‘ಬೇಕಂತಲೇ ಹೀಗೆ ಮಾಡಿದೆ’: ಊಟದ ವಿಚಾರದಲ್ಲಿ ತಾರತಮ್ಯ ಮಾಡಿ ಸಮರ್ಥಿಸಿಕೊಂಡ್ರಾ ಸಂಗೀತಾ?
ಸಂಗೀತಾ ಶೃಂಗೇರಿ ಮಾಡಿದ ತಾರತಮ್ಯ ಕೆಲವರಿಗೆ ಇಷ್ಟ ಆಗಿಲ್ಲ. ಅದನ್ನು ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಪ್ರಶ್ನೆ ಮಾಡಿದ್ದಾರೆ. ‘ನಾನು ಬೇಕಂತಲೇ ಹೀಗೆ ಮಾಡಿದ್ದೇನೆ’ ಎಂದು ಸಂಗೀತಾ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಆಪ್ತ ಸ್ನೇಹಿತ ಕಾರ್ತಿಕ್ ಮಹೇಶ್ ಕೂಡ ಸಂಗೀತಾಗೆ ಬೆಂಬಲ ನೀಡಿಲ್ಲ.

ಹಲವು ಕಾರಣಗಳಿಂದ ಸಂಗೀತಾ ಶೃಂಗೇರಿ (Sangeetha Sringeri) ಅವರು ಬಿಗ್ ಬಾಸ್ ಮನೆಯಲ್ಲಿ ಹೈಲೈಟ್ ಆಗಿದ್ದಾರೆ. ತಮಗೆ ಅನಿಸಿದ್ದನ್ನು ಅವರು ನೇರವಾಗಿ ಹೇಳುತ್ತಾರೆ. ತಮಗೆ ಸರಿ ಎನಿಸಿದ ರೀತಿಯಲ್ಲಿ ಅವರು ನಡೆದುಕೊಳ್ಳುತ್ತಾರೆ. ಅದೇ ಕಾರಣಕ್ಕಾಗಿ ಅವರು ಟ್ರೋಲ್ ಆಗಿದ್ದುಂಟು. ಕೆಲವೊಮ್ಮೆ ಅವರು ಮಾಡಿದ ಕೆಲಸಗಳು ಸಿಕ್ಕಾಪಟ್ಟೆ ಟೀಕೆಗೆ ಒಳಗಾಗಿದ್ದುಂಟು. ಈಗ ಊಟದ ವಿಚಾರದಲ್ಲಿ ಸಂಗೀತಾ ಶೃಂಗೇರಿ ವಿಲನ್ ಆಗಿದ್ದಾರೆ. ವರ್ತೂರು ಸಂತೋಷ್ (Tukali Santosh) ಮತ್ತು ತುಕಾಲಿ ಸಂತೋಷ್ ಅವರಿಗೆ ಸಂಗೀತಾ ತಂಗಳನ್ನ ನೀಡಿದ್ದಾರೆ ಎಂಬ ವಿಚಾರವು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸಖತ್ ಚರ್ಚೆ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಊಟಕ್ಕೆ ಇತಿ-ಮಿತಿ ಇರುತ್ತದೆ. ಎಲ್ಲರೂ ಹಂಚಿಕೊಂಡು ತಿನ್ನಬೇಕು. ಕೆಲವರು ಹೆಚ್ಚು ಬಡಿಸಿಕೊಂಡರೆ ಇನ್ನುಳಿದವರಿಗೆ ಸರಿಯಾಗಿ ಊಟ ಸಿಗುವುದಿಲ್ಲ. 8ನೇ ವೀಕೆಂಡ್ನಲ್ಲಿ ಹಾಗೆಯೇ ಆಗಿದೆ. ಅನ್ನ ಮಾಡಿದ ಬಳಿಕ ಯಾರು ಬೇಗ ಬಂದು ಹಾಕಿಕೊಂಡಿದ್ದಾರೋ ಅವರಿಗೆ ಮಾತ್ರ ಬಿಸಿ ಅನ್ನ ಸಿಕ್ಕಿದೆ. ಕೊನೆಯಲ್ಲಿ ಬಂದವರಿಗೆ ತಂಗಳನ್ನವೇ ಗತಿ ಆಗಿದೆ. ಇದರಿಂದ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರಿಗೆ ಬೇಸರ ಆಗಿದೆ. ಅದನ್ನು ಅವರು ನೇರವಾಗಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್ ಮಾತನಾಡುವ ಕನ್ನಡ; ಇಲ್ಲಿದೆ ವಿಡಿಯೋ
ಬಿಸಿ ಅನ್ನವನ್ನು ಎಲ್ಲರಿಗೂ ಶೇರ್ ಮಾಡಬೇಕು ಎಂಬುದು ವರ್ತೂರು ಮತ್ತು ತುಕಾಲಿ ಅವರ ವಾದ. ಆದರೆ ಇದನ್ನು ಸಂಗೀತಾ ಒಪ್ಪಿಕೊಂಡಿಲ್ಲ. ‘ಬಿಸಿ ಅನ್ನ ಬೇಕಾದವರು ಬೇಗ ಬರಬೇಕಿತ್ತು’ ಎಂದಿದ್ದಾರೆ ಸಂಗೀತಾ. ‘ಇದು ಸರಿಯಲ್ಲ’ ಎಂದಿದ್ದಾರೆ ತುಕಾಲಿ ಸಂತೋಷ್. ಇದರಿಂದ ಕೋಪಗೊಂಡ ಸಂಗೀತಾ, ‘ಬೇಕು ಅಂತಲೇ ನಾನು ಹೀಗೆ ಮಾಡಿದ್ದೇನೆ. ಇದರಿಂದ ನನಗೆ ತುಂಬ ಖುಷಿ ಸಿಗುತ್ತದೆ’ ಎಂದು ಹೇಳಿದ್ದಾರೆ. ಈ ಮಾತು ಕೇಳಿಸಿಕೊಂಡ ತುಕಾಲಿ ಸಂತೋಷ್ ಅವರಿಗೆ ಸಖತ್ ಕೋಪ ಬಂದಿದೆ. ‘ಬಿಗ್ ಬಾಸ್ ಎಂದರೆ ನಿನ್ನ ಮನೆಯಲ್ಲ’ ಎಂದು ಜಗಳ ಮಾಡಿದ್ದಾರೆ.
ಇದನ್ನೂ ಓದಿ: ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್ ಬಾಸ್ ಸ್ಪರ್ಧಿಗಳು: ಗಳಗಳನೆ ಕಣ್ಣೀರು ಹಾಕಿದ ಸಿರಿ
ಇಷ್ಟೆಲ್ಲ ಜಗಳ ನಡೆಯುತ್ತಿರುವಾಗ ಯಾರೂ ಕೂಡ ಸಂಗೀತಾ ಅವರಿಗೆ ಬೆಂಬಲ ನೀಡಿಲ್ಲ. ಮೊದಲು ಬಂದು ಬಿಸಿ ಅನ್ನ ಬಡಿಸಿಕೊಂಡವರು ಸಹ ಸಂಗೀತಾ ಪರ ಮಾತನಾಡಿಲ್ಲ. ಅದನ್ನು ಡ್ರೋನ್ ಪ್ರತಾಪ್ ಬಳಿ ಹೇಳಿಕೊಂಡು ಸಂಗೀತಾ ಶೃಂಗೇರಿ ಕಣ್ಣೀರು ಹಾಕಿದ್ದಾರೆ. ಈ ಹಿಂದೆ ಕಾರ್ತಿಕ್ ಮಹೇಶ್ ಕೂಡ ಊಟದ ವಿಚಾರದಲ್ಲಿ ಇದೇ ರೀತಿ ಕೂಗಾಡಿದ್ದು ಸಂಗೀತಾಗೆ ಬೇಸರ ತರಿಸಿತ್ತು. ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಬಿಗ್ ಬಾಸ್ ಸಂಚಿಕೆ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.