ರಿಯಾಲಿಟಿ ಶೋನಲ್ಲಿ ಅಪಹಾಸ್ಯ; ಅಸಮಾಧಾನಗೊಂಡ ಕರಣ್ ಜೋಹರ್ ಏನು ಮಾಡಿದ್ರು ನೋಡಿ

| Updated By: ರಾಜೇಶ್ ದುಗ್ಗುಮನೆ

Updated on: May 06, 2024 | 11:18 AM

‘ನಾನು ನನ್ನ ತಾಯಿಯೊಂದಿಗೆ ಟಿವಿ ನೋಡುತ್ತಿದ್ದೆ. ನಾನು ವಾಹಿನಿಯೊಂದರಲ್ಲಿ ಪ್ರಸಾರ ಕಾಣುತ್ತಿರುವ ಕಾಮಿಡಿ ರಿಯಾಲಿಟಿ ಶೋನ ಪ್ರೋಮೋವನ್ನು ನೋಡಿದೆ. ಅದರಲ್ಲಿ ಓರ್ವ ಹಾಸ್ಯನಟ ನನ್ನನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಕರಿಸುತ್ತಿದ್ದರು' ಎಂದು ಕರಣ್ ಜೋಹರ್ ತಮ್ಮ ಬರಹ ಆರಂಭಿಸಿದ್ದಾರೆ.

ರಿಯಾಲಿಟಿ ಶೋನಲ್ಲಿ ಅಪಹಾಸ್ಯ; ಅಸಮಾಧಾನಗೊಂಡ ಕರಣ್ ಜೋಹರ್ ಏನು ಮಾಡಿದ್ರು ನೋಡಿ
ಕರಣ್
Follow us on

ಬಾಲಿವುಡ್ ಇಂಡಸ್ಟ್ರಿಯ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ (Karan Johar) ಕಾಮಿಡಿ ಶೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಶೋನಲ್ಲಿ ಕರಣ್ ಅವರನ್ನು ತುಂಬಾ ಕೆಟ್ಟದಾಗಿ ಬಿಂಬಿಸಲಾಗಿತ್ತು. ಭಾನುವಾರ ರಾತ್ರಿ ಕರಣ್ ಇನ್​ಸ್ಟಾಗ್ರಾಮ್ ಸ್ಟೇಟಸ್​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ಮ್ಯಾಡ್ನೆಸ್ ಮಚಾಯೆಂಗೆ ಇಂಡಿಯಾ ಕೋ ಹಸಾಯೆಂಗೆ’ ಶೋನಲ್ಲಿ ಕೇತನ್ ಸಿಂಗ್ ಎಂಬುವವರು ಕರಣ್ ಜೋಹರ್ ಅವರನ್ನು ಅನುಕರಿಸಿ ಮಾತನಾಡಿದ್ದರು. ಇವರನ್ನು ಉದ್ದೇಶಿಸಿ ಕರಣ್ ಜೋಹರ್ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

‘ನಾನು ನನ್ನ ತಾಯಿಯೊಂದಿಗೆ ಟಿವಿ ನೋಡುತ್ತಿದ್ದೆ. ನಾನು ವಾಹಿನಿಯೊಂದರಲ್ಲಿ ಪ್ರಸಾರ ಕಾಣುತ್ತಿರುವ ಕಾಮಿಡಿ ರಿಯಾಲಿಟಿ ಶೋನ ಪ್ರೋಮೋವನ್ನು ನೋಡಿದೆ. ಅದರಲ್ಲಿ ಓರ್ವ ಹಾಸ್ಯನಟ ನನ್ನನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಕರಿಸುತ್ತಿದ್ದರು’ ಎಂದು ತಮ್ಮ ಬರಹ ಆರಂಭಿಸಿದ್ದಾರೆ ಕರಣ್ ಜೋಹರ್.

