‘ವೈಲ್ಡ್ ಕಾರ್ಡ್​ನವರಿಗೆ ಇಂಥ ಸ್ವಾಗತ ಕೊಟ್ಟಿದ್ದು ಇದೇ ಮೊದಲು’; ಪವಿಗೆ ಸುದೀಪ್ ಕ್ಲಾಸ್

| Updated By: ಮದನ್​ ಕುಮಾರ್​

Updated on: Dec 03, 2023 | 2:20 PM

ವೈಲ್ಡ್ ಕಾರ್ಡ್​ನವರಿಗೆ ಭವ್ಯ ಸ್ವಾಗತ ಸಿಗುತ್ತದೆ. ಆದರೆ, ಈ ಬಾರಿ ವೈಲ್ಡ್ ಕಾರ್ಡ್​ ಮೂಲಕ ಬಂದ ಪವಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ಬಿಗ್ ಬಾಸ್ ನಿಯಮ ಮೀರಿದ್ದು ಇದಕ್ಕೆ ಕಾರಣ.

‘ವೈಲ್ಡ್ ಕಾರ್ಡ್​ನವರಿಗೆ ಇಂಥ ಸ್ವಾಗತ ಕೊಟ್ಟಿದ್ದು ಇದೇ ಮೊದಲು’; ಪವಿಗೆ ಸುದೀಪ್ ಕ್ಲಾಸ್
Follow us on

ವೈಲ್ಡ್ ಕಾರ್ಡ್ ಮೂಲಕ ಒಳಗೆ ಬಂದವರಿಗೆ ಎಲ್ಲದೂ ಹೊಸದೇ ಆಗಿರುತ್ತದೆ. ‘ಬಿಗ್ ಬಾಸ್’ (Bigg Boss Kannada) ನೋಡಿ ಬಂದಿದ್ದರೂ ಒಳಗಿನ ರಾಜಕೀಯ, ವಾಸ್ತವ ಬೇರೆಯದೇ ಇರುತ್ತದೆ. ಅಲ್ಲಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕು. ಹೀಗಾಗಿ, ಅವರನ್ನು ಹೊಸ ಸ್ಪರ್ಧಿಗಳು ಎಂದೇ ಟ್ರೀಟ್ ಮಾಡಲಾಗುತ್ತದೆ. ಮೊದಲ ವಾರ ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ. ಸುದೀಪ್ (Kichcha Sudeep) ಅವರು ಕೂಡ ಅವರಿಗೆ ಪ್ರೀತಿಯಿಂದ ಸ್ವಾಗತ ಕೋರುತ್ತಾರೆ. ಆದರೆ, ಈ ವಾರ ಆಗಿದ್ದೇ ಬೇರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಪವಿ ಪೂವಪ್ಪಗೆ (Pavi Poovappa) ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ. ‘ವೈಲ್ಡ್ ಕಾರ್ಡ್ ಮೂಲಕ ಬಂದವರಿಗೆ ನಾನು ಇಂಥ ಸ್ವಾಗತ ನೀಡಿದ್ದು ಇದೇ ಮೊದಲು’ ಎಂದರು ಸುದೀಪ್.

ಈ ವಾರ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ಅವರು ದೊಡ್ಮನೆಗೆ ಬಂದಿದ್ದಾರೆ. ಅವರ ಎಂಟ್ರಿಯಿಂದ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ರೀತಿ ಏನೂ ಆಗಲಿಲ್ಲ. ಇನ್ನು ಪವಿ ಅವರು ಒಂದು ತಪ್ಪು ಕೆಲಸ ಮಾಡಿದ್ದರು. ಬಿಗ್ ಬಾಸ್ ನಿಯಮದ ಪ್ರಕಾರ ಹೊರಗಿನ ವಿಚಾರವನ್ನು ಒಳಗೆ ಹೇಳುವಂತಿಲ್ಲ. ಆದರೆ, ಅವರು ಇದೇ ತಪ್ಪನ್ನು ಮಾಡಿದ್ದರು.

