ಜೀ ಕನ್ನಡದಲ್ಲಿ ‘ಮಹಾನಟಿ’ (Mahanati) ರಿಯಾಲಿಟಿ ಶೋ ಪ್ರಸಾರ ಕಾಣುತ್ತಿದೆ. ಅನೇಕ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಅನುಶ್ರೀ ಅವರು ನಿರೂಪಣೆ ಮಾಡುತ್ತಿದ್ದಾರೆ. ಪ್ರೇಮಾ, ರಮೇಶ್ ಅರವಿಂದ್, ನಿಶ್ವಿಕಾ ನಾಯ್ಡು ಹಾಗೂ ತರುಣ್ ಸುಧೀರ್ ಅವರು ಈ ಕಾರ್ಯಕ್ರಮದ ಜಡ್ಜ್ ಆಗಿದ್ದಾರೆ. ಈ ವೇದಿಕೆ ಮೇಲೆ ಆಗಮಿಸಿರೋ ಆಶಿಕಾ ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಕಿಚ್ಚ ಸುದೀಪ್ ಆಲ್ ದಿ ಬೆಸ್ಟ್ ಹೇಳಿದ್ದರು. ಅವರನ್ನು ಧ್ವನಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಈ ಆಡಿಯೋನ ಪ್ಲೇ ಮಾಡಲಾಗಿದೆ. ಇದರ ಹಿನ್ನೆಲೆ ಬಗ್ಗೆ ಇಲ್ಲಿದೆ ವಿವರ.
‘ನಾನು ನಿಮ್ಮ ವಾಯ್ಸ್ ಕೇಳಿದ್ದೇನೆ, ಡಬ್ಬಿಂಗ್ ನೋಡಿದ್ದೇನೆ. ದಿಗ್ವಿಜಯ ಜೊತೆಗಿನ ಸಂದರ್ಶನವನ್ನು ನೋಡಿದ್ದೇನೆ. ಚೆನ್ನಾಗಿ ಮಾಡಿದ್ದೀರಿ. ಆಲ್ ದಿ ಬೆಸ್ಟ್’ ಎಂದು ಕಿಚ್ಚ ಸುದೀಪ್ ಅವರು ಈ ಮೊದಲು ಆಶಿಕಾಗೆ ಹೇಳಿದ್ದರು. ಇದನ್ನು ವೇದಿಕೆ ಮೇಲೆ ಪ್ಲೇ ಮಾಡಲಾಗಿದೆ. ಇದನ್ನು ಕೇಳಿ ಆಶಿಕಾ ಭಾವುಕರಾದರು. ಅಂದಹಾಗೆ, ಆಶಿಕಾ ಅವರು ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಬರೋ ಜಾಕ್ವೆಲಿನ್ ಪಾತ್ರಕ್ಕೆ ಧ್ವನಿ ಆಗಿದ್ದರು. ಆ ಮೂಲಕ ಫೇಮಸ್ ಆದರು.
ಇದನ್ನೂ ಓದಿ: ದರ್ಶನ್, ಸುದೀಪ್, ಯಶ್ ಯಾರೇ ಆಗ್ಲಿ, ಸಿನಿಮಾ ಇಂಡಸ್ಟ್ರಿನ ಮೇಲಕ್ಕೆ ತರಬೇಕು; ಸ್ಟಾರ್ ನಟನ ಹೇಳಿಕೆ
‘ನನಗೆ ಸುದೀಪ್ ಅಂದ್ರೆ ಬಹಳ ಇಷ್ಟ. ವಿಕ್ರಾಂತ್ ರೋಣ ಡಬ್ಬಿಂಗ್ ಆಯ್ತು. ಅವರನ್ನು ಭೇಟಿ ಮಾಡಬೇಕು ಎಂದುಕೊಂಡೆ. ಕೊನೆಗೂ ಭೇಟಿ ಮಾಡಿದೆ. ಅವರನ್ನು ನೋಡಿ ಕಾಲಿಗೆ ಬಿದ್ದೆ. ಹಾಗೆ ಕಾಲಿಗೆ ಬೀಳಬಾರದು ಎಂದರು. ಆ ಬಳಿಕ ಹಗ್ ಕೊಟ್ಟು, ಫೋಟೋ ಕೊಟ್ಟರು. ನಿಮ್ಮ ಜೊತೆ ಸಿನಿಮಾ ಮಾಡಬೇಕು ಎನ್ನುವ ಆಸೆ ಇದೆ’ ಎಂದರು ಆಶಿಕಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Mon, 3 June 24