ಟಿಆರ್​ಪಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದ ‘ಗಟ್ಟಿಮೇಳ’; ಇಲ್ಲಿದೆ ಟಾಪ್ 3 ಸೀರಿಯಲ್ಸ್

|

Updated on: May 18, 2023 | 2:41 PM

ಜೀ ಕನ್ನಡ ಹಾಗೂ ಕಲರ್ಸ್​ ಕನ್ನಡ ಧಾರಾವಾಹಿಗಳು ಟಾಪ್ ಮೂರರಲ್ಲಿ ಸ್ಥಾನ ಪಡೆದುಕೊಂಡಿವೆ. ಆ ಧಾರಾವಾಹಿಗಳು ಯಾವವು? ಆ ಪೈಕಿ ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ.

ಟಿಆರ್​ಪಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದ ‘ಗಟ್ಟಿಮೇಳ’; ಇಲ್ಲಿದೆ ಟಾಪ್ 3 ಸೀರಿಯಲ್ಸ್
ಗಟ್ಟಿಮೇಳ
Follow us on

ಕಿರುತೆರೆ ಲೋಕವೂ ಕಲರ್​ಫುಲ್ ಆಗಿದೆ. ಸಿನಿಮಾ ಗುಣಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡುವ ಕೆಲಸ ಆಗುತ್ತಿದೆ. ಧಾರಾವಾಹಿಗಳ ಮಧ್ಯೆ ಸಖತ್ ಕಾಂಪಿಟೇಷನ್ ಇದೆ. ಜೀ ಕನ್ನಡ (Zee Kannada) ಹಾಗೂ ಕಲರ್ಸ್​ ಕನ್ನಡ ಧಾರಾವಾಹಿಗಳು ಟಾಪ್ 3ರಲ್ಲಿ ಸ್ಥಾನ ಪಡೆದುಕೊಂಡಿವೆ. ಆ ಧಾರಾವಾಹಿಗಳು ಯಾವವು? ಆ ಪೈಕಿ ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ? ಆ ಬಗ್ಗೆ ಇಲ್ಲಿದೆ ಮಾಹಿತಿ. ಅಷ್ಟೇ ಅಲ್ಲ. ಟಾಪ್ 3 ಅಲ್ಲಿರುವ ಧಾರಾವಾಹಿಗಳ ಬಗ್ಗೆಯೂ ಇಲ್ಲಿ ಮಾಹಿತಿ ಇದೆ.

ಮೊದಲ ಸ್ಥಾನದಲ್ಲಿ ‘ಗಟ್ಟಿಮೇಳ’

ರಕ್ಷಿತ್ ಗೌಡ, ನಿಶಾ ರವಿಕೃಷ್ಣನ್, ಸುಧಾ ನರಸಿಂಹರಾಜು ಮೊದಲಾದವರು ನಟಿಸಿರುವ ‘ಗಟ್ಟಿಮೇಳ’ ಧಾರಾವಾಹಿ ಕಳೆದವಾರ ಎರಡನೇ ಸ್ಥಾನದಲ್ಲಿತ್ತು. ಈವಾರ ಮೊದಲ ಸ್ಥಾನಕ್ಕೇರಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿ ಜನಮನ್ನಣೆ ಪಡೆದಿದೆ. ಈಗಾಗಲೇ ಧಾರಾವಾಹಿ 1000+ ಎಪಿಸೋಡ್ ಪೂರೈಸಿದೆ. ಧ್ರುವ ಮತ್ತು ಅದಿತಿ ಮದುವೆ ಟಿಆರ್​ಪಿ ಹೆಚ್ಚಲು ಕಾರಣ ಆಗಿದೆ.

ಎರಡನೇ ಸ್ಥಾನಕ್ಕೆ ಪುಟ್ಟಕ್ಕ..

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಕಳೆದ ವಾರ ಮೊದಲ ಸ್ಥಾನದಲ್ಲಿತ್ತು. ಈ ಧಾರಾವಾಹಿ ಎರಡನೇ ಸ್ಥಾನಕ್ಕೆ ಇಳಿದಿದೆ. ಉಮಾಶ್ರೀ ಅವರು ನಟನೆ ಮೂಲಕ ಗಮನ ಸೆಳೆದಿದ್ದಾರೆ. ಅವರ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ.

ಇದನ್ನೂ ಓದಿ: ಟಿಆರ್​ಪಿ ರೇಸ್​ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡ ಉಮಾಶ್ರೀ ಧಾರಾವಾಹಿ; ಇಲ್ಲಿದೆ ಟಾಪ್ 10 ಸೀರಿಯಲ್ಸ್

ಮೂರನೇ ಸ್ಥಾನದಲ್ಲಿ ಅಕ್ಕ-ತಂಗಿ ಕಥೆ

ಕಲರ್ಸ್ ಕನ್ನಡದ ‘ಲಕ್ಷ್ಮೀ ಬಾರಮ್ಮ’ ಹಾಗೂ ‘ಭಾಗ್ಯಲಕ್ಷ್ಮೀ’ ಧಾರಾವಾಹಿಗಳು ಪ್ರಸಾರ ಕಾಣುತ್ತಿವೆ. ಇದು ಅಕ್ಕ ತಂಗಿ ಕಥೆ. ಈ ಎರಡೂ ಧಾರಾವಾಹಿಗಳು ಒಂದೇ ಟಿಆರ್​ಪಿ ಪಡೆದು ಮೂರನೇ ಸ್ಥಾನದಲ್ಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:40 pm, Thu, 18 May 23