ರಂಜಿತ್, ಜಗದೀಶ್ ಬಿಗ್ ಬಾಸ್​ನಿಂದ ಹೊರಕ್ಕೆ; ಇವರು ಹೋಗಿದ್ದೆಲ್ಲಿಗೆ?

|

Updated on: Oct 18, 2024 | 6:50 AM

ಬಿಗ್ ಬಾಸ್​ನಿಂದ ರಂಜಿತ್ ಹಾಗೂ ಜಗದೀಶ್​ ಹೊರ ಬಂದಿದ್ದಾರೆ . ‘ಬಿಗ್ ಬಾಸ್’ನಲ್ಲಿ ಈ ಘಟನೆಗಳು ನಡೆದಿರೋದು ಮಂಗಳವಾರ. ಇದನ್ನು ವೀಕ್ಷಕರಿಗೆ ಈಗ ತೋರಿಸಲಾಗುತ್ತಿದೆ. ಸದ್ಯ ಇವರನ್ನು ಎಲ್ಲಿಡಲಾಗಿದೆ, ಅವರು ಮರಳಿ ದೊಡ್ಮನೆಗೆ ಬರುತ್ತಾರಾ ಎನ್ನುವ ಕುತೂಹಲ ಇದೆ.

ರಂಜಿತ್, ಜಗದೀಶ್ ಬಿಗ್ ಬಾಸ್​ನಿಂದ ಹೊರಕ್ಕೆ; ಇವರು ಹೋಗಿದ್ದೆಲ್ಲಿಗೆ?
ಬಿಗ್ ಬಾಸ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಶಾಕಿಂಗ್ ಬೆಳವಣಿಗೆ ನಡೆದಿದೆ. ಸ್ಪರ್ಧಿಗಳೆಲ್ಲರೂ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಜಗದೀಶ್ ಕೋಪಗೊಂಡಿದ್ದು ಮಹಿಳಾ ಸ್ಪರ್ಧಿಗಳ ವಿರುದ್ಧ ಅಶ್ಲೀಲ ಪದಗಳ ಬಳಕೆ ಮಾಡಿದ್ದಾರೆ. ಹಂಸಾ ವಿರುದ್ಧವಂತೂ ಬಳಸಿದ ಪದ ಮಿತಿಮೀರಿದೆ. ಈ ಮಧ್ಯೆ ರಂಜಿತ್ ಅವರು ಜಗದೀಶ್ ಅವರನ್ನು ತಳ್ಳಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಬಾಗಿಲು ತೆಗೆಯೋ ಆದೇಶ ನೀಡಿದ್ದಾರೆ. ರಂಜಿತ್ ಹಾಗೂ ಜಗದೀಶ್​ನ ಹೊರಕ್ಕೆ ಕಳಿಸೋ ಆದೇಶ ಕೊಟ್ಟಿದ್ದಾರೆ.

ಬಿಗ್ ಬಾಸ್​ನಿಂದ ಹೊರ ಬಂದಿರೋ ಸ್ಪರ್ಧಿಗಳು ಈವರೆಗೆ ಮನೆಗೆ ಬಂದಿಲ್ಲ. ಹೀಗಾಗಿ, ಕುತೂಹಲ ಮೂಡೋದು ಸಹಜ. ಅವರು ಹೋಗಿದ್ದು ಎಲ್ಲಿಗೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಕೆಲವು ವರದಿಗಳ ಪ್ರಕಾರ ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿದೆಯಂತೆ. ಸಾಕಷ್ಟು ಸಿಟ್ಟಲ್ಲಿರೋ ಇವರನ್ನು ಕೂಲ್ ಮಾಡಲು ಇದುವೇ ಸರಿಯಾದ ಮಾರ್ಗ ಎಂದು ಪರಿಗಣಿಸಲಾಗಿದೆ.

‘ಬಿಗ್ ಬಾಸ್’ನಲ್ಲಿ ಈ ಘಟನೆಗಳು ನಡೆದಿರೋದು ಮಂಗಳವಾರ. ಇದನ್ನು ವೀಕ್ಷಕರಿಗೆ ಈಗ ತೋರಿಸಲಾಗುತ್ತಿದೆ. ಸದ್ಯ ಇವರನ್ನು ಎಲ್ಲಿಡಲಾಗಿದೆ, ಅವರು ಮರಳಿ ದೊಡ್ಮನೆಗೆ ಬರುತ್ತಾರಾ ಎನ್ನುವ ಕುತೂಹಲ ಇದೆ.

ರಂಜಿತ್ ಅವರ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಹೀಗಾಗಿ, ಅವರು ದೊಡ್ಮನೆ ಆಟಕ್ಕೆ ಬೇಕೆ ಬೇಕು. ಇನ್ನು, ಜಗದೀಶ್ ವಿಚಾರಕ್ಕೆ ಬರೋದಾದರೆ ಅವರು ಒಂದು ನಿಮಿಷ ಸೈಲೆಂಟ್ ಆಗಿ ಇದ್ದಿದ್ದೇ ಇಲ್ಲ. ಅವರು ಎಲ್ಲರ ವಿರುದ್ಧ ಧ್ವನಿ ಎತ್ತುತ್ತಾರೆ. ಇದನ್ನು ಸಹಿಸಿದ ಮಂಜು ಹಾಗೂ ಮೊದಲಾದವರು ಜಗದೀಶ್ ಅವರನ್ನು ಪ್ರವೋಕ್ ಮಾಡಿದ್ದಾರೆ. ಜಗದೀಶ್ ಅವರಿಗೆ ಬೇಗ ಸಿಟ್ಟು ಬರೋದ್ರಿಂದ ಅವರು ಮತ್ತಷ್ಟು ಕುಪಿತಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಜಗದೀಶ್, ರಂಜಿತ್ ಈ ಕೂಡಲೇ ಮನೆಯಿಂದ ಹೊರಗೆ ಬನ್ನಿ’: ಬಿಗ್ ಬಾಸ್ ಆದೇಶ

ಹಂಸಾ ಹಾಗೂ ಮೊದಲಾದ ಸ್ಪರ್ಧಿಗಳಿಗೆ ಅವಾಚ್ಯ ಶಬ್ದ ಬಳಕೆ ಮಾಡಿದ್ದನ್ನು ಇಡೀ ಮನೆ ಖಂಡಿಸಿದೆ. ಇದನ್ನು ಬಿಗ್ ಬಾಸ್ ಕೂಡ ಸಹಿಸಿಲ್ಲ. ರಂಜಿತ್ ಅವರು ಜಗದೀಶ್​ನ ತಳ್ಳಿದ್ದರು. ಈ ಕಾರಣದಿಂದ ಸದ್ಯಕ್ಕೆ ಇವರನ್ನು ಹೊರಕ್ಕೆ ಕಳಿಸುವ ಆದೇಶ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.