ಮೊದಲ ಮಗುವಿನ ನಿರೀಕ್ಷೆಯಲ್ಲಿ ಕವಿತಾ ಗೌಡ-ಚಂದನ್​; ಸಿಹಿ ಸುದ್ದಿ ನೀಡಿದ ಜೋಡಿ

|

Updated on: May 05, 2024 | 6:27 PM

ನಟಿ ಕವಿತಾ ಗೌಡ ಹಾಗೂ ಚಂದನ್​ ಕುಮಾರ್​ ದಂಪತಿಯ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವುದಾಗಿ ಈ ದಂಪತಿ ತಿಳಿಸಿದ್ದಾರೆ. ಈ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಚಂದನ್​ ಕುಮಾರ್​ ಮತ್ತು ಕವಿತಾ ಗೌಡ ಅವರು ಜನಪ್ರಿಯತೆ ಹೊಂದಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕವಿತಾ ಗೌಡ-ಚಂದನ್​; ಸಿಹಿ ಸುದ್ದಿ ನೀಡಿದ ಜೋಡಿ
ಕವಿತಾ ಗೌಡ, ಚಂದನ್​ ಕುಮಾರ್​
Follow us on

ಕಿರುತೆರೆಯ ಖ್ಯಾತ ನಟಿ ಕವಿತಾ ಗೌಡ (Kavitha Gowda) ಅವರು ಇಂದು (ಮೇ 5) ಸಿಹಿ ಸುದ್ದಿ ನೀಡಿದ್ದಾರೆ. ಪತಿ ಚಂದನ್​ ಕುಮಾರ್​ ಜೊತೆ ಇರುವ ಹೊಸ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ತಾವು ಪ್ರಗ್ನೆಂಟ್​ (Kavitha Gowda Pregnant) ಎಂಬುದನ್ನು ಅವರು ಖಚಿತಪಡಿಸಿದ್ದಾರೆ. ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಕವಿತಾ ಗೌಡ ಮತ್ತು ಚಂದನ್​ ಕುಮಾರ್ (Chandan Kumar)​ ದಂಪತಿಗೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಸಿನಿಮಾಗಳ ಮೂಲಕ ಚಂದನ್​ ಕುಮಾರ್​ ಮತ್ತು ಕವಿತಾ ಗೌಡ ಅವರು ಜನಪ್ರಿಯತೆ ಪಡೆದಿದ್ದಾರೆ.

ಕವಿತಾ ಗೌಡ ಅವರು 2013ರಿಂದಲೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಸೀರಿಯಲ್​ಗಳಲ್ಲೂ ಅವರು ನಟಿಸಿದ್ದಾರೆ. ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿಯಿಂದ ಅವರಿಗೆ ಹೆಚ್ಚು ಖ್ಯಾತಿ ಸಿಕ್ಕಿತು. ‘ಬಿಗ್​ ಬಾಸ್​ ಕನ್ನಡ ಸೀಸನ್​ 6’ ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಮೂಲಕ ಇನ್ನಷ್ಟು ಫೇಮಸ್​ ಆದರು. 2021ರಲ್ಲಿ ಅವರು ಚಂದನ್​ ಕುಮಾರ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಇದನ್ನೂ ಓದಿ: ಪ್ರೆಗ್ನೆಂಟ್​ ಎಂದು ಗಾಸಿಪ್​ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಪರಿಣೀತಿ ಚೋಪ್ರಾ

ಚಂದನ್​ ಕುಮಾರ್​ ಕೂಡ ಹಲವು ಸೀರಿಯಲ್​ಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಕವಿತಾ ಗೌಡ ಮತ್ತು ಚಂದನ್​ ಕುಮಾರ್​ ಪರಸ್ಪರ ಪ್ರೀತಿಸಿ ಮದುವೆ ಆದರು. ನಟನೆ ಮಾತ್ರವಲ್ಲದೇ ಹೋಟೆಲ್​ ಬಿಸ್ನೆಸ್​ನಲ್ಲೂ ಈ ದಂಪತಿ ತೊಡಗಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ಅವರು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಮಗುವಿನ ಆಗಮನವನ್ನು ಈ ದಂಪತಿ ಎದುರು ನೋಡುತ್ತಿದ್ದಾರೆ.

ವಿಶೇಷ ಏನೆಂದರೆ, ಚಂದನ್​ ಕುಮಾರ್​ ಮತ್ತು ಕವಿತಾ ಗೌಡ ಅವರು ಶೇರ್​ ಮಾಡಿಕೊಂಡಿರುವ ಫೋಟೋವನ್ನು ಜೂಮ್​ ಮಾಡಿ ನೋಡಿದರೆ ಅದರಲ್ಲಿ ಪ್ರೆಗ್ನೆನ್ಸಿ ಸ್ಕ್ಯಾನ್​ ಕಾಪಿ ಕಾಣಿಸುತ್ತಿದೆ. ಕಿರುತೆರೆಯ ಅನೇಕ ಸೆಲೆಬ್ರಿಟಿಗಳು ಈ ಪೋಸ್ಟ್​ಗೆ ಕಮೆಂಟ್​ ಮಾಡುವ ಮೂಲಕ ಅಭಿನಂದನೆ ತಿಳಿಸಿದ್ದಾರೆ. ನೇಹಾ ಗೌಡ, ಗೀತಾ ಭಾರತಿ ಭಟ್​, ವಿನಯ್​ ಗೌಡ, ಶ್ವೇತಾ ಚಂಗಪ್ಪ ಮುಂತಾದವರು ವಿಶ್​ ಮಾಡಿದ್ದಾರೆ. ಪ್ರಗ್ನೆಂಟ್​ ಆಗಿರುವುದರಿಂದ ಕವಿತಾ ಕೌಡ ಅವರು ಒಂದಷ್ಟು ಸಮಯ ಬಣ್ಣದ ಲೋಕದಿಂದ ಬ್ರೇಕ್​ ಪಡೆಯಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.