ಕೊನೆಗೂ ಸುದೀಪ್ ಹೇಳಿದ ಬದಲಾವಣೆಯನ್ನು ಜಾರಿಗೆ ತಂದ ಬಿಗ್ ಬಾಸ್; ಏನದು?

ಇಂಗ್ಲಿಷ್​ನ ಹೆಚ್ಚು ಬಳಕೆ ಮಾಡದಂತೆ ‘ಬಿಗ್ ಬಾಸ್​’ ಅಕ್ಟೋನರ್ 16ರ ಎಪಿಸೋಡ್​ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಹೇಳಿದ ಬದಲಾವಣೆಯಲ್ಲಿ ಇದು ಕೂಡ ಇತ್ತು ಎನ್ನಲಾಗಿದೆ. ಈಗ ಸುದೀಪ್ ಕೋರಿಕೆ ಈಡೇರಿದೆ ಎನ್ನಬಹುದು.

ಕೊನೆಗೂ ಸುದೀಪ್ ಹೇಳಿದ ಬದಲಾವಣೆಯನ್ನು ಜಾರಿಗೆ ತಂದ ಬಿಗ್ ಬಾಸ್; ಏನದು?
ಸುದೀಪ್
Follow us
|

Updated on: Oct 17, 2024 | 10:45 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಬಳಿಕ ಬಿಗ್ ಬಾಸ್ ತೊರೆಯೋದಾಗಿ ಸುದೀಪ್ ಅವರು ಘೋಷಣೆ ಮಾಡಿದ್ದರು. ಇದು ಅನೇಕರಿಗೆ ಬೇಸರ ಮೂಡಿಸಿತ್ತು. ಸುದೀಪ್ ಅವರು ಈ ರೀತಿ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿತ್ತು. ಈ ಬಗ್ಗೆ ಮಾತನಾಡಿದ್ದ ಕನ್ನಡ ಪರ ಹೋರಾಟಗಾರ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ರೂಪೇಶ್ ರಾಜಣ್ಣ ಕೆಲವು ವಿಚಾರಗಳನ್ನು ಹೇಳಿದ್ದರು. ಅಲ್ಲದೆ, ಕಲರ್ಸ್ ವಾಹಿನಿ ಮಾಡಿದ ತಪ್ಪನ್ನು ಸರಿಪಡಿಸಿಕೊಂಡಿದೆ ಎಂದಿದ್ದರು. ಅಷ್ಟೇ ಅಲ್ಲ ಸುದೀಪ್ ಹೇಳಿದ್ದ ಬದಲಾವಣೆಗೆ ಕಲರ್ಸ್ ಕನ್ನಡ ಒಪ್ಪಿದೆ. ಇದು ಎಪಿಸೋಡ್​ನಲ್ಲೇ ಗೊತ್ತಾಗಿದೆ.

ಬಿಗ್ ಬಾಸ್​ನಲ್ಲಿ ಇಂಗ್ಲಿಷ್ ವಾಕ್ಯಗಳನ್ನು ಹೆಚ್ಚು ಬಳಕೆ ಮಾಡುವಂತಿಲ್ಲ. ಕನ್ನಡವೇ ಬಳಕೆ ಆಗಬೇಕು. ಒಂದೊಮ್ಮೆ ಇಂಗ್ಲಿಷ್ ಬಳಕೆ ಆದರೆ, ‘ಹುಟ್ಟಿದರೇ ಕನ್ನಡ್​ ನಾಡಲ್ಲಿ ಹುಟ್ಟಬೇಕು’ ಎನ್ನುವ ಹಾಡನ್ನು ಹಾಕುತ್ತಿದ್ದರು. ಆದರೆ, ಈ ಪದ್ಧತಿ ಇತ್ತೀಚೆಗೆ ಮಾಯ ಆಗಿತ್ತು. ಈಗ ಸುದೀಪ್ ಅವರ ಸೂಚನೆಯನ್ನು ಒಪ್ಪಿದ ಬಳಿಕ ಇದನ್ನು ಮತ್ತೆ ಜಾರಿಗೆ ತರಲಾಗಿದೆ.

ಇಂಗ್ಲಿಷ್​ನ ಹೆಚ್ಚು ಬಳಕೆ ಮಾಡದಂತೆ ‘ಬಿಗ್ ಬಾಸ್​’ ಅಕ್ಟೋನರ್ 16ರ ಎಪಿಸೋಡ್​ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಹೇಳಿದ ಬದಲಾವಣೆಯಲ್ಲಿ ಇದು ಕೂಡ ಇತ್ತು ಎನ್ನಲಾಗಿದೆ. ಈಗ ಸುದೀಪ್ ಕೋರಿಕೆ ಈಡೇರಿದೆ ಎನ್ನಬಹುದು.

ಈ ಮೊದಲು ಟ್ವೀಟ್ ಮಾಡಿದ್ದ ರಾಜಣ್ಣ, ‘ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಬಿಗ್ ಬಾಸ್ ಆಯೋಜಕರು ಒಪ್ಪಿದ್ದಾರೆ. ತಮಗೂ ಹಾಗೂ  ಕನ್ನಡದ ಪರವಾಗಿ ನಿಂತ ಸುದೀಪ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳು. ಬದಲಾವಣೆ ನೀವೇ ನೋಡುವಿರಿ’ ಎಂದಿದ್ದಾರೆ. ಈಗ ಆ ಬದಲಾವಣೆ ಕಾಣಿಸಿದೆ.

ಇದನ್ನೂ ಓದಿ: ಮೂರೇ ವಾರಕ್ಕೆ ಲಾಯರ್ ಜಗದೀಶ್ ಬಿಗ್ ಬಾಸ್​ನಲ್ಲಿ ಮಾಡಿರುವ ಅವಾಂತರಗಳು ಒಂದೆರಡಲ್ಲ

ಮನೆಯಲ್ಲಿ ನಿದ್ದೆ ಮಾಡುವುದು ಎಷ್ಟು ತಪ್ಪೋ ಇಂಗ್ಲಿಷ್ ಪದಗಳನ್ನು ಹೆಚ್ಚು ಬಳಕೆ ಮಾಡೋದು ಕೂಡ ತಪ್ಪೇ. ಅದನ್ನು ಮೀರಿದರೆ ಶಿಕ್ಷೆ ಖಚಿತ. ಸದ್ಯ ಬಿಗ್ ಬಾಸ್ ಮನೆಯಿಂದ ರಂಜಿತ್ ಹಾಗೂ ಜಗದೀಶ್ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.