ಇದನ್ನೂ ಓದಿ: Bigg Boss Kannada: ವೈಲ್ಡ್ ಕಾರ್ಡ್ ಎಂಟ್ರಿ ಬಳಿಕ ಬಿಗ್ ಬಾಸ್​ನಲ್ಲಿ ಸ್ಟಾರ್ಟ್ ಆಯ್ತು ಫೈಟ್; ನೆಲಕ್ಕೆ ಬಿದ್ದ ಸಂತೋಷ್

ಬಳೆಯ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ‘ನಾನೇನು ಬಳೆ ತೊಟ್ಟಿಲ್ಲ’ ಎಂದು ಹೇಳುವ ಮೂಲಕ ವಿನಯ್ ಅವರು ‘ಬಳೆ ಬಲಹೀನತೆಯ ಸಂಕೇತ’ ಎಂಬರ್ಥದಲ್ಲಿ ಮಾತನಾಡಿದ್ದರು. ‘ನಮ್ಮ ಫ್ಯಾಮಿಲಿಗೆ ಥ್ರೆಟ್ ಬಂದಿದೆ’ ಎಂದು ವಿನಯ್ ಪತ್ನಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ವಿಚಾರವನ್ನು ವಿನಯ್ ಬಳಿ ಪವಿ ಹೇಳಿದ್ದಾರೆ. ಹೊರಗೆ ಯಾರ ಮೇಲೆ ಯಾವ ರೀತಿಯ ಅಭಿಪ್ರಾಯ ಇದೆ ಎಂಬುದನ್ನು ಸ್ನೇಹಿತ್, ವಿನಯ್ ಹಾಗೂ ಮೈಕಲ್ ಕೇಳುತ್ತಿದ್ದರು. ಈ ವೇಳೆ ಬಳೆ ವಿವಾದದ ಬಗ್ಗೆ ಪವಿ ಹೇಳಿದ್ದಾರೆ. ಇದರಿಂದ ವಿನಯ್ ಅಪ್ಸೆಟ್ ಆದರು. ಕನ್​ಫೆಷನ್​ರೂಂಗೆ ಹೋಗಿ ಅವರು ಕಣ್ಣೀರು ಹಾಕಿದ್ದರು. ಈ ವಿಚಾರವಾಗಿ ಸುದೀಪ್ ಅವರು ಪವಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಕಾರಲ್ಲಿ ದೊಡ್ಮನೆಗೆ ಎಂಟ್ರಿ’; ವೈಲ್ಡ್ ಕಾರ್ಡ್​ಗೆ ಬಿಗ್ ಬಾಸ್​ ಮನೆಯಲ್ಲಿ ಹಲ್​ಚಲ್

ಪವಿಗೆ ಸುದೀಪ್ ಒಂದಷ್ಟು ಪ್ರಶ್ನೆ ಕೇಳಿದರು. ನಾಲ್ಕನೇ ವಾರ ಎಲಿಮಿನೇಟ್ ಆದವರು ಯಾರು? ಎರಡನೇ ವಾರದ ಕ್ಯಾಪ್ಟನ್​ ಯಾರು ಎಂಬಿತ್ಯಾದಿ ಪ್ರಶ್ನೆ ಮುಂದಿಟ್ಟರು. ಆದರೆ, ಪವಿಗೆ ಉತ್ತರ ನೀಡೋಕೆ ಸಾಧ್ಯವೇ ಆಗಿಲ್ಲ. ‘ಒಂದೂ ಎಪಿಸೋಡ್ ನೋಡದೇ ಈ ರೀತಿ ಮಾತನಾಡುವುದು ಸರಿ ಅಲ್ಲ. ಯಾವುದೋ ಟ್ರೋಲ್ ಪೇಜ್ ನೋಡಿ ಹೇಗೆ ಈ ರೀತಿ ಹೇಳಿದ್ದೀರಿ. ವಿನಯ್ ಅವರ ಕುಟುಂಬವನ್ನು ನೀವು ಭೇಟಿ ಮಾಡಿದ್ರಾ? ಇಲ್ಲ ಅಲ್ಲವೇ? ವೇಗವಾಗಿ ಹೋಗುತ್ತಿರುವ ವಾಹನಕ್ಕೆ ಹಂಪ್ ಬಂದರೆ ಅದು ದಾಟಿ ಹೋಗಬಹುದು. ನೀವು ಇಟ್ಟಿದ್ದು ಹಂಪ್ ಅಲ್ಲ, ಗೋಡೆ. ಹೊರಗಿನ ವಿಚಾರವನ್ನು ಒಳಗೆ ಹೇಳಬಾರದು ಎಂಬುದು ನಿಯಮ’ ಎಂದರು ಸುದೀಪ್. ತಮ್ಮ ತಪ್ಪನ್ನು ತಿದ್ದಿಕೊಳ್ಳುವುದಾಗಿ ಪವಿ ಹೇಳಿದರು.

ವಿನಯ್ ಬಳಿ ಮಾತನಾಡುತ್ತ, ನಮ್ಮನ್ನು ನಂಬಿ ಎಂದರು ಸುದೀಪ್. ಇದಕ್ಕೆ ವಿನಯ್ ತಲೆ ಆಡಿಸಿದರು. ಶನಿವಾರ (ಡಿಸೆಂಬರ್ 2) ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ಪ್ರಸಾರ ಆಗಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.