
ಕಿರಣ್ ರಾಜ್, ನಮ್ರತಾ ಗೌಡ, ಭವ್ಯಾ ಗೌಡ, ನಾಗಾಭರಣ ಹಾಗೂ ಮೊದಲಾದವರು ನಟಿಸಿರುವ ‘ಕರ್ಣ’ ಧಾರಾವಾಹಿ (Karna Serial) ಸತತ ಮೂರನೇ ವಾರ ಟಿಆರ್ಪಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಮೂರುವಾರ ಈ ಧಾರಾವಾಹಿಗೆ ಡಬಲ್ ಡಿಜಿಟ್ ಟಿಆರ್ಪಿ ಸಿಕ್ಕಿದೆ ಅನ್ನೋದು ವಿಶೇಷ. ಈ ಧಾರಾವಾಹಿಯನ್ನು ಕನ್ನಡ ಜನತೆ ಒಪ್ಪಿ ಮೆಚ್ಚಿದೆ. ಹೀಗಾಗಿ ಟಿಆರ್ಪಿಯಲ್ಲಿ ಏರಿಕೆ ಕಂಡಿದೆ.
ಕರ್ಣ ಧಾರಾವಾಹಿ ಕಥೆ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಇನ್ನೂ ಊಹಿಸೋಕೆ ಆಗುತ್ತಿಲ್ಲ. ‘ಕರ್ಣ’ನ ಪಾತ್ರದಲ್ಲಿರೋ ಕಿರಣ್ ರಾಜ್ ವೈದ್ಯನಾದರೆ, ನಿಧಿ ಪಾತ್ರದಲ್ಲಿ ಭವ್ಯಾ ಗೌಡ ವೈದ್ಯ ವಿದ್ಯಾರ್ಥಿನಿ ಪಾತ್ರದಲ್ಲಿದ್ದಾರೆ. ಇವರ ಮಧ್ಯೆ ಪ್ರೀತಿ ಮೂಡುತ್ತಿದೆ. ಆದರೆ, ಧಾರಾವಾಹಿಯಲ್ಲಿ ಕಿರಣ್ ರಾಜ್ ವಿವಾಹ ಆಗೋದು ನಮ್ರತಾ ಗೌಡನ್ನು ಎನ್ನುವ ಊಹೆ ಪ್ರೇಕ್ಷಕರದ್ದು. ಸದ್ಯ ಈ ಧಾರಾವಾಹಿ ಒಳ್ಳೆಯ ಟಿಆರ್ಪಿ ಪಡೆದುಕೊಂಡಿದೆ.
ಸತತ ಮೂರು ವಾರಗಳಿಂದ ಈ ಧಾರಾವಾಹಿ 10+ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಜನರು ಧಾರಾವಾಹಿಗೆ ಎಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂಬುದಕ್ಕೆ ಇದುವೇ ಸಾಕ್ಷಿ. ಈ ಧಾರಾವಾಹಿ ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ರೇಟಿಂಗ್ ಪಡೆಯೋ ಸಾಧ್ಯತೆ ಇದೆ. ‘ಲಕ್ಷ್ಮೀ ನಿವಾಸ’ ಧಾರಾವಾಹಿ ಎರಡನೇ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಕನ್ನಡಿಗರ ಮೆಚ್ಚುಗೆ ಪಡೆದಿದೆ. ಈ ಮೊದಲು ಅನೇಕ ಬಾರಿ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿತ್ತು.
ಇದನ್ನೂ ಓದಿ: ಎರಡನೇ ವಾರವೂ ಎರಡಂಕಿ ಟಿಆರ್ಪಿ ಪಡೆದ ‘ಕರ್ಣ’; ಟಾಪ್ ಐದು ಧಾರಾವಾಹಿಗಳಿವು
ಮೂರನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ. ಈ ಧಾರಾವಾಹಿ ಕೆಲವು ವಾರ ಮೊದಲ ಸ್ಥಾನ ಪಡೆದುಕೊಂಡ ಉದಾಹರಣೆ ಇದೆ. ಇದರಲ್ಲಿ ವಿಕಾಶ್ ಉತ್ತಯ್ಯ, ನಿಶಾ ರವಿಕೃಷ್ಣನ್ ನಟಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’, ಐದನೇ ಸ್ಥಾನದಲ್ಲಿ ‘ನಾ ನಿನ್ನ ಬಿಡಲಾರೆ’ ಹಾಗೂ ಆರನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.