AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿನಾಲೆ ಟಿಕೆಟ್ ವಿಚಾರದಲ್ಲಿ ಪ್ರತಾಪ್​ಗೆ ದ್ರೋಹ? ಬಿಗ್ ಬಾಸ್ ಘೋಷಣೆಯಲ್ಲೇ ಇತ್ತು ಸ್ಪಷ್ಟತೆ  

ಬಿಗ್ ಬಾಸ್ ಟಾಪ್​ 3ನ ಆಯ್ಕೆ ಮಾಡಿದರು. ಈ ಪೈಕಿ ಪ್ರತಾಪ್, ಸಂಗೀತಾ ಹಾಗೂ ನಮ್ರತಾ ಇದ್ದರು. ನಂತರ ಮನೆಯವರಿಂದಲೇ ವೋಟಿಂಗ್ ಮಾಡಿಸಲಾಯಿತು. ಈ ಪೈಕಿ ಸಂಗೀತಾ ಹೆಚ್ಚು ವೋಟ್ ಪಡೆದು ಫಿನಾಲೆ ಟಿಕೆಟ್ ಪಡೆದರು. ಈ ಬಗ್ಗೆ ಚರ್ಚೆ ಆಗುತ್ತಿದೆ.

ಫಿನಾಲೆ ಟಿಕೆಟ್ ವಿಚಾರದಲ್ಲಿ ಪ್ರತಾಪ್​ಗೆ ದ್ರೋಹ? ಬಿಗ್ ಬಾಸ್ ಘೋಷಣೆಯಲ್ಲೇ ಇತ್ತು ಸ್ಪಷ್ಟತೆ  
ಪ್ರತಾಪ್
ರಾಜೇಶ್ ದುಗ್ಗುಮನೆ
|

Updated on: Jan 13, 2024 | 12:00 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ ಫಿನಾಲೆಗೆ ದಿನ ಗಣನೆ ಶುರುವಾಗಿದೆ. ಎಂಟು ಜನರ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ಈ ವಾರ ಸಂಗೀತಾ ಶೃಂಗೇರಿ ಅವರು ‘ಟಿಕೆಟ್​ ಟು ಫಿನಾಲೆ’ (Ticket To Finale) ಗೆದ್ದು ಫಿನಾಲೆ ಪ್ರವೇಶಿಸಿದ್ದಾರೆ. ಇನ್ನು ನಾಲ್ಕು ಸದಸ್ಯರು ಈ ಸ್ಥಾನಕ್ಕೆ ಪೈಪೋಟಿ ನಡೆಸಲಿದ್ದಾರೆ. ಈ ಮಧ್ಯೆ ಒಂದು ಚರ್ಚೆ ಶುರುವಾಗಿದೆ. ‘ಡ್ರೋನ್ ಪ್ರತಾಪ್ ಅವರಿಗೆ ದ್ರೋಹ ಆಗಿದೆ’ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಜೋರಾಗಿದೆ. ಆದರೆ, ಬಿಗ್ ಬಾಸ್ ಘೋಷಣೆಯಲ್ಲಿ ಸ್ಪಷ್ಟತೆ ಇತ್ತು.

ಮಂಗಳವಾರದ ಎಪಿಸೋಡ್​ನಲ್ಲಿ ಬಿಗ್ ಬಾಸ್ ಕಡೆಯಿಂದ ಒಂದು ಘೋಷಣೆ ಆಗಿತ್ತು. ‘ಫಿನಾಲೆ ವಾರಕ್ಕೆ ಕಾಲಿಡುವ ಮೊದಲ ಸ್ಪರ್ಧಿ ಯಾರು ಎನ್ನುವ ಪ್ರಶ್ನೆಗೆ ಈ ವಾರದ ಟಾಸ್ಕ್ ಮುಗಿಯುವ ವೇಳೆಗೆ ಉತ್ತರ ಸಿಗಲಿದೆ. ಈ ವಾರ ‘ಟಿಕೆಟ್​ ಟು ಫಿನಾಲೆ’ ಟಾಸ್ಕ್ ರೂಪಿಸಲಾಗಿದೆ. ಎಲ್ಲಾ ಸ್ಪರ್ಧಿಗಳಿಗೆ ವೈಯಕ್ತಿಕ ಟಾಸ್ಕ್​ ನೀಡಲಾಗುತ್ತದೆ. ಟಾಸ್ಕ್​ ಗೆದ್ದು ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರು ಫಿನಾಲೆ ಟಿಕೆಟ್ ಪಡೆಯುತ್ತಾರೆ’ ಎಂದು ಬಿಗ್ ಬಾಸ್ ಘೋಷಿಸಿದ್ದರು.

ಟಾಸ್ಕ್​ನಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದು ಡ್ರೋನ್ ಪ್ರತಾಪ್. ಆದರೆ, ಬಿಗ್ ಬಾಸ್ ಟಾಪ್​ 3ನ ಆಯ್ಕೆ ಮಾಡಿದರು. ಈ ಪೈಕಿ ಪ್ರತಾಪ್, ಸಂಗೀತಾ ಹಾಗೂ ನಮ್ರತಾ ಇದ್ದರು. ನಂತರ ಮನೆಯವರಿಂದಲೇ ವೋಟಿಂಗ್ ಮಾಡಿಸಲಾಯಿತು. ಈ ಪೈಕಿ ಸಂಗೀತಾ ಹೆಚ್ಚು ವೋಟ್ ಪಡೆದು ಫಿನಾಲೆ ಟಿಕೆಟ್ ಪಡೆದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ ವಿನಯ್ ಗೌಡ

ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ. ‘ಮೊದಲು ಟಾಸ್ಕ್​ನಲ್ಲಿ ಹೆಚ್ಚು ಅಂಕ ಗಳಿಸಿದ ಒಬ್ಬ ಸದಸ್ಯನಿಗೆ ಫಿನಾಲೆ ಟಿಕೆಟ್ ಎಂದು ಹೇಳಲಾಗಿತ್ತು. ಆದರೆ, ಈಗ ವೋಟಿಂಗ್ ಮಾಡಿಸಿ ಟಿಕೆಟ್ ನೀಡಿದ್ದು ಎಷ್ಟು ಸರಿ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಆದರೆ, ಬಿಗ್ ಬಾಸ್ ಘೋಷಣೆಯಲ್ಲೇ ಸ್ಪಷ್ಟತೆ ಇತ್ತು. ‘ಟಾಸ್ಕ್​ ಗೆದ್ದು ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರು’ ಎಂದು ಸ್ಪಷ್ಟವಾಗಿ ಹೇಳಿದ್ದರು. ಅದರಂತೆ ಟಾಸ್ಕ್​ ನಡೆದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?