ಬಿಗ್ ಬಾಸ್ ವಿನ್ನರ್​ ಕಾರ್ತಿಕ್​ಗೆ ಇರೋ ಕ್ರೇಜ್ ಎಂಥದ್ದು? ಈ ವಿಡಿಯೋನೆ ಸಾಕ್ಷಿ

ಕಾರ್ತಿಕ್ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದಾರೆ. ಅವರು ಬರುತ್ತಿದ್ದಂತೆ ಫ್ಯಾನ್ಸ್ ಮುತ್ತಿಕೊಂಡರು. ಕಾರಲ್ಲಿ ಅವರು ಬಿಗ್ ಬಾಸ್ ಕಪ್ ಕೂಡ ತೆಗೆದುಕೊಂಡು ಬಂದಿದ್ದರು. ಆ ಕಪ್ನ ಎತ್ತಿ ಜನರ ಕಡೆ ಪ್ರದರ್ಶಿಸಿದ್ದಾರೆ. ಕೆಲವರು ಆ ಕಪ್ನ ಮುಟ್ಟುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಬಿಗ್ ಬಾಸ್ ವಿನ್ನರ್​ ಕಾರ್ತಿಕ್​ಗೆ ಇರೋ ಕ್ರೇಜ್ ಎಂಥದ್ದು? ಈ ವಿಡಿಯೋನೆ ಸಾಕ್ಷಿ
ಕಾರ್ತಿಕ್

Updated on: Feb 08, 2024 | 12:49 PM

‘ಬಿಗ್ ಬಾಸ್’ (Bigg Boss) ಮನೆ ಒಳಗೆ ಹೋಗಿ ಹೈಲೈಟ್ ಆದರೆ ಅವರಿಗೆ ಸಿಗೋ ಜನಪ್ರಿಯತೆ ತುಂಬಾನೇ ದೊಡ್ಡದು. ಯಾರೂ ಊಹಿಸಿಕೊಳ್ಳದ ರೀತಿಯಲ್ಲಿ ಅಭಿಮಾನಿ ಬಳಗ ಸೃಷ್ಟಿ ಆಗುತ್ತದೆ. ಕಾರ್ತಿಕ್ ಮಹೇಶ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ವಿನ್ ಆದ ಬಳಿಕ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರ ಬಗ್ಗೆ ಇರೋ ಕ್ರೇಜ್ ಸದ್ಯಕ್ಕಂತೂ ಕಡಿಮೆ ಆಗುವಂಥದ್ದಲ್ಲ. ಇದಕ್ಕೆ ಹೊಸ ವಿಡಿಯೋ ಸಾಕ್ಷಿ ಸಿಕ್ಕಿದೆ. ಇದನ್ನು ಕಾರ್ತಿಕ್ ಅವರೇ ಶೇರ್ ಮಾಡಿಕೊಂಡಿದ್ದಾರೆ.

ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆಡಿ ಗಮನ ಸೆಳೆದರು. ಅವರು 2.92 ಕೋಟಿ ವೋಟ್ ಪಡೆದು ವಿನ್ನರ್ ಆದರು. ಅವರ ಇನ್​ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಈಗ ಅವರ ಇನ್​ಸ್ಟಾಗ್ರಾಮ್ ಹಿಂಬಾಲಕರ ಸಂಖ್ಯೆ ಐದು ಲಕ್ಷ ಸಮೀಪಿಸಿದೆ. ಅವರು ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದ ವಿಡಿಯೋನ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರ್ತಿಕ್ ಮಾಡಿರೋ ಟ್ವೀಟ್..

ಚಾಮುಂಡಿ ಬೆಟ್ಟಕ್ಕೆ ಕಾರಿನಲ್ಲಿ ಆಗಮಿಸಿದ್ದಾರೆ ಕಾರ್ತಿಕ್. ಅವರು ಆಗಮಿಸುತ್ತಿದ್ದಂತೆ ಜನರು ಮುತ್ತಿಕೊಂಡರು. ಕಾರಲ್ಲಿ ಅವರು ಬಿಗ್ ಬಾಸ್ ಕಪ್​ ಕೂಡ ತೆಗೆದುಕೊಂಡು ಬಂದಿದ್ದರು. ಆ ಕಪ್​ನ ಎತ್ತಿ ಜನರ ಕಡೆ ತೋರಿಸಿದ್ದಾರೆ. ಕೆಲವರು ಆ ಕಪ್​ನ ಮುಟ್ಟುವ ಪ್ರಯತ್ನ ಮಾಡಿದ್ದಾರೆ. ನಂತರ ಅವರು ದೇವರ ದರ್ಶನ ಪಡೆದು ಹಿಂದಿರುಗಿದ್ದಾರೆ. ಆಗಲೂ ಜನರು ಮುತ್ತಿಕೊಂಡಿದ್ದಾರೆ. ಅಭಿಮಾನಿಗಳ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಕಾರ್ತಿಕ್​ನ ಅಪ್ಪಿ ಅಭಿನಂದನೆ ತಿಳಿಸಿದ ಶ್ರೀಮುರಳಿ

‘ಕಾರ್ತಿಕ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಯ ಕೃಪೆ ಮತ್ತು ಅಭಿಮಾನಿ ದೇವರುಗಳ ಕೃಪೆ ಪಡೆದ ಸಂತಸದ ಕ್ಷಣ’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ. ಕಾರ್ತಿಕ್ ಅವರು ಕಿರುತೆರೆ ಹಾಗೂ ಹಿರಿತೆರೆ ಮೂಲಕ ಫೇಮಸ್ ಆದವರು. ಅವರು ರಾಷ್ಟ್ರ ಪ್ರಶಸ್ತಿ ವಿಜೇತ ‘ಡೊಳ್ಳು’ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಬಿಗ್ ಬಾಸ್ ವಿನ್ ಆದ ಬಳಿಕ ಹಲವು ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us