ಸಂಜು ಬಳಿ ಕ್ಷಮೆ ಕೇಳಿದ ಅನು; ಹೆಚ್ಚುತ್ತಿದೆ ನೋವು ಹಾಗೂ ಒಲವು

ಸಂಜುನೇ ಆರ್ಯವರ್ಧನ್​. ಅಪಘಾತದಿಂದ ಆತನಿಗೆ ನೆನಪು ಮಾಸಿದೆ. ಪ್ಲಾಸ್ಟಿಕ್ ಸರ್ಜರಿಯಿಂದ ಮುಖದಲ್ಲಿ ಬದಲಾವಣೆ ಆಗಿದೆ. ಹೀಗಾಗಿ, ಈತನೇ ಆರ್ಯವರ್ಧನ್​ ಎನ್ನುವ ವಿಚಾರ ಆಕೆಗೆ ಗೊತ್ತಾಗಿಲ್ಲ.

ಸಂಜು ಬಳಿ ಕ್ಷಮೆ ಕೇಳಿದ ಅನು; ಹೆಚ್ಚುತ್ತಿದೆ ನೋವು ಹಾಗೂ ಒಲವು
ಸಂಜು-ಅನು
Edited By:

Updated on: Nov 01, 2022 | 9:55 AM

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ಸಮಯ: ರಾತ್ರಿ 930


ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಅನು ಸಿರಿಮನೆಗೆ ಅಕ್ಕ-ಪಕ್ಕದ ಮನೆಯವರು ವಿಧವೆ ಎಂದು ಹೀನಾಯವಾಗಿ ಟೀಕಿಸಿದ್ದರು. ಇದೇ ನೋವಿನಲ್ಲಿ ಅನು ಕಚೇರಿಗೆ ಬಂದಿದ್ದಳು. ಬೇಸರ ಅನ್ನೋದು ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಇದನ್ನು ಅರಿತ ಸಂಜು ಅನುನ ಸಮಾಧಾನ ಮಾಡೋಕೆ ಮುಂದಾಗಿದ್ದ. ಇದರಿಂದ ಸಿಟ್ಟಾದ ಆಕೆ ಸಂಜುಗೆ ಎಚ್ಚರಿಕೆ ನೀಡಿದ್ದಳು. ಇದರಿಂದ ಸಂಜು ನೊಂದುಕೊಂಡಿದ್ದ.

ಇಂದಿನ ಎಪಿಸೋಡ್ ಹೈಲೈಟ್

ಸಂಜು ಹಾಗೂ ಅನು ಮಧ್ಯೆ ದಿನ ಕಳೆದಂತೆ ಆಪ್ತತೆ ಹೆಚ್ಚುತ್ತಿದೆ. ಇದು ಅನು ಗಮನಕ್ಕೂ ಬಂದಿದೆ. ಸಂಜುನೇ ಆರ್ಯವರ್ಧನ್​. ಅಪಘಾತದಿಂದ ಆತನಿಗೆ ನೆನಪು ಮಾಸಿದೆ. ಪ್ಲಾಸ್ಟಿಕ್ ಸರ್ಜರಿಯಿಂದ ಮುಖದಲ್ಲಿ ಬದಲಾವಣೆ ಆಗಿದೆ. ಹೀಗಾಗಿ, ಈತನೇ ಆರ್ಯವರ್ಧನ್​ ಎನ್ನುವ ವಿಚಾರ ಆಕೆಗೆ ಗೊತ್ತಾಗಿಲ್ಲ. ಆದರೆ, ಸಂಜು ನಡೆದುಕೊಳ್ಳುತ್ತಿರುವ ರೀತಿ ಆಕೆಗೆ ಆರ್ಯವರ್ಧನ್​ನ ನೆನಪಿಸುತ್ತಿದೆ. ಇದರಿಂದ ಅನು ಸಾಕಷ್ಟು ಬೇಸರಗೊಂಡಿದ್ದಾಳೆ. ಸಂಜು ತೋರುವ ಕಾಳಜಿಗೆ ಆಕೆ ಸಿಟ್ಟಾಗಿದ್ದಳು.

ಅನುನ ಗೆಳತಿಯನ್ನು ನೋಡೋಕೆ ಗಂಡಿನ ಕಡೆಯವರು ಬರುವವರಿದ್ದರು. ಇದಕ್ಕೆ ಅನು ಕೂಡ ಹಾಜರಿ ಹಾಕುವ ಆಲೋಚನೆಯಲ್ಲಿದ್ದಳು. ಆದರೆ, ಗೆಳತಿಯ ತಾಯಿ ಅನು ಬಗ್ಗೆ ಕೀಳಾಗಿ ಮಾತನಾಡಿದ್ದಳು. ಆಕೆ ವಿಧವೆ ಎಂದು ಟೀಕಿಸಿದ್ದಳು. ಇದರಿಂದ ಬೇಸರಗೊಂಡ ಅನು ಕಚೇರಿಗೆ ಬಂದಿದ್ದಳು. ಇದೇ ವಿಚಾರಕ್ಕೆ ಬೇಸರಮಾಡಿಕೊಂಡಿದ್ದ ಅನುನ ಸಮಾಧಾನ ಮಾಡೋಕೆ ಸಂಜು ಹೋಗಿದ್ದ. ಇದಕ್ಕಾಗಿ ಆತ ಬಾಯಿಗೆ ಬಂದಂತೆ ಬೈಯ್ಯಿಸಿಕೊಂಡಿದ್ದಾನೆ. ಈ ವಿಚಾರದಲ್ಲಿ ಅನುಗೆ ಬೇಸರ ಆಗಿದೆ.

