Lakshana: ಭೂಪತಿಯ ತಮ್ಮ ಶೌರ್ಯ ವಿಲನ್ ಅನ್ನುವಷ್ಟರಲ್ಲಿ ಕಥೆಗೆ ಸಿಕ್ತು ಟ್ಟಿಸ್ಟ್

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 20, 2022 | 1:23 PM

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವಂತಹ ಉದ್ದೇಶ ಭೂಪತಿಯದ್ದಾಗಿತ್ತು. ನಕ್ಷತ್ರಳ ಜೀವಕ್ಕೆ ಇನ್ನು ಮೌರ್ಯ ಯಾವ ರೀತಿಯಲ್ಲೂ ತೊಂದರೆ ಕೊಡಬಾರದು ಅವನ ಕ್ರೌರ್ಯಕ್ಕೆ ತೆರೆ ಎಳೆಯಬೇಕು ಎಂಬ ಉದ್ದೇಶದಿಂದ ನಕ್ಷತ್ರಳ ಕಿಡ್ಯಾಪ್ ನಾಟಕವನ್ನು ಭೂಪತಿ ಮಾಡಬೇಕಾಯಿತು.

Lakshana: ಭೂಪತಿಯ ತಮ್ಮ ಶೌರ್ಯ ವಿಲನ್ ಅನ್ನುವಷ್ಟರಲ್ಲಿ ಕಥೆಗೆ ಸಿಕ್ತು ಟ್ಟಿಸ್ಟ್
Lakshana
Follow us on

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಲಕ್ಷಣ ಸಿರಿಯಲ್ ಸಕತ್ ಟ್ವಿಸ್ಟ್​ಗಳೊಂದಿಗೆ ಕುತೂಹಲದ ಹಂತ ತಲುಪಿದೆ. ಕಥಾನಾಯಕ ಭೂಪತಿಯ ದೊಡ್ಡಣ್ಣನೇ ನಕ್ಷತ್ರಳ ಪಾಲಿಗೆ ವೈರಿಯಾಗಿದ್ದಾನೆ ಅನ್ನುವಷ್ಟರಲ್ಲಿ ಕಥೆಗೆ ಬೇರೆನೇ ತಿರುವು ಸಿಕ್ಕಿದೆ. ನಕ್ಷತ್ರಳ ಜೀವಕ್ಕೆ ಪದೇ ಪದೇ ಕಂಟಕವಾಗುತ್ತಿರುವುದು ಭೂಪತಿಯ ಕಿರಿಯ ಸಹೋದರ ಮೌರ್ಯನೇ ಅಂತಾ ಮನೆಯವರಿಗೆಲ್ಲರಿಗೂ ಗೊತ್ತಾಗಿತ್ತು ಮತ್ತು ಅವನಿಗೆ ಪೋಲಿಸರಿಗೆ ಸರೆಂಡರ್ ಆಗುವಂತೆ ಶಕುಂತಳಾ ದೇವಿ ಹೇಳಿದ್ದಾಳೆ, ಅವರ ಮಾತನ್ನು ಕೇಳದೆ ಕಣ್ತಪ್ಪಿಸಿ ಓಡಿ ಹೋಗ್ತಾನೆ. ಈ ಮೌರ್ಯನಿಗೆ ನಕ್ಷತ್ರಳಿಗೆ ತೊಂದರೆ ಕೊಡಲು ಸಹಾಯಸ್ತ ನೀಡಿದ್ದು ಶೌರ್ಯ.

ತನ್ನ ತಪ್ಪಿನ ಅರಿವಾಗಿ ಶೌರ್ಯ ಭೂಪತಿಯ ಬಳಿ ಕ್ಷಮೆ ಕೇಳಲು ಬಂದಾಗ ಅಲ್ಲಿ ನಡೆದಿದ್ದೇ ಒಂದು ದೊಡ್ಡ ಡ್ರಾಮ. ಮನೆಯವರೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗುವ ಸಂದರ್ಭದಲ್ಲಿ ಶೌರ್ಯನೇ ನಕ್ಷತ್ರಳನ್ನು ಕಿಡ್ಯಾಪ್ ಮಾಡಿ ಮೌರ್ಯನಿಗೆ ಅವಳನ್ನು ಒಪ್ಪಿಸಲು ಹೋಗುತ್ತಾನೆ. ಮೌರ್ಯನಿಗೆ ತುಂಬಾ ಖುಷಿಯಾಗಿ, ಇವತ್ತು ನಕ್ಷತ್ರಳನ್ನು ಸಾಯಿಸಿಯೇ ಬಿಡುತ್ತೇನೆ ಎಂದು ಹೇಳುವಷ್ಟರಲ್ಲಿ ಅಲ್ಲಿಗೆ ಭೂಪತಿ ಕೂಡಾ ಬರುತ್ತಾನೆ.