‘ಟ್ರೋಲರ್‌ಗಳು, ಮುಖವಿಲ್ಲದ ಮತ್ತು ಹೆಸರಿಲ್ಲದ ಜನರಿಂದ ನಾನು ಇದನ್ನು ನಿರೀಕ್ಷಿಸುತ್ತೇನೆ. ಆದರೆ ನಿಮ್ಮದೇ ಇಂಡಸ್ಟ್ರಿಯಲ್ಲಿ ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ಅವಮಾನಿಸಿದಾಗ ಬೇಸರ ಆಗುತ್ತದೆ. ಇದರ ಬಗ್ಗೆ ನನಗೆ ಕೋಪವಿಲ್ಲ, ಆದರೆ ನನಗೆ ವಿಷಾದವಿದೆ’ ಎಂದು ಕರಣ್ ಜೋಹರ್ ಅಸಮಾಧಾನ ವ್ಯಕ್ತಪಡಿಸಿದರು.

ಕರಣ್ ಅವರ ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ನಿರ್ಮಾಪಕಿ ಏಕ್ತಾ ಕಪೂರ್ ಅವರು ಕರಣ್​ನ ಬೆಂಬಲಿಸಿದ್ದಾರೆ. ‘ಇದು ಹಲವು ಬಾರಿ ನಡೆದಿದೆ. ರಿಯಾಲಿಟಿ ಶೋಗಳಲ್ಲಿ, ಅವಾರ್ಡ್ ಫಂಕ್ಷನ್​ಗಳಲ್ಲಿ ಕೆಟ್ಟದಾಗಿ ತಮಾಷೆ ಮಾಡಲಾಗುತ್ತದೆ. ಈ ಅವಾರ್ಡ್ ಕಾರ್ಯಕ್ರಮದಲ್ಲಿ ನೀವು ಹಾಜರಾಗಬೇಕೆಂದು ಅವರು ನಿರೀಕ್ಷಿಸುತ್ತಾರೆ. ಕರಣ್ ದಯವಿಟ್ಟು ನಿಮ್ಮ ಯಾವುದಾದರೂ ಒಂದು ಸಿನಿಮಾವನ್ನು ಇಮಿಟೇಟ್ ಮಾಡಲು ಹೇಳಿ’ ಎಂದು ಬರೆದುಕೊಂಡಿದ್ದಾರೆ. ಏಕ್ತಾ ಅವರ ಈ ಪೋಸ್ಟ್ ಅನ್ನು ಕರಣ್ ಅವರು ತಮ್ಮ ಇನ್​ಸ್ಟಾ ಖಾತೆಯಲ್ಲಿ ರೀ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಜೂ. ಎನ್​ಟಿಆರ್​ ಜತೆ ಕೈ ಜೋಡಿಸಿದ ಕರಣ್​ ಜೋಹರ್​; ‘ದೇವರ’ ದೊಡ್ಡ ಪ್ಲ್ಯಾನ್​

ಕರಣ್ ತಮ್ಮ ಪೋಸ್ಟ್‌ನಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಚಾನೆಲ್ ಹೆಸರಿಸದಿದ್ದರೂ, ಅನೇಕರು ಇದನ್ನು ಊಹಿಸಿದ್ದಾರೆ. ‘ಮ್ಯಾಡ್ನೆಸ್ ಮಚಾಯೇಂಗೆ ಇಂಡಿಯಾ ಕೋ ಹಸೇಂಗೆ’ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋನಲ್ಲಿ ಕರಣ್ ಅವರ ಕಾರ್ಯಕ್ರಮ ‘ಕಾಫಿ ವಿತ್ ಕರಣ್’ ಶೋನ ‘ಟಾಫಿ ವಿತ್ ಚುರನ್’ ಎಂದು ಮರುನಾಮಕರಣ ಮಾಡಿ ಟೀಕಿಸಲಾಗಿದೆ. ಅನೇಕರು ವಾಹಿನಿ ವಿರುದ್ಧ ಅಪಸ್ವರ ತೆಗೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.