ ಕೊಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಸದ್ಯ ಸ್ಪರ್ಧಿಗಳ ಸಂಖ್ಯೆ 11ಕ್ಕೆ ಏರಿಕೆ ಆಗಿದೆ.

‘ಹಳ್ಳಿ ಪವರ್’ ಶೋ ಆರಂಭ ಆದಾಗ ಪ್ಯಾಟೆ ಹುಡುಗೀರು ಜೋಶ್​ನಲ್ಲಿ ಶೋ ಸೇರಿದರು. ಆದರೆ, ಶೋನಲ್ಲಿ ಮುಂದುವರಿಯೋದು ಅಷ್ಟು ಸುಲಭ ಆಗಿರಲಿಲ್ಲ. ಕೆಲವರಿಗೆ ಹಳ್ಳಿ ಜೀವನ ಅರಗಿಸಿಕೊಳ್ಳೋದು ಕಷ್ಟ ಎನಿಸಿತು. ಕೆಲವರು ಗಾಯಗೊಂಡರು. ಈ ಎಲ್ಲಾ ಕಾರಣದಿಂದ ಅನೇಕರು ಹೊರ ಹೋಗಿದ್ದಾರೆ. ಅವರ ಜಾಗವನ್ನು ವೈಲ್ಡ್ ಕಾರ್ಡ್ ಮೂಲಕ ತುಂಬಲಾಗಿದೆ.

ಇದನ್ನೂ ಓದಿ
ಸು ಫ್ರಮ್ ಸೋಗೆ OTTಯಲ್ಲಿ ಬೇರೆಯದೇ ರೀತಿಯ ವಿಮರ್ಶೆ; ಸಮಸ್ಯೆ ಆಗಿದ್ದೆಲ್ಲಿ?
Video: ‘ತಡ ಮಾಡದೇ ಮಗು ಮಾಡಿಕೊಳ್ಳಿ’ ಎಂದು ಸಲಹೆ; ಓಕೆ ಎಂದ ಅನುಶ್ರೀ
ರಜನಿಕಾಂತ್ ಉದಾಹರಣೆ ನೀಡಿ ಅಮಿತಾಭ್ ಬಚ್ಚನ್​​ಗೆ ಪಾಠ ಮಾಡಿದ ನೆಟ್ಟಿಗರು
‘ಸು ಫ್ರಮ್ ಸೋ’ ಒಟಿಟಿಗೆ ಬಂದರೂ ಥಿಯೇಟರ್​ನಲ್ಲಿ ನಿಂತಿಲ್ಲ ಕಲೆಕ್ಷನ್

ಇದನ್ನೂ ಓದಿ: ‘ನನ್ನನ್ನು ಕೆಟ್ಟದಾಗಿ ತೋರಿಸಲಾಗಿದೆ’; ‘ಹಳ್ಳಿ ಪವರ್​’ ಶೋನಿಂದ ಹೊರ ಬಂದು ಗಂಭೀರ ಆರೋಪ ಮಾಡಿದ ‘ಭೀಮ’ ನಟಿ ಆ್ಯಶ್

ಯುಕ್ತಾ ಅವರು ಕಳೆದ ವಾರ ಎಲಿಮಿನೇಟ್ ಆದರು. ಕಾವ್ಯಾ ಅವರು ಕಾಲಿಗೆ ಪೆಟ್ಟು ಮಾಡಿಕೊಂಡು ಹೊರ ಹೋದರು. ಅವರಿಗೆ ಮತ್ತೆ ಈ ಶೋಗೆ ಬರೋ ಅವಕಾಶ ಇದೆ. ಇನ್ನು, ಹಳ್ಳಿ ಜೀವನ ಹೊಂದಿಕೆ ಆಗದೆ ಆ್ಯಶ್ ಮೆಲೋ ಸ್ಕೈಲರ್ ಹಾಗೂ ಸ್ನೇಹಾ ಶೆಟ್ಟಿ ಹೊರ ಹೋಗಿದ್ದಾರೆ. ಮನೆಯಲ್ಲಿ ಎಮರ್ಜೆನ್ಸಿ ಆಗಿ ಚಿನ್ಮಯಿ ಕೂಡ ನಡೆದಿದ್ದಾರೆ. ಹೀಗಾಗಿ, ಹಲವರನ್ನು ವೈಲ್ಡ್ ಕಾರ್ಡ್ ಮೂಲಕ ಕರೆತರಲಾಗಿದೆ.

ಹಳ್ಳಿ ಪವರ್ ಶೋ

16 ಸ್ಪರ್ಧಿಗಳನ್ನು ಶೋಗೆ ಆಯ್ಕೆ ಮಾಡಲಾಗಿತ್ತು. ಕೊನೆಗೆ ಫೈನಲ್ ಆಗಿದ್ದು 12 ಮಂದಿ ಮಾತ್ರ. ಉಳಿದ ನಾಲ್ವರಿಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಿಸೋದಾಗಿ ಹೇಳಲಾಗಿತ್ತು. ಈಗ ಹಾಗೆಯೇ ಮಾಡಲಾಗಿದೆ. ದಿಯಾ, ಮಹಾಸತಿ ಗೌಡ, ಗಾನವಿ ಹಾಗೂ ಫರಿನ್ ಹಳ್ಳಿ ಪವರ್​ಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಸ್ಪರ್ಧೆ ಜೋರಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.