ಶೌರ್ಯ ಅಣ್ಣ ಮಾತ್ರ ನನಗೆ ಸಹಾಯ ಮಾಡುವವನು ಅಂದುಕೊಂಡ ಮೌರ್ಯನಿಗೆ ಭೂಪತಿ ಒಂದು ಶಾಕಿಂಗ್ ಸ್ಟೋರಿನಾ ಹೇಳುತ್ತಾನೆ. ಅದು ಏನಂದ್ರೆ ನಕ್ಷತ್ರಳನ್ನು ಕಿಡ್ಯಾಪ್ ಮಾಡಬೇಕು ಎಂದು ಶೌರ್ಯನಿಗೆ ಉಪಾಯ ಹೇಳಿಕೊಟ್ಟಿದ್ದೇ ಭೂಪತಿ. ಮನೆಯವರ ಮುಂದೆ ಜಗಳ ಮಾಡಿ ಮನೆ ಬಿಟ್ಟು ಹೋಗುವಂತೆ ನಾಟಕ ಮಾಡು ಆಗ ನಿನ್ನನ್ನು ತಡೆಯಲು ನಕ್ಷತ್ರ ಕಂಡಿತವಾಗಿಯು ಬರುತ್ತಾಳೆ. ಅವಳು ನಿನ್ನ ಕಾರ್ ಬಳಿ ಬರುವಂತಹ ಸಂದರ್ಭದಲ್ಲಿ ಆಕೆಯ ಕೈಯನ್ನು ಕಟ್ಟಿ ಕಾರ್‌ನಲ್ಲಿ ಕಿಡ್ಯಾಪ್ ಮಾಡಿಕೊಂಡು ಹೋಗು. ನೀನು ಯಾವ ಸ್ಥಳಕ್ಕೆ ಹೋಗುತ್ತೀಯಾ ಸ್ಥಳದ ಲೈವ್ ಲೊಕೇಷನ್ ನನಗೆ ಶೇರ್ ಮಾಡುತ್ತಾ ಇರಬೇಕು. ಮೌರ್ಯ ಅಲ್ಲಿಗೆ ಖಂಡಿತವಾಗಿಯು ಬರುತ್ತಾನೆ. ಆಗ ಅವನನ್ನು ಸುಲಭವಾಗಿ ಹಿಡಿಯಬಹುದು ಅಂತಾ ಮುಂಚೆನೇ ಭೂಪತಿ ಪ್ಲಾನ್ ಮಾಡಿರುತ್ತಾನೆ. ಈ ಪ್ಲಾನ್ ಪ್ರಕಾರ ಎಲ್ಲವೂ ಸರಿಯಾಗಿ ನಡೆದುಕೊಂಡು ಬಂತು. ಇದನ್ನು ಕೇಳಿದ ಮೌರ್ಯನಿಗೆ ತುಂಬಾ ಶಾಕ್ ಆಗುತ್ತದೆ.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಅನ್ನುವಂತಹ ಉದ್ದೇಶ ಭೂಪತಿಯದ್ದಾಗಿತ್ತು. ನಕ್ಷತ್ರಳ ಜೀವಕ್ಕೆ ಇನ್ನು ಮೌರ್ಯ ಯಾವ ರೀತಿಯಲ್ಲೂ ತೊಂದರೆ ಕೊಡಬಾರದು ಅವನ ಕ್ರೌರ್ಯಕ್ಕೆ ತೆರೆ ಎಳೆಯಬೇಕು ಎಂಬ ಉದ್ದೇಶದಿಂದ ನಕ್ಷತ್ರಳ ಕಿಡ್ಯಾಪ್ ನಾಟಕವನ್ನು ಭೂಪತಿ ಮಾಡಬೇಕಾಯಿತು. ಇದಕ್ಕೆ ಸಾಥ್ ನೀಡಿದವನೇ ಶೌರ್ಯ. ಇದು ಶೌರ್ಯನ ತಪ್ಪು ಕೆಲಸ ಅಲ್ಲಾ ಭೂಪತಿಯೇ ಮಾಡಿದ್ದು ಎಂದು ಎಲ್ಲರಿಗೂ ಗೊತ್ತಾಗಿದೆ. ಭೂಪತಿಯ ಈ ಪ್ಲಾನ್‌ನಿಂದ ಶಾಕ್ ಆದ ಮೌರ್ಯನ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ.

ಮಾಲಾಶ್ರೀ ಅಂಚನ್ 

Published On - 1:21 pm, Tue, 20 September 22