AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಹರ್ಷನ ಪ್ಲ್ಯಾನ್​ಗೆ ಸಾತ್ ನೀಡಿದ ವರುಧಿನಿ; ಸಾನಿಯಾಗೆ ಠಾಣೆಯಲ್ಲಿ ಭಾರೀ ಮುಖಭಂಗ

ಜೈಲಿನಿಂದ ಹೊರ ಬರುತ್ತಿದ್ದಂತೆ ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆದಿದ್ದಾನೆ ಹರ್ಷ. ಮಾಲಾ ಶಿಕ್ಷಣ ಸಂಸ್ಥೆಗೆ ತಾನೇ ಎಂಡಿ ಆಗಿದ್ದಾನೆ. ಇದರಿಂದ ಸಾನಿಯಾಗೆ ಸಂಕಷ್ಟ ಎದುರಾಗಿದೆ.

 ಹರ್ಷನ ಪ್ಲ್ಯಾನ್​ಗೆ ಸಾತ್ ನೀಡಿದ ವರುಧಿನಿ; ಸಾನಿಯಾಗೆ ಠಾಣೆಯಲ್ಲಿ ಭಾರೀ ಮುಖಭಂಗ
ಹರ್ಷ-ವರು
TV9 Web
| Edited By: |

Updated on: Nov 01, 2022 | 8:03 AM

Share

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
Image
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಆಸ್ಪತ್ರೆಗೆ ದಾಖಲಾಗಿರುವ ರತ್ನಮಾಲಾ ಮೊಬೈಲ್​ನಲ್ಲಿ ಏನೋ ಪ್ರಮುಖವಾದ ದಾಖಲೆ ಇದೆ ಎಂಬ ವಿಚಾರದ ಬಗ್ಗೆ ಹರ್ಷನಿಗೆ ಅನುಮಾನ ಬಂದಿದೆ. ಸಾನಿಯಾಳ ವಿಡಿಯೋ ಈ ಮೊಬೈಲ್​ನಲ್ಲಿರುವುದು ಹರ್ಷನಿಗೆ ಗೊತ್ತಾದರೆ ಆಕೆಗೆ ಭಾರೀ ತೊಂದರೆ ಉಂಟಾಗಲಿದೆ. ಈ ವಿಚಾರದಲ್ಲಿ ಆದಷ್ಟು ಎಚ್ಚರಿಕೆಯಿಂದ ಇರಲು ಆಕೆ ಪ್ರಯತ್ನಿಸುತ್ತಿದ್ದಾಳೆ. ಹೀಗಾಗಿ ಪ್ರತಿತಂತ್ರ ಉಪಯೋಗಿಸಲು ಆಕೆ ಪ್ಲ್ಯಾನ್ ರೂಪಿಸಿದ್ದಳು.

ಇಂದಿನ ಎಪಿಸೋಡ್​​ನ ಹೈಲೈಟ್​

ಕನ್ನಡತಿ’ ಧಾರಾವಾಹಿಯಲ್ಲಿ ಇತ್ತೀಚೆಗೆ ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ ವಿಚಾರ ಎರಡೇ ಹೈಲೈಟ್ ಆಗುತ್ತಿದೆ. ರತ್ನಮಾಲಾ ಕುಟುಂಬದವರು ಒಂದೋ ಆಸ್ಪತ್ರೆಯಲ್ಲಿ ಇರುತ್ತಾರೆ, ಇಲ್ಲದಿದ್ದರೆ ಠಾಣೆಯಲ್ಲಿ ಇರುತ್ತಾರೆ. ಅಕ್ಟೋಬರ್ 31ರ ಎಪಿಸೋಡ್​ನಲ್ಲಿ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಹೈಲೈಟ್ ಆಗಿದೆ. ಒಂದು ಕಡೆ ರತ್ನಮಾಲಾ ಕೋಮಾಗೆ ಹೋದರೆ, ಮತ್ತೊಂದು ಕಡೆ ಸಾನಿಯಾಗೆ ಪೊಲೀಸರಿಂದ ಅವಮಾನ ಆಗಿದೆ. ಇದಕ್ಕೆ ಆಕೆ ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.

ಸಾನಿಯಾಗೆ ಮುಖಭಂಗ

ಸಾನಿಯಾ ವಿರುದ್ಧ ಹರ್ಷ ತಿರುಗಿ ಬಿದ್ದಿದ್ದಾನೆ. ಆಕೆಯ ತಲೆಗೆ ಹರ್ಷ ಗನ್ ಇಟ್ಟಿದ್ದ. ಇದರ ವಿಡಿಯೋ ಸಾನಿಯಾ ಬಳಿ ಇದೆ. ಇದೇ ವಿಚಾರ ಇಟ್ಟುಕೊಂಡು ಹರ್ಷನ ವಿರುದ್ಧ ಸಾನಿಯಾ ಕೇಸ್ ದಾಖಲು ಮಾಡಿದ್ದಳು. ಹರ್ಷ ಜೈಲಿಗೂ ಹೋಗಿದ್ದ. ಆದರೆ, ಇದಾದ ಕೆಲವೇ ನಿಮಿಷಗಳಲ್ಲಿ ದೂರನ್ನು ಸಾನಿಯಾ ಸುಟ್ಟು ಹಾಕಿದ್ದಳು. ಇದರಿಂದ ಹರ್ಷ ಸುಲಭವಾಗಿ ಜೈಲಿನಿಂದ ಹೊರ ಬಂದಿದ್ದ.

