ಚುನಾವಣೆಯಲ್ಲಿ ಸೋತ ಸ್ಮೃತಿ ಇರಾನಿ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಾರಾ? ಸಿಕ್ತು ಸ್ಪಷ್ಟನೆ

ಕಿರುತೆರೆಯಿಂದ ಜನಪ್ರಿಯತೆ ಪಡೆದ ಸ್ಮೃತಿ ಇರಾನಿ ಅವರು ಹಲವು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಸೀರಿಯಲ್​ನಲ್ಲಿ ನಟಿಸುತ್ತಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ‘ಅನುಪಮಾ’ ಧಾರಾವಾಹಿಯಲ್ಲಿ ಸ್ಮೃತಿ ಇರಾನಿ ಅವರು ಒಂದು ಅತಿಥಿ ಪಾತ್ರ ನಿಭಾಯಿಸುತ್ತಾರೆ ಎಂಬ ಗಾಸಿಪ್ ಹಬ್ಬಿದೆ. ಅದಕ್ಕೆ ಸ್ವತಃ ಸ್ಮೃತಿ ಇರಾನಿ ಅವರು ಪ್ರತಿಕ್ರಿಯಿಸಿದ್ದಾರೆ.

ಚುನಾವಣೆಯಲ್ಲಿ ಸೋತ ಸ್ಮೃತಿ ಇರಾನಿ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತಾರಾ? ಸಿಕ್ತು ಸ್ಪಷ್ಟನೆ
ಸ್ಮೃತಿ ಇರಾನಿ
Follow us
|

Updated on: Oct 17, 2024 | 9:03 PM

ಹಿಂದಿ ಸೀರಿಯಲ್ ಲೋಕದಲ್ಲಿ ಸ್ಮೃತಿ ಇರಾನಿ ಅವರು ದೊಡ್ಡ ಹೆಸರು ಮಾಡಿದ್ದಾರೆ. ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಅವರು ನಟಿಯಾಗಿ ಭಾರಿ ಜನಪ್ರಿಯತೆ ಪಡೆದಿದ್ದರು. ಪೂರ್ಣಾವಧಿ ರಾಜಕೀಯದಲ್ಲಿ ತೊಡಗಿಕೊಂಡ ಬಳಿಕ ಅವರು ಸೀರಿಯಲ್​ನಲ್ಲಿ ನಟಿಸುವುದು ನಿಲ್ಲಿಸಿದರು. ಈ ವರ್ಷ ಅವರು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಹಾಗಾಗಿ ಮತ್ತೆ ಅವರು ಧಾರಾವಾಹಿಗಳಲ್ಲಿ ನಟಿಸುತ್ತಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಹಾಗಾದರೆ ಇದು ನಿಜವೇ? ಈ ಬಗ್ಗೆ ಸ್ವತಃ ಸ್ಮೃತಿ ಇರಾನಿ ಅವರಿಂದಲೇ ಸ್ಪಷ್ಟನೆ ಸಿಕ್ಕಿದೆ.

‘ಕ್ಯೂಂಕಿ ಸಾಸ್​ ಭಿ ಕಭಿ ಬಹು ಥಿ’ ಸೀರಿಯಲ್​ 2000ನೇ ಇಸವಿಯಿಂದ 2008ರ ತನಕ ಪ್ರಸಾರ ಆಗಿತ್ತು. ಅದರಲ್ಲಿ ಸ್ಮೃತಿ ಇರಾನಿ ಅವರು ಪ್ರಮುಖ ಪಾತ್ರ ಮಾಡಿದ್ದರು. ಅವರ ಅಭಿನಯಕ್ಕೆ ವೀಕ್ಷಕರು ಮನಸೋತಿದ್ದರು. ಆ ಸಮಯಲ್ಲಿ ‘ಕ್ಯೂಂಕಿ ಸಾಸ್​ ಭಿ ಕಭಿ ಬಹು ಥಿ’ ಧಾರಾವಾಹಿ ತುಂಬ ಜನಪ್ರಿಯತೆ ಹೊಂದಿತ್ತು. ಆ ಜನಪ್ರಿಯತೆಯಿಂದ ಸ್ಮೃತಿ ಇರಾನಿ ಅವರು 2003ರಲ್ಲಿ ರಾಜಕೀಯದತ್ತ ಗಮನ ಹರಿಸಿದರು.

ರಾಜಕೀಯದಲ್ಲಿ ಸ್ಮೃತಿ ಇರಾನಿ ಅವರು ಏಳು-ಬೀಳುಗಳನ್ನು ಕಂಡಿದ್ದಾರೆ. ಕೇಂದ್ರ ಸಚಿವೆ ಆಗಿದ್ದ ಅವರು ಈ ವರ್ಷ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಹಾಗಾಗಿ ಮತ್ತೆ ಅವರು ಸೀರಿಯಲ್ ಕಡೆಗೆ ಮುಖ ಮಾಡುತ್ತಾರೆ ಎಂಬುದು ಕೆಲವರ ಊಹೆ ಆಗಿತ್ತು. ಆದರೆ ಆ ಊಹೆ ನಿಜವಾಗಿಲ್ಲ. ತಾವು ಯಾವುದೇ ಸೀರಿಯಲ್​ನಲ್ಲಿ ನಟಿಸುವುದಿಲ್ಲ ಎಂದು ಸ್ಮೃತಿ ಇರಾನಿ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಸೋತರೂ ನಿಮ್ಮ ಜೊತೆ ಇರುತ್ತೇವೆ’: ಸ್ಮೃತಿ ಇರಾನಿಗೆ ಬಾಲಿವುಡ್ ಮಂದಿ ಬೆಂಬಲ

ಹಿಂದಿಯ ‘ಅನುಪಮಾ’ ಧಾರಾವಾಹಿಯಲ್ಲಿ ಸ್ಮೃತಿ ಇರಾನಿ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎಂದು ‘ಟೆಲಿ ಚಕ್ಕರ್’ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಅದು ಸ್ವತಃ ಸ್ಮೃತಿ ಇರಾನಿ ಅವರ ಗಮನಕ್ಕೂ ಬಂದಿದೆ. ಆ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಸ್ಮೃತಿ ಇರಾನಿ ಅವರು ‘ಸುಳ್ಳು ಸುದ್ದಿ’ ಎಂದು ಕಮೆಂಟ್​ ಮಾಡಿದ್ದಾರೆ. ಆ ಮೂಲಕ ಎಲ್ಲ ಅಂತೆ-ಕಂತೆಗಳಿಗೆ ಅವರು ಪೂರ್ಣವಿರಾಮ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರವೇ ರಾಜ್ಯದ ಮಾನ ಹರಾಜು ಹಾಕುತ್ತಿದೆ: ಕುಮಾರಸ್ವಾಮಿ