ಬಿಗ್ ಬಾಸ್ ಮನೆಯಲ್ಲಿ ಯಾರ ಜೊತೆ ಬೇಕಿದ್ದರೂ ಫ್ರೆಂಡ್ಶಿಪ್ ಬೆಳೆಯಬಹುದು, ಯಾರ ಮೇಲೆ ಬೇಕಿದ್ದರೂ ದ್ವೇಷ ಬೆಳೆಯಬಹುದು. ಗೆಳೆಯರಾಗಿದ್ದವರ ಮಧ್ಯೆ ವೈರತ್ವ ಬೆಳೆದ ಉದಾಹರಣೆ ಸಾಕಷ್ಟಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಸಂಗೀತಾ (Sangeetha Sringeri) ಹಾಗೂ ಕಾರ್ತಿಕ್. ಇಬ್ಬರೂ ಆರಂಭದಲ್ಲಿ ಕ್ಲೋಸ್ ಆಗಿದ್ದರು. ಆದರೆ, ಈಗ ಇಬ್ಬರೂ ಬೇರೆ ಆಗಿದ್ದಾರೆ. ಇವರ ಮಧ್ಯೆ ದ್ವೇಷ ಬೆಳೆದಿದೆ. ಸಂಗೀತಾ ಅವರನ್ನು ಶನಿಯ ಸ್ಥಾನದಲ್ಲಿ ಇಟ್ಟಿದ್ದಾರೆ ಕಾರ್ತಿಕ್.
ಆರಂಭದಲ್ಲಿ ಕಾರ್ತಿಕ್ ಹಾಗೂ ಸಂಗೀತಾ ಅಸಮರ್ಥರ ಸಾಲಿನಲ್ಲಿ ಇದ್ದರು. ಈ ಕಾರಣಕ್ಕೆ ಇವರ ಮಧ್ಯೆ ಬಾಂಧವ್ಯ ಬೆಳೆಯಿತು. ಇಬ್ಬರೂ ಹೆಚ್ಚು ಹೊತ್ತು ಸಮಯ ಕಳೆದರು. ಆದರೆ, ಒಂದು ಹಂತದಲ್ಲಿ ಇಬ್ಬರೂ ಬೇರೆ ಆದರು. ಈಗ ಇವರ ಮಧ್ಯೆ ಉಳಿದುಕೊಂಡಿರುವುದು ದ್ವೇಷ ಮಾತ್ರ. ಸಂಗೀತಾ ಬೆನ್ನು ಬಿದ್ದರೆ ಶನಿ ಬೆನ್ನು ಬಿದ್ದಂತೆ ಎಂಬ ಅಭಿಪ್ರಾಯವನ್ನು ಕಾರ್ತಿಕ್ ಹೊರಹಾಕಿದ್ದಾರೆ.
‘ಬಿಗ್ ಬಾಸ್ ಮನೆಯಲ್ಲಿ ಮೂರು ಶನಿಗಳಿವೆ. ಅವು ಯಾವವು’ ಎಂದು ಕಾರ್ತಿಕ್ ಅವರು ವರ್ತೂರು ಸಂತೋಷ್ ಬಳಿ ಕೇಳಿದ್ದಾರೆ. ಇದಕ್ಕೆ ಸಂತೋಷ್ ಅವರು ಮೊದಲು ವಿನಯ್ ಹೆಸರು ತೆಗೆದುಕೊಂಡರು. ನಂತರ ನಮ್ರತಾ ಹೆಸರು ತೆಗೆದುಕೊಂಡರು. ಆ ಬಳಿಕ ಯೋಚಿಸಿ ಸಂಗೀತಾ ಹೆಸರನ್ನು ಹೇಳಿದರು. ‘ಈ ಶನಿಗಳು ಪ್ರಭಾವ ಬೀರೋಕೆ ಆರಂಭಿಸಿದರೆ ಮುಗಿಯಿತು’ ಎಂದು ಸಂತೋಷ್ ಹೇಳಿದ್ದಾರೆ.
ಇದನ್ನೂ ಓದಿ: ‘ಯಾರ ಜತೆ ಇದ್ರೆ ಉಪಯೋಗ ಆಗತ್ತೆ ಅಂತ ಸಂಗೀತಾ ನೋಡ್ತಾರೆ’: ಕಾರ್ತಿಕ್ ಆರೋಪ
ಕಾರ್ತಿಕ್ ಕೂಡ ಈ ಮಾತನ್ನು ಒಪ್ಪಿದ್ದಾರೆ. ವಿನಯ್ ಹೆಸರಿನ ಶನಿಯ ಪ್ರಭಾವ ಮೊದಲಿನಿಂದಲೂ ಇತ್ತು ಅನ್ನೋದು ಅವರ ಅಭಿಪ್ರಾಯ. ಇತ್ತೀಚೆಗೆ ಸಂಗೀತಾ ಪ್ರಭಾವ ಕೂಡ ಹೆಚ್ಚುತ್ತಿದೆ ಎಂದಿದ್ದಾರೆ ಕಾರ್ತಿಕ್. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು. ಜನವರಿ ಅಂತ್ಯಕ್ಕೆ ಬಿಗ್ ಬಾಸ್ ಫಿನಾಲೆ ಪ್ರಸಾರ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:33 am, Tue, 2 January 24