ಯಾರಿಗೂ ಬೇಡವಾಯ್ತು ಕಾರ್ತಿಕ್ ಸ್ನೇಹ; ಕಾರಣ ಕೊಟ್ಟು ‘ಫ್ರೆಂಡ್​ಶಿಪ್’ ಬೇಡ ಎಂದ ಸ್ಪರ್ಧಿಗಳು

ಯಾರ ಫ್ರೆಂಡ್​ಶಿಪ್​ನ ಬಿಗ್ ಬಾಸ್ ಮನೆ ಹೊರಗೂ ತೆಗೆದುಕೊಂಡು ಹೋಗುತ್ತೀರಿ, ಯಾರ ಫ್ರೆಂಡ್​ಶಿಪ್ ಇಲ್ಲಿಯೇ ಬಿಟ್ಟು ಹೋಗುತ್ತೀರಿ ಎಂಬುದನ್ನು ಹೇಳಬೇಕಿತ್ತು. ಇದಕ್ಕೆ ಸ್ಪರ್ಧಿಗಳು ಉತ್ತರಿಸಿದ್ದಾರೆ.

ಯಾರಿಗೂ ಬೇಡವಾಯ್ತು ಕಾರ್ತಿಕ್ ಸ್ನೇಹ; ಕಾರಣ ಕೊಟ್ಟು ‘ಫ್ರೆಂಡ್​ಶಿಪ್’ ಬೇಡ ಎಂದ ಸ್ಪರ್ಧಿಗಳು
ಬಿಗ್ ಬಾಸ್
Edited By:

Updated on: Jan 15, 2024 | 8:02 AM

ಬಿಗ್ ಬಾಸ್ (Bigg Boss) ಮನೆಯಲ್ಲಿ ಎದುರಿಗೆ ಕಾಣೋದು ನಿಜ ಎಂದು ಭಾವಿಸುವುದು ತಪ್ಪು. ಹಿಂದೊಂದು ಮುಂದೊಂದು ಎಂದು ನಡೆದುಕೊಳ್ಳುವ ಸ್ಪರ್ಧಿಗಳು ಅನೇಕರು ಇರುತ್ತಾರೆ. ಸ್ಪರ್ಧಿಗಳ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯುತ್ತದೆ. ಆದರೆ, ಅದು ಎಷ್ಟು ದಿನ ಇರುತ್ತದೆ, ಯಾವಾಗ ಬದಲಾಗುತ್ತದೆ ಎಂದು ಹೇಳುವುದು ಕಷ್ಟ. ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲೂ ಹಾಗೆಯೇ ಆಗಿದೆ. ಕಾರ್ತಿಕ್ ತಾವು ಆಪ್ತರು ಎಂದುಕೊಂಡವರೆಲ್ಲ ಅವರ ಫ್ರೆಂಡ್​ಶಿಪ್ ಬೇಡ ಎಂದಿದ್ದಾರೆ. ಇದು ಅವರಿಗೆ ಶಾಕಿಂಗ್ ಎನಿಸಿದೆ.

ವೀಕೆಂಡ್ ಎಪಿಸೋಡ್​ನಲ್ಲಿ ಒಂದು ಟಾಸ್ಕ್ ನೀಡಲಾಯಿತು ಪ್ರತಿ ಸ್ಪರ್ಧಿಗೆ ಎರಡು ಫೋಟೋ ನೀಡಲಾಗುತ್ತದೆ. ಪ್ರತಿ ಸ್ಪರ್ಧಿ ಎರಡು ಪ್ರತ್ಯೇಕ ವ್ಯಕ್ತಿಗಳ ಜೊತೆ ನಿಂತಿರುವ ಫೋಟೋ ಇದು. ಈ ಪೈಕಿ ಯಾರ ಫ್ರೆಂಡ್​ಶಿಪ್​ನ ಬಿಗ್ ಬಾಸ್ ಮನೆ ಹೊರಗೂ ತೆಗೆದುಕೊಂಡು ಹೋಗುತ್ತೀರಿ, ಯಾರ ಫ್ರೆಂಡ್​ಶಿಪ್ ಇಲ್ಲಿಯೇ ಬಿಟ್ಟು ಹೋಗುತ್ತೀರಿ ಎಂಬುದನ್ನು ಹೇಳಬೇಕು.

