Kiran Raj: ಕಿರುತೆರೆಗೆ ‘ಕನ್ನಡತಿ’ ಕಿರಣ್ ರಾಜ್ ಕಂಬ್ಯಾಕ್​; ಯಾವ ಧಾರಾವಾಹಿ?

ಕಿರಣ್ ರಾಜ್ ಅವರ ನಟನೆಯ ‘ಕನ್ನಡತಿ’ ಧಾರಾವಾಹಿ ಪೂರ್ಣಗೊಂಡಿದೆ. ಅವರು ಸಂಪೂರ್ಣವಾಗಿ ಹಿರಿತೆರೆಯಲ್ಲಿ ಬ್ಯುಸಿ ಆಗಲು ನಿರ್ಧರಿಸಿದ್ದಾರೆ. ಹೀಗಿರುವಾಗಲೇ ಅವರಿಗೆ ಕಿರುತೆರೆ ಆಫರ್ ಬಂದಿದೆ.

Kiran Raj: ಕಿರುತೆರೆಗೆ ‘ಕನ್ನಡತಿ’ ಕಿರಣ್ ರಾಜ್ ಕಂಬ್ಯಾಕ್​; ಯಾವ ಧಾರಾವಾಹಿ?
ಕಿರಣ್ ರಾಜ್
Follow us
ರಾಜೇಶ್ ದುಗ್ಗುಮನೆ
|

Updated on: May 17, 2023 | 11:32 AM

ನಟ ಕಿರಣ್ ರಾಜ್ (Kiran Raj) ಅವರು ‘ಕನ್ನಡತಿ’ ಧಾರಾವಾಹಿ ಮೂಲಕ ಹೆಚ್ಚು ಜನಪ್ರಿಯತೆ ಪಡೆದರು. ಅವರು ಸದ್ಯ ಹಿರಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಹಲವು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅವರು ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಹಾಗಂತ ಅವರು ಹೀರೋ ಆಗಿ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ತ್ರಿಪುರ ಸುಂದರಿ’ (Tripura Sundari) ಧಾರಾವಾಹಿಯಲ್ಲಿ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಕಿರಣ್ ರಾಜ್ ಅವರ ನಟನೆಯ ‘ಕನ್ನಡತಿ’ ಧಾರಾವಾಹಿ ಪೂರ್ಣಗೊಂಡಿದೆ. ಅವರು ಸಂಪೂರ್ಣವಾಗಿ ಹಿರಿತೆರೆಯಲ್ಲಿ ಬ್ಯುಸಿ ಆಗಲು ನಿರ್ಧರಿಸಿದ್ದಾರೆ. ಹೀಗಿರುವಾಗಲೇ ಅವರಿಗೆ ಅತಿಥಿ ಪಾತ್ರದ ಆಫರ್ ಬಂದಿದ್ದು, ಖುಷಿಯಿಂದ ಒಪ್ಪಿ ನಟಿಸಿದ್ದಾರೆ. ಈ ಎಪಿಸೋಡ್ ಶೀಘ್ರವೇ ಪ್ರಸಾರ ಕಾಣಲಿದೆ. ಅದಕ್ಕೂ ಮೊದಲು ಇದರ ಪ್ರೋಮೋ ರಿಲೀಸ್ ಮಾಡಲಾಗಿದೆ.

ರಾಜಕುಮಾರನ (ಅಭಿನವ್ ವಿಶ್ವನಾಥನ್​) ಹುಡುಕಿಕೊಂಡು ಗಂಧರ್ವ ಕನ್ಯೆ ಆಮೃಪಾಲಿ (ದಿವ್ಯಾ ಸುರೇಶ್) ಭೂಲೋಕಕ್ಕೆ ಬಂದಿದ್ದಾಳೆ. ರಾಜಕುಮಾರನ ಹುಡುಕಲು ಇರುವ ಏಕೈಕ ಮಾರ್ಗ ಎಂದರೆ ಅವಳ ಬಳಿ ಇರುವ ಪದಕ ಆಗಿತ್ತು. ಆದರೆ, ಈ ಪದಕವನ್ನು ಕದಿಯಲಾಗಿದೆ. ಈ ಪದಕವನ್ನು ಹುಡುಕಲು ಆಮೃಪಾಲಿ ಕಷ್ಟಪಡುತ್ತಿದ್ದಾಳೆ. ಇವಳಿಗೆ ಸಹಾಯ ಮಾಡುವ ಪಾತ್ರದಲ್ಲಿ ಕಿರಣ್ ರಾಜ್ ಬರಲಿದ್ದಾರೆ.

ಈಗಾಗಲೇ ‘ಮಿಥುನ ರಾಶಿ’ ಧಾರಾವಾಹಿಯ ರಾಶಿ ಹಾಗೂ ‘ಕೆಂಡಸಂಪಿಗೆ’ ಧಾರಾವಾಹಿಯ ಸುಮನಾ ‘ತ್ರಿಪುರ ಸುಂದರಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈಗ ಕಿರಣ್ ರಾಜ್ ಸರದಿ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಇದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ‘ಬಾಡಿಗಿಂತ, ಮಾನಸಿಕ ಟ್ರಾನ್ಸ್​ಫಾರ್ಮೇಷನ್ ಮುಖ್ಯ’; ರಗಡ್ ‘ರಾನಿ’ ಲುಕ್ ಬಗ್ಗೆ ಕಿರಣ್ ರಾಜ್ ಮಾತು

‘ರಾನಿ’ ಚಿತ್ರದ ಮೂಲಕ ಹಳೆಯ ಪಾತ್ರಗಳನ್ನು ಮರೆಸಲು ಕಿರಣ್ ರಾಜ್ ರೆಡಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ಸಖತ್ ಮಾಸ್ ಅವತಾರ ತಾಳಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ‘ರಾನಿ’ ಚಿತ್ರದ ಹೊಸ ಪೋಸ್ಟರ್ ರಿವೀಲ್ ಆಗಿತ್ತು. ಕಿರಣ್ ರಾಜ್ ಅವರ ಲುಕ್ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದರು. ಈ ಮೊದಲು ‘ಬಡ್ಡೀಸ್’ ಚಿತ್ರದಲ್ಲಿ ಕಿರಣ್ ರಾಜ್ ನಟಿಸಿದ್ದರು. ಈ ಸಿನಿಮಾ ನಿರ್ದೇಶನ ಮಾಡಿದ್ದು ಗುರುತೇಜ್ ಶೆಟ್ಟಿ. ಈಗ ‘ರಾನಿ’ ಚಿತ್ರಕ್ಕಾಗಿ ಕಿರಣ್ ರಾಜ್ ಹಾಗೂ ಗುರುತೇಜ್ ಮತ್ತೆ ಒಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್