ಕನ್ನಡತಿ ಅಪ್​ಡೇಟ್​; ತಿಳಿದೂ ತಪ್ಪು ಮಾಡಿದ ಸಾನಿಯಾ; ಎಂ.ಡಿ. ಪಟ್ಟ ಭುವಿಗೆ

ಮಾಲಾ ಶಿಕ್ಷಣ ಸಂಸ್ಥೆಯ ಎಂಡಿ ಪಟ್ಟ ಸಾನಿಯಾ ಕೈಯಲ್ಲಿದೆ. ಸಾನಿಯಾ ಬಳಿ ಭುವಿ ಶಿಷ್ಯವೃತ್ತಿ ಮಾಡುತ್ತಿದ್ದಾರೆ. ಸಾನಿಯಾ ಅವರಿಂದ ಒಂದಷ್ಟು ವಿಚಾರ ಕಲಿಯಬಹುದು ಎನ್ನುವ ಆಲೋಚನೆ ಅವರದ್ದಾಗಿತ್ತು.

ಕನ್ನಡತಿ ಅಪ್​ಡೇಟ್​; ತಿಳಿದೂ ತಪ್ಪು ಮಾಡಿದ ಸಾನಿಯಾ; ಎಂ.ಡಿ. ಪಟ್ಟ ಭುವಿಗೆ
ಸಾನಿಯಾ-ರಂಜನಿ
Edited By:

Updated on: Sep 22, 2021 | 4:26 PM

‘ಕನ್ನಡತಿ’ ಧಾರಾವಾಹಿ ನಿತ್ಯ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಾನಿಯಾ (ರಮೋಲಾ) ಬಳಿ ಶಿಷ್ಯವೃತ್ತಿ ಮಾಡುತ್ತಿರುವ ಭುವಿ (ರಂಜನಿ ರಾಘವನ್​) ಈಗ ತಮ್ಮ ಬಾಸ್​ ಸಾನಿಯಾ ವಿರುದ್ಧವೇ ಸೈಲೆಂಟ್​ ಆಗಿ ತಿರುಗಿಬೀಳೋಕೆ ಶುರು ಮಾಡಿದ್ದಾರೆ. ಅಚ್ಚರಿ ಎಂದರೆ ಸಾನಿಯಾ ತಿಳಿದೂ ತಪ್ಪು ಮಾಡಿದ್ದಾರೆ. ಇದರಿಂದ ಭುವಿಗೆ ಎಂಡಿ ಪಟ್ಟ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಧಾರಾವಾಹಿ ಯಾವ ರೀತಿಯ ತಿರುವು ಪಡೆದುಕೊಳ್ಳುತ್ತದೆ ಅನ್ನೋದು ಸದ್ಯದ ಕುತೂಹಲ.

ಮಾಲಾ ಶಿಕ್ಷಣ ಸಂಸ್ಥೆಯ ಎಂಡಿ ಪಟ್ಟ ಸಾನಿಯಾ ಕೈಯಲ್ಲಿದೆ. ಸಾನಿಯಾ ಬಳಿ ಭುವಿ ಶಿಷ್ಯವೃತ್ತಿ ಮಾಡುತ್ತಿದ್ದಾರೆ. ಸಾನಿಯಾ ಅವರಿಂದ ಒಂದಷ್ಟು ವಿಚಾರ ಕಲಿಯಬಹುದು ಎನ್ನುವ ಆಲೋಚನೆ ಅವರದ್ದಾಗಿತ್ತು. ಆದರೆ, ಅವರಿಂದ ಪದೇಪದೇ ಕಿರಿಕಿರಿ ಉಂಟಾಗುತ್ತಿರುವುದರಿಂದ ಭುವಿ ಸಿಟ್ಟಾಗಿದ್ದಾರೆ. ಅವರ ತಾಳ್ಮೆಯ ಕಟ್ಟೆ ಒಡೆದಿದೆ. ಇಂಗ್ಲಿಷ್​ ಬರುವುದಿಲ್ಲ ಎಂದು ಪದೇಪದೇ ಹಂಗಿಸಿದ್ದರು ಸಾನಿಯಾ. ಭುವಿಯನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎನ್ನುವುದು ಸಾನಿಯಾ ಆಲೋಚನೆ ಆಗಿತ್ತು. ಈ ಕಾರಣಕ್ಕೆ ಎಂಡಿ ಪಟ್ಟವನ್ನು ಒಂದು ದಿನದ ಅವಧಿಗೆ ಭುವಿಗೆ ನೀಡಿದ್ದರು. ಇದು ಸಾನಿಯಾ ಮಾಡಿದ ದೊಡ್ಡ ತಪ್ಪು.

ಅಂದುಕೊಂಡಿದ್ದಕ್ಕಿಂತಲೂ ಉತ್ತಮವಾಗಿ ಎಂಡಿ ಪಟ್ಟವನ್ನು ಭುವಿ ನಿರ್ವಹಿಸುತ್ತಿದ್ದಾರೆ. ಎಲ್ಲರ ಎದುರು ಇಂಗ್ಲಿಷ್​ನಲ್ಲಿ ಮಾತನಾಡಿ ತೋರಿಸಿದ್ದಾರೆ. ಇದು ಸಾನಿಯಾಗೆ ನಿಜಕ್ಕೂ ಶಾಕಿಂಗ್​ ಆಗಿತ್ತು. ಭುವಿ ಇಂಗ್ಲಿಷ್​ನಲ್ಲಿ ಮಾತನಾಡಿದ್ದನ್ನು ವಿಡಿಯೋ ಕಾಲ್​ ಮೂಲಕ ರತ್ನಮಾಲಾ ಹಾಗೂ ಹರ್ಷ ಕೂಡ ವೀಕ್ಷಣೆ ಮಾಡಿದ್ದಾರೆ.

ಭುವಿ ನಿಜವಾದ ಹೆಸರು ಸೌಪರ್ಣಿಕಾ. ಅವರೇ ಮಾಲಾ ಸಂಸ್ಥೆಯ ಮುಂದಿನ ಎಂಡಿ. ಈಗ ಭುವಿ ಇಷ್ಟೊಂದು ಅದ್ಭುತವಾಗಿ ಎಂಡಿ ಪಟ್ಟ ನಿರ್ವಹಿಸಿರುವುದು ರತ್ನಮಾಲಾಗೆ ಖುಷಿ ನೀಡಿದೆ. ಹೀಗಾಗಿ ಶೀಘ್ರವೆ ಭುವಿಗೆ ಎಂಡಿ ಪಟ್ಟ ಸಿಕ್ಕರೂ ಅಚ್ಚರಿ ಇಲ್ಲ. ಮುಂದೇನಾಗುತ್ತದೆ ಎಂಬುದು ಸದ್ಯದ ಕುತೂಹಲ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಪೈಪೋಟಿ ನೀಡಲು ಬಂದಿರುವ ಕನ್ನಡತಿ ಕೃತಿ ಶೆಟ್ಟಿಗೆ ಪರಭಾಷೆಯಲ್ಲಿ ಫುಲ್​ ಡಿಮ್ಯಾಂಡ್​​

‘ಕನ್ನಡತಿ’ ರಮೋಲಾ ಸೊಂಟ ಬಳುಕಿಸುವ ಪರಿಗೆ ಅಭಿಮಾನಿಗಳು ಫಿದಾ

TV9 Web

TV9 Kannada

Read More
Loading...
Unable to load recommendations.
Follow Us