ಜೈಲಿನಿಂದ ಹೊರ ಬರುತ್ತಿದ್ದಂತೆ ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆದಿದ್ದಾನೆ ಹರ್ಷ. ಮಾಲಾ ಶಿಕ್ಷಣ ಸಂಸ್ಥೆಗೆ ತಾನೇ ಎಂಡಿ ಆಗಿದ್ದಾನೆ. ಇದರಿಂದ ಸಾನಿಯಾಗೆ ಸಂಕಷ್ಟ ಎದುರಾಗಿದೆ. ಆಕೆ ಚಿಂತೆಗೆ ಒಳಗಾಗಿದ್ದಾಳೆ. ಹೀಗಾಗಿ, ಠಾಣೆಗೆ ತೆರಳಿ ಮತ್ತೆ ದೂರು ನೀಡೋಕೆ ಹೋಗಿದ್ದಾಳೆ ಸಾನಿಯಾ. ಆಗ ಪೊಲೀಸ್ ಅಧಿಕಾರಿ ಸಾನಿಯಾಗೆ ಸೈಲೆಂಟ್ ಆಗೇ ಉತ್ತರ ನೀಡಿದ್ದಾಳೆ.

ಸಾನಿಯಾ ಠಾಣೆ ಮೆಟ್ಟಿಲೇರಿದ್ದು, ಹರ್ಷನ ವಿರುದ್ಧ ದೂರು ನೀಡಿದ್ದು, ಆ ದೂರನ್ನು ಸುಟ್ಟು ಹಾಕಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ವಿಡಿಯೋನ ಸಾನಿಯಾಗೆ ತೋರಿಸಿದ್ದಾರೆ ಪೊಲೀಸರು. ಇದನ್ನು ನೋಡಿ ಸಾನಿಯಾ ಕೋಪ ನೆತ್ತಿಗೇರಿದೆ. ಆದರೆ, ಏನೂ ಮಾಡಲೂ ಆಗದೆ ಜೈಲಿನಿಂದ ಹೊರ ಬಂದಿದ್ದಾಳೆ.

ಮಾಸ್ಟರ್​ಪ್ಲ್ಯಾನ್ ಹಿಂದೆ ವರು

ವರುಧಿನಿ ಈಗ ಹರ್ಷನ ಪಿ.ಎ. ಆಗಿ ನೇಮಕಗೊಂಡಿದ್ದಾಳೆ. ಆಕೆ ಸಾನಿಯಾಗಿಂತ ಮೊದಲು ಠಾಣೆಗೆ ಬಂದಿದ್ದಳು. ಹರ್ಷನ ವಿರುದ್ಧ ದೂರು ಕೊಡದಂತೆ ಏನು ಮಾಡಬಹುದು ಎಂಬ ಬಗ್ಗೆ ಪೊಲೀಸರ ಜತೆ ಚರ್ಚಿಸಿದ್ದಳು. ಸಾನಿಯಾ ಠಾಣೆಯಿಂದ ಹೊರ ಬರುವಾಗ ವರುಧಿನಿ ಕಾಣಿಸಿದ್ದಾಳೆ. ಈ ಮಾಸ್ಟರ್​ಪ್ಲ್ಯಾನ್​ ಹಿಂದೆ ಆಕೆಯ ಕೈವಾಡ ಇರುವುದು ಆಕೆಗೆ ಖಚಿತವಾಗಿದೆ.

ಹೊಸ ಪ್ಲ್ಯಾನ್ ಮಾಡಿದ ಸಾನಿಯಾ

ಸಾನಿಯಾ ಮತ್ತೆ ಎಂಡಿ ಪಟ್ಟ ಪಡೆದುಕೊಳ್ಳೋಕೆ ರೆಡಿ ಆಗಿದ್ದಾಳೆ. ಇದಕ್ಕೆ ಆಕೆಗೆ ರತ್ನಮಾಲಾಳ ಸಹಾಯ ಅತ್ಯಗತ್ಯ. ಆದರೆ, ರತ್ನಮಾಲಾ ಕೋಮಾಗೆ ಹೋಗಿದ್ದಾಳೆ. ಹೀಗಾಗಿ, ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈಗ ರತ್ನಮಾಲಾ ಎದುರು ಒಳ್ಳೆಯವಳಾಗೋಕೆ ಮುಂದಾಗಿದ್ದಾಳೆ ಸಾನಿಯಾ. ಇದೇ ಕಾರಣ ಇಟ್ಟುಕೊಂಡು ಆಸ್ಪತ್ರೆಗೆ ಬಂದಿದ್ದಾಳೆ. ಆದರೆ, ಸಾನಿಯಾಗೆ ಅಲ್ಲೂ ಹಿನ್ನಡೆ ಉಂಟಾಗಿದೆ. ಆಕೆಯನ್ನು ಒಳಗೆ ಬಿಡೋಕೆ ಹರ್ಷ ನೋ ಎಂದಿದ್ದಾನೆ. ರತ್ನಮಾಲಾಳನ್ನು ಒಲಿಸಿಕೊಳ್ಳಬೇಕು ಎಂಬ ಸಾನಿಯಾ ಪ್ಲ್ಯಾನ್ ಇಲ್ಲೂ ವಿಫಲವಾಗಿದೆ.

ಶ್ರೀಲಕ್ಷ್ಮಿ ಎಚ್.

ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್