ಸಂಗೀತಾ ಅವರಿಗೆ ವಿನಯ್ ಹಾಗೂ ಕಾರ್ತಿಕ್ ಜೊತೆಗಿನ ಫೋಟೋ ಬಂತು. ಈ ಪೈಕಿ ತಮಗೆ ಇಬ್ಬರ ಫ್ರೆಂಡ್​ಶಿಪ್ ಬೇಡ ಎಂದು ಹೇಳಿದರು. ನಂತರ ತನಿಷಾ ಅವರಿಗೆ ವರ್ತೂರು ಸಂತೋಷ್ ಹಾಗೂ ಕಾರ್ತಿಕ್ ಜೊತೆ ಇರೋ ಫೋಟೋಗಳು ಬಂದವು.  ಈ ಪೈಕಿ ವರ್ತೂರು ಸಂತೋಷ್ ಅವರ ಫ್ರೆಂಡ್​ಶಿಪ್​ನ ಹೊರಗೆ ತೆಗೆದುಕೊಂಡು ಹೋಗ್ತೀನಿ, ಕಾರ್ತಿಕ್ ಫ್ರೆಂಡ್​ಶಿಪ್​ನ ಇಲ್ಲೇ ಬಿಡುತ್ತೀನಿ ಎಂದರು. ನಂತರ ವಿನಯ್ ಅವರಿಗೆ ನಮ್ರತಾ ಹಾಗೂ ಕಾರ್ತಿಕ್ ಆಯ್ಕೆ ಬಂತು. ಈ ವೇಳೆ ‘ನನ್ನ ಸಿಸ್ಟರ್ ನಮ್ರತಾ ಜೊತೆ ಗೆಳೆತನನ ಮುಂದುವರಿಸಿಕೊಂಡು ಹೋಗ್ತೀನಿ. ಕಾರ್ತಿಕ್ ಫ್ರೆಂಡ್​ಶಿಪ್​ನ ಇಲ್ಲಿಯೇ ಬಿಡ್ತೀನಿ’ ಎಂದರು.

ಕಾರ್ತಿಕ್ ಹಾಗೂ ಸಂಗೀತಾ ಬಿಗ್ ಬಾಸ್ ಆರಂಭದಲ್ಲಿ ಉತ್ತಮವಾಗಿದ್ದರು. ಇಬ್ಬರ ಮಧ್ಯೆ ಆಪ್ತತೆ ಇತ್ತು. ಆದರೆ, ದಿನ ಕಳೆದಂತೆ ಈ ಫ್ರೆಂಡ್​ಶಿಪ್ ಹಾಳಾಯಿತು. ಇಬ್ಬರೂ ದೂರ ಆದರು. ಈಗ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಉಳಿದುಕೊಂಡಿಲ್ಲ. ಕಾರ್ತಿಕ್ ಅವರು ಪ್ಯಾಚಪ್ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಸಂಗೀತಾ ಕೂಡ ಅನೇಕ ಬಾರಿ ಓಪನ್ ಆಗಿ ‘ನಿಮ್ಮ ಫ್ರೆಂಡ್​ಶಿಪ್ ಬೇಡ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫಿನಾಲೆ ಟಿಕೆಟ್ ವಿಚಾರದಲ್ಲಿ ಪ್ರತಾಪ್​ಗೆ ದ್ರೋಹ? ಬಿಗ್ ಬಾಸ್ ಘೋಷಣೆಯಲ್ಲೇ ಇತ್ತು ಸ್ಪಷ್ಟತೆ  

ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಅನೇಕ ಬಾರಿ ಜಗಳ ನಡೆದಿದೆ. ಕಾರ್ತಿಕ್​ಗಿಂತ ನಮ್ರತಾ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಹೀಗಾಗಿ, ವಿನಯ್ ಅವರು ನಮ್ರತಾನ ಚ್ಯೂಸ್ ಮಾಡಿದ್ದಾರೆ. ಇನ್ನು ತನಿಷಾ ಹಾಗೂ ಕಾರ್ತಿಕ್ ಕಳೆದ ವಾರದವರೆಗೆ ಉತ್ತಮ ಗೆಳೆಯರಾಗಿಯೇ ಇದ್ದರು. ಆದರೆ, ಕಾರಣವೇ ಇಲ್ಲದೆ ತನಿಷಾ ಹೆಸರನ್ನು ಕಾರ್ತಿಕ್ ನಾಮಿನೇಟ್ ಮಾಡಿದರು. ಇದರಿಂದ ತನಿಷಾಗೆ ಬೇಸರ ಆಗಿದೆ. ಅವರು ಕಣ್ಣೀರು ಹಾಕಿದ್ದರು. ‘ವರ್ತೂರು ಸಂತೋಷ್ ಏನೇ ಇದ್ದರೂ ಅದನ್ನು ನೇರವಾಗಿ ಹೇಳುತ್ತಾರೆ’ ಎನ್ನುವ ಅಭಿಪ್ರಾಯ ತನಿಷಾ ಅವರದ್ದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us