ಇಷ್ಟೇ ಅಲ್ಲ ಅನುಗೆ ಕರ್ಚಿಪ್ ನೀಡಲು ಸಂಜು ಮುಂದಾದ. ಆಗಲೂ ಅನುಗೆ ಆರ್ಯನ ನೆನಪಾಗಿದೆ. ಕಂಪೆನಿ ಸೇರಿದ ಸಂದರ್ಭದಲ್ಲಿ ಅನು ಚಿಕ್ಕ ವಿಚಾರಕ್ಕೂ ಗಳಗಳನೆ ಅಳುತ್ತಿದ್ದಳು. ಆಗ ಆರ್ಯವರ್ಧನ್ ಇದೇ ರೀತಿಯಲ್ಲಿ ಕರ್ಚಿಪ್ ನೀಡುತ್ತಿದ್ದ. ಸಂಜು ಕರ್ಚಿಪ್ ನೀಡಿದಾಗಲೂ ಅನುಗೆ ಆರ್ಯನ ನೆನಪಾಗಿದೆ. ಹೀಗಾಗಿ ಆಕೆ ಕಣ್ಣಲ್ಲಿ ನೀರು ಹಾಕಿದ್ದಾಳೆ.

ಕ್ಷಮೆ ಕೇಳಿದ ಅನು

ಸಂಜುಗೆ ಬೈದ ನಂತರದಲ್ಲಿ ಅನು ತುಂಬಾನೇ ಬೇಸರಗೊಂಡಿದ್ದಾಳೆ. ತಾನು ಈ ರೀತಿ ಬೈಯಬಾರದಿತ್ತು. ಎಂದು ಆಕೆಗೆ ಅನಿಸಿದೆ. ‘ಆ ವ್ಯಕ್ತಿ ಎದುರು ಅಳುವಷ್ಟು ಸಲುಗೆ ಇಲ್ಲ ಎಂದಾಗ ಅಂತಹವರಿಗೆ ಬಯ್ಯೋ ಅಧಿಕಾರ ಕೂಡ ನನಗೆ ಇಲ್ಲ ಎಂದೇ ಅರ್ಥ. ನಾನು ತಪ್ಪು ಮಾಡಿದೆ’ ಎಂದು ಮನಸ್ಸಿನಲ್ಲೇ ಹೇಳಿಕೊಂಡಿದ್ದಾಳೆ ಅನು.

ಅನು ಹಾಗೂ ಸಂಜು ಊಟಕ್ಕಾಗಿ ಕಚೇರಿಯಲ್ಲಿ ಸೇರಿದ್ದರು. ಈ ವೇಳೆ ಇಬ್ಬರೇ ಇದ್ದಿದ್ದರಿಂದ ಅನುಗೆ ಏನು ಮಾತನಾಡಬೇಕು ಎಂಬುದೇ ತಿಳಿದಿಲ್ಲ. ಅನು ಕ್ಷಮೆ ಕೇಳಬೇಕು ಎಂದು ನಿರ್ಧರಿಸಿದಳು. ಅತ್ತ ಸಂಜು ಕೂಡ ಇದೇ ನಿರ್ಧಾರಕ್ಕೆ ಬಂದಿದ್ದ. ತಾನು ಅನು ಬಗ್ಗೆ ಅತಿಯಾಗಿ ಕಾಳಜಿ ತೋರಿಸಿದೆ ಎಂದು ಆತನಿಗೆ ಅನಿಸಿದೆ. ಹೀಗಾಗಿ, ಆತ ಕೂಡ ಕ್ಷಮೆ ಕೇಳಿದ್ದಾನೆ. ಈ ಮೂಲಕ ಇಬ್ಬರ ಮಧ್ಯೆ ಇದ್ದ ಬೇಸರ ಶಮನವಾಗಿದೆ.

ಬದಲಾದ ಸಮಯದಲ್ಲಿ ಜೊತೆ ಜೊತೆಯಲಿ

ಈ ಮೊದಲು ಜೊತೆ ಜೊತೆಯಲಿ ಧಾರಾವಾಹಿ ರಾತ್ರಿ 8.30ಕ್ಕೆ ಪ್ರಸಾರ ಕಾಣುತ್ತಿತ್ತು. ಆದರೆ, ಈಗ ಧಾರಾವಾಹಿ ಪ್ರಸಾರ ಸಮಯವನ್ನು ವಾಹಿನಿ ಬದಲಾಯಿಸಿದೆ. ಸೋಮವಾರದಿಂದ (ಅಕ್ಟೋಬರ್ 31) ಈ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ಈ ಬಗ್ಗೆ ವಾಹಿನಿಯವರು ಅಧಿಕೃತ ಘೋಷಣೆ ಮಾಡಿದ್ದರು.

ಶ್ರೀಲಕ್ಷ್ಮಿ ಎಚ್.