‘ಅವಳ ಕೆನ್ನೆಗೆ ಹೊಡೆದುಬಿಟ್ಟೆ’; 8 ವರ್ಷಗಳ ಪ್ರೀತಿ ಕಳೆದುಕೊಂಡ ಕಥೆ ಹೇಳಿದ ಕಾರ್ತಿಕ್

|

Updated on: Oct 26, 2023 | 7:32 AM

ಕಾರ್ತಿಕ್ ಅವರು ಬಿಗ್ ಬಾಸ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ‘ಡೊಳ್ಳು’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ತಮ್ಮ ಜೀವನದಲ್ಲಾದ ಕಹಿ ಘಟನೆ ನೆನಪಿಸಿಕೊಂಡಿದ್ದಾರೆ.

‘ಅವಳ ಕೆನ್ನೆಗೆ ಹೊಡೆದುಬಿಟ್ಟೆ’; 8 ವರ್ಷಗಳ ಪ್ರೀತಿ ಕಳೆದುಕೊಂಡ ಕಥೆ ಹೇಳಿದ ಕಾರ್ತಿಕ್
ಕಾರ್ತಿಕ್ ಮಹೇಶ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಮೂರನೇ ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಪ್ರತಿ ವಾರ ಒಬ್ಬರು ಎಲಿಮಿನೇಟ್ ಆಗುತ್ತಿದ್ದಾರೆ. ಇವುಗಳ ಮಧ್ಯೆ ಬಿಗ್ ಬಾಸ್​ನಲ್ಲಿ ಹಲವು ರೀತಿಯ ಟಾಸ್ಕ್ ಹಾಗೂ ಚಟುವಟಿಕೆಗಳನ್ನು ನೀಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಬಿಗ್ ಬಾಸ್ ಸ್ಪರ್ಧಿಗಳಿಗೆ ಕ್ಷಮೆ ಕೇಳುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದರು. ಸಂಗೀತಾ ಶೃಂಗೇರಿ (Sangeetha Sringeri), ವಿನಯ್ ಸೇರಿದಂತೆ ಅನೇಕರು ತಾವು ಜೀವನದಲ್ಲಿ ಮಾಡಿದ ತಪ್ಪನ್ನು ನೆನೆದು ಕ್ಷಮೆ ಕೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಕಾರ್ತಿಕ್ ಮಹೇಶ್ ಅವರ ಎಂಟು ವರ್ಷದ ಪ್ರೀತಿ ಕೊನೆಯಾಗಿತ್ತು. ಆ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಕಾರ್ತಿಕ್ ಅವರು ಬಿಗ್ ಬಾಸ್​ನಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ‘ಡೊಳ್ಳು’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ತಮ್ಮ ಜೀವನದಲ್ಲಾದ ಕಹಿ ಘಟನೆ ನೆನಪಿಸಿಕೊಂಡಿದ್ದಾರೆ.

‘2021ರ ಏಪ್ರಿಲ್​ನಲ್ಲಿ ಅಪ್ಪ ತೀರಿ ಹೋದರು. ಇದಾದ ನಾಲ್ಕೇ ತಿಂಗಳಿಗೆ 8 ವರ್ಷದ ರಿಲೇಶನ್​ಶಿಪ್ ಮುರಿದು ಬಿತ್ತು. ಈ ಘಟನೆ ನಡೆದ ಒಂದು ತಿಂಗಳಿಗೆ 13 ವರ್ಷದಿಂದ ಸಾಕಿದ ನಾಯಿ ಸತ್ತು ಹೋಯಿತು. ಆ ಬಳಿಕ ಹೊಟ್ಟೆಯಲ್ಲಿ ಅಲ್ಸರ್ ಆಯ್ತು. ಚೆನ್ನಾಗಿ ದುಡಿಯುತ್ತಿದ್ದೇನೆ ಎಂದುಕೊಳ್ಳುವಾಗ ಇಷ್ಟೆಲ್ಲ ಆಯ್ತು’ ಎಂದು ದುಃಖ ಹೊರಹಾಕಿದ್ದಾರೆ ಕಾರ್ತಿಕ್.

‘ಒಂದು ಪ್ರೀತಿ ಮುರಿದು ಬೀಳೋಕೆ ಇಬ್ಬರೂ ಕಾರಣರಾಗಿರುತ್ತಾರೆ. ಆದರೆ, ಈ 8 ವರ್ಷದ ರಿಲೇಶನ್​ಶಿಪ್ ಬ್ರೇಕಪ್ ಆಗೋಕೆ ಹೆಚ್ಚಿನ ಪಾಲು ನನ್ನದೆ. ನಾನು ಅವಳ ಕೆನ್ನೆಗೆ ಹೊಡೆದೆ. ಆ ವಿಷಯಕ್ಕೆ ಕ್ಷಮೆ ಕೇಳಿದ್ದೀನಿ. ಮನಸ್ಸಿಂದ ಹೇಳಿಲ್ಲ ಎಂದು ಅವಳಿಗೆ ಅನಿಸಿದೆ. ನಾನು ಮನಸಾರೆ ಕ್ಷಮೆ ಕೇಳುತ್ತೇನೆ’ ಎಂದರು ಕಾರ್ತಿಕ್.

ಇದನ್ನೂ ಓದಿ: ‘ನೀನು ಫೇಕ್​’; ಜೊತೆಯಾಗಿದ್ದ ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಮೂಡಿತು ವೈಮನಸ್ಸು

2021ರಲ್ಲಿ ತಂದೆಗೆ ಅನಾರೋಗ್ಯ ಕಾಡಿದಾಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಕಾರ್ತಿಕ್. ‘ಅಪ್ಪನ ಉಳಿಸಿಕೊಂಡು ಬರ್ತೀನಿ ಎಂದು ಅಮ್ಮನಿಗೆ ಪ್ರಾಮಿಸ್ ಮಾಡಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಅಮ್ಮನಿಗೆ ಒಂಟಿತನ ಕಾಡುತ್ತದೆ’ ಎಂದಿದ್ದಾರೆ ಕಾರ್ತಿಕ್. ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